Gangavati: Progress review meeting of agricultural sakhiyas
ಗಂಗಾವತಿ: ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಅಖಂಡ ಗಂಗಾವತಿ ತಾಲೂಕಿನ ಕೃಷಿ ಸಖಿಯರಿಗೆ ತ್ರೈಮಾಸಿಕ ಸಭೆ ಆಯೋಜಿಸಲಾಯಿತು. ಈ ಸಭೆಯಲ್ಲಿ ಇದುವರೆಗೂ 97% ಗಂಗಾವತಿ ತಾಲೂಕು, 90% ಕಾರಟಗಿ, 88% ಕನಕಗಿರಿ ತಾಲೂಕಿನ ರೈತರ ಈಕೆವೈಸಿ ಮುಗಿದಿವೆ, ಇನ್ನು ಬಾಕಿ ಉಳಿದ ಪಿಜಿಕಲ್ ವೆರಿಪಿಕೆಶನ್, ಈಕೆ ವೈಸಿ ಪೂರ್ಣಗೊಳಿಸಲು ಕೃಷಿ ಸಖಿಯರಿಗೆ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಸಂತೋಷ್ ಪಟ್ಟದ್ಕಲ್ಲ್ ಸೂಚನೆ ನೀಡಿದ್ದಾರೆ. ಕೃಷಿ ಇಲಾಖೆಯ ಹಲವಾರು ಯೋಜನೆಗಳನ್ನು ಗ್ರಾಮೀಣ ಭಾಗದ ರೈತರ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ಕೃಷಿ ಸಖಿಯರದ್ದು. ಎಲ್ಲಾ ರೈತರು ಈಕೆವೈಸಿ ಮಾಡಿಸಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಿ ಎಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಸಂತೋಷ್ ಪಟ್ಟದ್ಕಲ್ಲ್, ಕೃಷಿ ಇಲಾಖೆಯ ಅಧಿಕಾರಿಗಳು, ಆತ್ಮ ಸಿಬ್ಬಂದಿಗಳು ಮತ್ತು ಮೂರು ತಾಲೂಕಿನ ಕೃಷಿ ಸಖಿಯರು ಉಪಸ್ಥಿತರಿದ್ದರು.