Telugu Revolutionary People's Poet Struggle Gaddar Nidhana Nudinamana
ಗಂಗಾವತಿ: ಜನಸಾಮಾನ್ಯರ ಪ್ರಜಾ ಕವಿ ಹಾಗೂ ಕ್ರಾಂತಿಕಾರ ಹೋರಾಟಗಾರ ಗದ್ದರ್ ಅವರು ಶೋಷಿತರು ತುಳಿತ್ತಕೊಳಗಾದವರ ಪರವಾಗಿ ಹಾಡು ಬರೆದು ಜನರನ್ನು ಜಾಗೃತಿ ಮಾಡಿದ್ದರು. ಭೂ ರಹಿತರ ಪರವಾಗಿ ನಿತ್ಯವೂ ಹೋರಾಟ ನಡೆಸುವ ಮೂಲಕ ಗುಲಾಮಗಿರಿ ಪದ್ಧತಿ ಊಳಿಗಮಾನ್ಯ ಪದ್ಧತಿಯನ್ನು ವಿರೋಧಿಸಿದ್ದರು. ಗದ್ದರ್ ನಿಧನದಿಂದ ಬಡವರು, ದೀನದಲಿತರ ಪರ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಗದ್ದರ್ ಅವರ ನಿಕಟ ಸ್ನೇಹಿತರು ಹಾಗೂ ಹಿರಿಯ ಕಾರ್ಮಿಕ ಮುಖಂಡ ಜೆ.ಭಾರದ್ವಾಜ್ ಹೇಳಿದರು.
ಅವರು ನಗರದ ಕ್ರಾಂತಿಕೇAದ್ರದಲ್ಲಿ ಗದ್ದರ್(ಗುಮ್ಮಡಿ ವಿಠ್ಠಲ್ ರಾವ್)ನುಡಿನಮನ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಚಿತ್ರದುರ್ಗದ ಮುರುಘಾಮಠದಿಂದ ಬಸವಶ್ರೀ ಪ್ರಶಸ್ತಿ ಪಡೆದಿದ್ದ ಗದ್ದರ್ ಅವರು ರಾಯಚೂರು, ಬಳ್ಳಾರಿ ಸೇರಿದಂತೆ ಕರ್ನಾಟಕದ ಗಡಿ ಪ್ರದೇಶಗಳಲ್ಲಿಯೂ ತಮ್ಮ ಕ್ರಾಂತಿ ಗೀತೆಗಳು ಮತ್ತು ಕ್ರಾಂತಿಕಾರ ಎಡಪಂಥಿಯ ಹೋರಾಟ ಮೂಲಕ ಖ್ಯಾತರಾಗಿದ್ದರು. ಹಲವು ಸಲ ಜೈಲು ಸೇರಿ ಪೊಲೀಸರಿಂದ ಥಳಿತಕೊಳಗಾಗಿದ್ದರು. ಇವರ ನಿಧನ ಹೋರಾಟಗಾರರಿಗೆ ತುಂಬಲಾರದ ನಷ್ಟವಾಗಿದೆ ಎಂದರು.