Breaking News

ಮಲ್ಲಾಪುರದಲ್ಲಿ ಗಮನಸೆಳೆದ ಶತಾಯುಷಿ ಹಾಗೂ ವೃದ್ಧ ದಂಪತಿ ವೋಟಿಂಗ್

A centenarian and an elderly couple were highlighted in Mallapur for voting

ಮನೆಯಲ್ಲೇ ಖುಷಿಯಿಂದ ಮತ ಚಲಾಯಿಸಿದ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರು

ಗಂಗಾವತಿ : ಲೋಕಸಭಾ ಚುನಾವಣೆ ಅಂಗವಾಗಿ ಮನೆ- ಮನೆಗೆ ಭೇಟಿ ನೀಡಿದ ಚುನಾವಣೆ ಅಧಿಕಾರಿಗಳನ್ನು 85 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ವಿಶೇಷಚೇತನರು ಖುಷಿಯಿಂದ ಬರಮಾಡಿಕೊಂಡು ತಮ್ಮ ಮತ ಚಲಾಯಿಸಿ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ
ಕರೆ ನೀಡಿದರು.

ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಗೆ ಮನೆಯಲ್ಲೆ ಮತದಾನ ಮಾಡಲು ಚುನಾವಣೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡಿದ್ದವರು ಮನೆಯಲ್ಲೇ ಮತದಾನ ಮಾಡಿ ಖುಷಿಪಟ್ಟರು. ಹಿರಿಯ ನಾಗರಿಕರ ಕುಟುಂಬಸ್ಥರು ಕೂಡ ಭಾರತ ಚುನಾವಣೆ ಆಯೋಗದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾನ್ಯ ಜಿಲ್ಲಾಧಿಕಾರಿಗಳ ನಿಯೋಜಿತ ಚುನಾವಣೆ ಅಧಿಕಾರಿಗಳ ತಂಡ ‘ಮನೆ ಮತದಾನ ಪ್ರಕ್ರಿಯೆ ಅಚ್ಚುಕಟ್ಟಾಗಿ’ ನಡೆಸಿದರು.

‘ಪ್ರತಿ ಚುನಾವಣೆಯಲ್ಲಿ ಮತಗಟ್ಟೆಗಳಿಗೆ ತೆರಳಿ ಮತ ಹಾಕಬೇಕಿತ್ತು. ಈ ಬಾರಿ ಭಾರತ ಚುನಾವಣೆ ಆಯೋಗವು ವಿಶೇಷಚೇತನರು ಹಾಗೂ 85 ವರ್ಷ ಮೇಲ್ಪಟ್ಟವರು ಮತದಾನ ಮಾಡಲು ವಿಶೇಷ ಕಾಳಜಿ ವಹಿಸಿ, ಮನೆಯಲ್ಲೇ ಮತದಾನಕ್ಕೆ ಅವಕಾಶ ಕಲ್ಪಿಸಿರುವುದು ತುಂಬಾ ಖುಷಿ ನೀಡಿದೆ. ಎಲ್ಲ ಯುವ ಮತದಾರರು ಹಾಗೂ ಶಕ್ತರು ಮೇ 7 ರಂದು ನೇರವಾಗಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಬೇಕು’ ಎಂದು ಹಿರಿಯ ನಾಗರಿಕರು ಕರೆ ನೀಡಿದರು.

ಶತಾಯುಷಿ ಮತದಾನ : ಸಂಗಾಪುರ ಗ್ರಾಮದಲ್ಲಿ ಲಕ್ಷ್ಮೀಬಾಯಿ (87), ಕಮಲಮ್ಮ (87), ರಾಮಾಂಜನೆಮ್ಮ (86), ಗೋಪಾಲ್ ರಾವ್ (91), ಮಲ್ಲಾಪುರ ಗ್ರಾಮದಲ್ಲಿ ದ್ಯಾವಮ್ಮ ಪುರದ (94), ದಂಪತಿಗಳಾದ ಈರಪ್ಪ ಸಿನ್ನೂರ(96), ಲಕ್ಷ್ಮಮ್ಮ ಈರಪ್ಪ (89), ಶತಾಯುಷಿ ದ್ಯಾಮವ್ವ ಬೀಮಪ್ಪ(103), ಯಂಕಮ್ಮ ಗೋವಿಂದಪ್ಪ ಜನಾದ್ರಿ ಯಂಕಮ್ಮ (91) ಅವರು ಮತಚಲಾಯಿಸಿದರು.

ಇದೇ ವೇಳೆ ಮಲ್ಲಾಪುರ ಗ್ರಾಮದಲ್ಲಿ ತಾಲೂಕು ಸ್ವೀಪ್ ತಂಡದಿಂದ ಮತದಾನ ಜಾಗೃತಿ ಕಾರ್ಯಕ್ರಮವು ನಡೆಯಿತು. ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸುವಂತೆ ಮಾಹಿತಿ ನೀಡಲಾಯಿತು.

ಈ ವೇಳೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ್ ಪತ್ತಾರ್, ಚುನಾವಣಾ ಸಿಬ್ಬಂದಿಗಳಾದ ಸೆಕ್ಟರ್ ಆಫೀಸರ್ ಗಳಾದ ಪ್ರಕಾಶ ನಾಯ್ಕ್, ರಾಜಶೇಖರ, ಚುನಾವಣೆ ಸಿಬ್ಬಂದಿಗಳಾದ ಪಿಆರ್ ಓ, ಎಪಿಆರ್, ಎಎಸ್ ಐ, ಮೈಕ್ರೋ ಆಫೀಸರ್, ಬಿಎಲ್ ಓಗಳು, ತಾಲೂಕು ಐಇಸಿ ಸಂಯೋಜಕರು, ಸಂಗಾಪುರ ಹಾಗೂ ಮಲ್ಲಾಪುರ ಗ್ರಾಪಂ ಕಾರ್ಯದರ್ಶಿಗಳು, ಡಿಇಓ ಹಾಗೂ ಸಿಬ್ಬಂದಿಗಳು ಇದ್ದರು.

About Mallikarjun

Check Also

ರಾಷ್ಟ್ರೀಯ ಪಕ್ಷ ಬಿಎಸ್ಪಿಗೆ ಅವಕಾಶನೀಡಿ:ಎಂ.ಕೃಷ್ಣಮೂರ್ತಿ

ಕೊಪ್ಪಳ.ಮೇ.04: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಕ್ಕೆ ಬುದ್ಧಿ ಕಲಿಸಿ ಬಿಎಸ್ ಪಿ ಪಕ್ಷವನ್ನು ಬೆಂಬಲಿಸುವಂತೆ ಬಹುಜನ ಸಮಾಜ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.