Lakh sapling program on 14th August
*ಆಗಸ್ಟ್ 14 ರಂದು ಲಕ್ಷ ಸಸಿನೆಟ್ಟು ದೀಪ ಬೆಳಗಿಸಿ ‘ಹಸಿರು ಬೆಳಕು’ಕಾರ್ಯಕ್ರಮದ ಅಭಿಯಾನಕ್ಕೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ನೇಮಿರಾಜ್ ನಾಯ್ಕ ಚಾಲನೆ *
ಕೊಟ್ಟೂರು:ಇದೇ ಆಗಸ್ಟ್ 14 ರಂದು ಮುಂಜಾನೆ ಪ್ರತಿಯೊಬ್ಬರು ಸಸಿನೆಟ್ಟು ಅದನ್ನು ಉಳಿಸಿ ಬೆಳೆಸುವ ಪ್ರತಿಜ್ಞೆ ಪೂರ್ವಕವಾಗಿ ಸಂಜೆ ದೀಪ ಬೆಳಗಿಸಿ ಭೂಮಂಡಲದದ ಸ್ವಾಸ್ಥ್ಯ ಆರೋಗ್ಯ ಪೂರ್ಣ ನಿರ್ಮಾಣದ ಸಂಕಲ್ಪ ಮಾಡೋಣ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ನೇಮಿರಾಜ್ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗಷ್ಟ 15 ರಂದು ತಾಲೂಕು ಆಡಳಿತ ಕೊಟ್ಟೂರು ವತಿಯಿಂದ 78ನೇ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರಗಾರ ಅವಲಂಭಿತ ಕುಟುಂಬದವರಿಗೆ ಮಾಜಿ ಸೈನಿಕರಿಗೆ, ಪತ್ರಕರ್ತರಿಗೆ ಗೌರವಪೂರ್ವಕವಾಗಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
ಹಗರಿಬೊಮ್ಮನಹಳ್ಳಿ ಕ್ಷೇತ್ರಾದ್ಯಂತ 78ನೇ ಸ್ವಾತಂತ್ರೋತ್ಸವದ ಸವಿನೆನಪಿಗಾಗಿ ಲಕ್ಷ ಸಸಿನೆಟ್ಟು ದೀಪ ಬೆಳಗಿಸಿ ‘ಹಸಿರು ಬೆಳಕು’ ಉಳಿವಿನ ಪುಟ್ಟ ಸಂಕಲ್ಪ ಕಾಯಕ ಮಾಡೋಣ.
ಜೀವ ಸಂಕುಲ ಉಳಿದರೆ ಜೀವ ಉಳಿಯುತ್ತೆ, ಜೀವ ಉಳಿಯಲು ಹಸಿ ರಿನ ಆಸರೆಯ ಆಮ್ಲಜನಕ ಅತ್ಯವಶ್ಯಕ ವಾಗಿದೆ. ಹಾಗಾಗಿ ಎಲ್ಲಾರೂ ಆಗಸ್ಟ್ 14 ರ ‘ಹಸಿರೋತ್ಸವ
ಮತ್ತು ಕಾರ್ಯಕ್ರಮ ದೀಪೋತ್ಸವ ಯಶಸ್ವಿಯಾಗಲು ನಿಮ್ಮ ಪರಿಸರ ಪೂರಕ ಉತ್ಸಾಹ ಅತ್ಯವಶ್ಯಕತೆ, ಪಾಲ್ಗೊಳುವಿಕೆ ಬಹುಮುಖ್ಯ, ಹಾಗಾಗಿ ಪ್ರತಿಯೊಬ್ಬರು ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಇಂತಹ ಮಹತ್ವಾ ಕಾಂಕ್ಷೆಯ ಹಸಿರು ಉಸಿರಿನ ಬೆಳಕಿನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಹೇಳಿದರು.