Breaking News

ಗುಡೇಕೋಟೆ: ಮಹಾಮಾತೆ ಮದರ್ ತೆರೇಸಾಜನ್ಮದಿನಾಚರಣೆ

Gudekote: Mother Teresa’s Birthday Celebration

ಜಾಹೀರಾತು

ಗುಡೇಕೋಟೆ: ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷ ವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪವಾಗಿ ಇದ್ದರು ಸಂತ ಮದರ್ ತೆರೇಸಾ ರವರು ಎಂದು ಗುಡೇಕೋಟೆ ಮದರ್ ತೆರೆಸಾ ಪಬ್ಲಿಕ್ ಸ್ಕೂಲ್ ಮತ್ತು ನವೋದಯ ರೆಸಿಡೆನ್ಸಿಯಲ್ ಕೋಚಿಂಗ್ ಸೆಂಟರ್ ಶಿಕ್ಷಕ ಹೆಚ್.ತಿಪ್ಪೇಸ್ವಾಮಿ ಹೇಳಿದರು.

ಅವರು ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಮದರ್ ತೆರೆಸಾ ಪಬ್ಲಿಕ್ ಸ್ಕೂಲ್ ಮತ್ತು ನವೋದಯ ರೆಸಿಡೆನ್ಸಿಯಲ್ ಕೋಚಿಂಗ್ ಸೆಂಟರ್ ನಲ್ಲಿ ಹಮ್ಮಿಕೊಂಡಿದ್ದ ಭುವಿಗೆ ಬಂದ ಮಹಾತಾಯಿ ಕೊಳಗೇರಿಯ ಸಂತ ಮದರ್ ತೆರೆಸಾ ಅವರ ಜನ್ಮದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಪ್ರೀತಿ ಹಾಗೂ ಸೇವೆಯ ಮೂಲಕ ಜಗತ್ತಿನಾದ್ಯಂತ ಕೋಟ್ಯಾಂತರ ಹೃದಯಗಳನ್ನು ಗೆದ್ದ ಜಗತ್ತಿನ ಮಹಾತಾಯಿ ಸಂತ ಮದರ್ ತೆರೇಸಾರವರ ಚಿಂತನೆ ಹಾಗೂ ಆದರ್ಶಗಳನ್ನು ಇಂದಿನ ಯುವಪೀಳಿಗೆಯ ಮಧ್ಯೆ ಕೊಂಡೊಯ್ಯವ ಸಲುವಾಗಿ ನಮ್ಮ ಶಾಲೆಯಲ್ಲಿ ಹಲವಾರು ಕಾರ್ಯಕ್ರಮಗಳ ಮೂಲಕ ಸರ್ವ ಧರ್ಮದ ಜನತೆಯ ಪ್ರೀತಿ ವಿಶ್ವಾಸಗಳನ್ನು ಗಳಿಸಿದೆ. ಮಾತ್ರವಲ್ಲದೆ ಮಾನವೀಯ ಹೃದಯಗಳನ್ನೊಳಗೊಂಡ ಜಾತ್ಯಾತೀತರ ಹಾಗೂ ಸೌಹಾರ್ದ ಕೂಟವಾಗಿ ಹೊರಹೊಮ್ಮಿದೆ ಹಾಗಾಗಿ ಮುದ್ದಿನ ವಿದ್ಯಾರ್ಥಿಗಳು ಸಂತ ಮದರ್ ತೆರೆಸಾ ಅವರ ಆದರ್ಶಗಳನ್ನು ತಮ್ಮ ಜೀವನಗಳಲ್ಲಿ ಅಳವಡಿಸಿಕೊಂಡು ಎಲ್ಲಾ ಧರ್ಮದವರನ್ನು ಒಂದೇ ಎಂದು ಭಾವಿಸಿ ಸಮ ಸಮಾಜವನ್ನು ಕಟ್ಟುವಂತವರು ನೀವಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮದರ್ ತೆರೆಸಾ ಪಬ್ಲಿಕ್ ಸ್ಕೂಲ್ ಮತ್ತು ನವೋದಯ ರೆಸಿಡೆನ್ಸಿಯಲ್ ಕೋಚಿಂಗ್ ಸೆಂಟರ್ ಶಿಕ್ಷಕರಾದ ಜಯಲಕ್ಷ್ಮಿ, ಪರ್ವೀನ್, ಅನಿತಾ, ನಾಗರತ್ನಮ್ಮ, ಅರ್ಪಿತಾ, ಸುಮಾ, ಶರಣಮ್ಮ, ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.

About Mallikarjun

Check Also

ದೇಶದಲ್ಲಿಅಧಿಕಾರಶಾಹಿ ಪದ್ಧತಿನಿರ್ಮೂಲವಾಗಬೇಕು : ಡಾ.ಕೆ ಎಸ್ ಜನಾರ್ದನ್

Bureaucracy should be eradicated in the country: Dr. KS Janardhan ಕೊಟ್ಟೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ  …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.