Bhajan is a great form of devotional worship: Nagaratna
ಸಿರವಾರ :ತಾಲ್ಲೂಕಿನ ಬಲ್ಲಟಗಿ ಗ್ರಾಮದ ನೇತಾಜಿ ಹಿರಿಯ ಪ್ರಾಥಮಿಕ ಹಾಗೂ ಫ್ರೌಡಶಾಲೆಯ ರಜತ ಮಹೋತ್ಸವ ಅಂಗವಾಗಿ ತಾಲ್ಲೂಕು ಮಟ್ಟದ ಭಜನೆ ಹಾಗೂ ಕೋಲಾಟ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸ್ಪರ್ಧೆಯ ಕಾರ್ಯಕ್ರಮವನ್ನು ಬಿ, ನಾಗರತ್ನಮ್ಮ ಗಂ ತಿಮ್ಮಣ್ಣ ನಾಯಕ ರವರು ಉದ್ಘಾಟಿಸಿ ಮಾತನಾಡಿ ಅವರು
ಭಜನೆ ಆತ್ಮಕ್ಕೆ ಸುಖ, ಶಾಂತಿ, ನೆಮ್ಮದಿ ನೀಡುತ್ತದೆ. ಭಜನೆ ಇದ್ದ ಕಡೆ ವಿಭಜನೆ ಇಲ್ಲ. ಭಜನೆಯ ಮೂಲಕ ಭಗವಂತನ ಪರಿಪೂರ್ಣ ಆರಾಧನೆಯೊಂದಿಗೆ ಜೀವನದಲ್ಲಿ ಮೋಕ್ಷ ಪ್ರಾಪ್ತಿಯಾಗುತ್ತದೆ. ಭಜನೆ ಭಕ್ತಿಭಾವ ದಿಂದ ಕೂಡಿದ ಶ್ರೇಷ್ಠ ಆರಾಧನೆಯಾಗಿದೆ ಎಂದರು
ನಂತರದಲ್ಲಿ ಭಜನೆ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತ್ತು ಮಾನ್ವಿ ತಾಲ್ಲೂಕಿನ ತಡಕಲ್ ಗ್ರಾಮದ ರಾಮಲಿಂಗೇಶ್ವರ ಭಜನಾ ಮಂಡಳಿ ಸಂಗೀತ ಗಾಯನ ಗುರುರಾಜ್ ತಡಕಲ್, ಶರಣಪ್ಪ ನಾಯಕ ತಡಕಲ್, ಶರಣಪ್ಪ ಮೇಷಂಬಿ, ಸುಬ್ಬಣ್ಣ ತಡಕಲ್, ದೊಡ್ಡ ದುರ್ಗಪ್ಪ ತಡಕಲ್, ಕಾರ್ಯಕ್ರಮದಲ್ಲಿ ಡೂಲಕಸಾಥ್ ಶರಣಪ್ಪ ತಡಕಲ್ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಭಜನಾಕಲಾ ತಂಡಗಳು ಭಾಗವಹಿಸಿದ್ದು ತಡಕಲ್ ರಾಮಲಿಂಗೇಶ್ವರ ಭಜನಾ ಮಂಡಳಿ ತಂಡಕ್ಕೆ ತೃತೀಯ ಪ್ರಶಸ್ತಿ ಪತ್ರ ನೀಡುವ ಮೂಲಕ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಾಸುದೇವ ಅಗ್ನಿಹೋತ್ರಿ, ಪ್ರಕಾಶ್ ಪಾಟೀಲ್, ಮಂಜುಳಾ ಕೋಲಾರ, ಶಾರ್ಪುದ್ದೀನ್ ಪೋತ್ನಾಳ್, ಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜ, ಸಹ ಶಿಕ್ಷಿಕರಾದ ತಿಮ್ಮಣ್ಣ ನಾಯಕ, ಚನ್ನಬಸವ ನಾಯಕ, ಸೇರಿದಂತೆ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.