Breaking News

ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪೋತ್ನಾಳ ಜನರಿಗೆ ಪ್ರಾಣ ಸಂಕಟ.

The people of Potna are suffering due to the negligence of JESCOM officials.

ಜಾಹೀರಾತು

ಮಾನವಿ : ತಾಲೂಕಿನ ಪೋತ್ನಾಳ ಗ್ರಾಮದಲ್ಲಿ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದಲೇ
ವಿದ್ಯುತ್ ಪರಿವರ್ತಕ ಬಳಿ ಬೆಳೆದಿದ್ದ ಹುಲ್ಲು ಮೇಯಲು ಹೋಗಿದ್ದ ಮೇಕೆಗಳಿಗೆ ವಿದ್ಯುತ್ ತಂತಿ ತಗುಲಿ ಅಲ್ಲೇ ಒದ್ದಾಡಿ ಪ್ರಾಣ ಬಿಟ್ಟದೆ. ಯಾವುದೇ ಸುರಕ್ಷತೆ ಇಲ್ಲದ ಚಿಕಲಪರ್ವಿ ರೋಡ್ ಗೆ ವಿದ್ಯುತ್ ಪರಿವರ್ತಕಕ್ಕೆ (ಟಿಸಿ) ಹಾಕಿರುವುದರಿಂದ ನಾಲ್ಕೈದು ಮೇಕೆಗಳು ಹಾಗೂ ಈ ಹಿಂದೆ ಎಮ್ಮೆ ಕೂಡ ಸಾವನ್ನಪ್ಪಿದೆ ಎಂದು ಆರ್, ಅಮರೇಶ ನಾಯಕ ಆರೋಪಿಸಿದರು. ಹಾಗೆಯೇ ಚಿಕ್ಕ ಮಕ್ಕಳು ಆಟವಾಡುತ್ತಿದ್ದಾಗ ಬಂದು ಇದನ್ನು ಇಡದರೆ ಇದಕ್ಕೆ ಯಾರು ಹೊಣೆ ಎಂದು… ? ಪೋತ್ನಾಳ ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು ಈ ವಿಷಯಕ್ಕೆ ಸಂಬಂದಪಟ್ಟ ಮೇಲಾಧಿಕಾರಿಗಳು ಇತ್ತ ಕಡೆಗೆ ಗಮನಹರಿಸಬೇಕು ಪರಿವರ್ತಕಕ್ಕೆ ಸುರಕ್ಷಿತವಾಗಿ ಕ್ರಮಗಳನ್ನು ಕೈಗೊಳ್ಳಬೇಕು ಅಲ್ಲದೇ ಇತ್ತೀಚೆಗೆ ಎಮ್ಮೆ ಹಾಗೂ ಮೆಕೆಗಳನ್ನು ಕಳೆದುಕೊಂಡ ರೈತರಿಗೆ ಜೆಸ್ಕಾಂ ಇಲಾಖೆಯಿಂದ ಕೂಡಲೇ ಪರಿಹಾರ ನೀಡಬೇಕೆಂದು ಮೇಕೆ ಕಳೆದುಕೊಂಡ ರೈತರು ಆಕ್ರೋಷ ವ್ಯಕ್ತಪಡಿಸಿದರು ಈ ಪರಿವರ್ತಕ ಬಗ್ಗೆ ಜೆಸ್ಕಾಂ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ಸಾರ್ವಜನಿಕರು ಓಡಾಡುವ ಪ್ರದೇಶಗಳಲ್ಲಿ ,ರಸ್ತಗಳಲ್ಲಿ ವಿದ್ಯುತ್ ಪರವರ್ತಕಗಳಿಗೆ ಸೂಕ್ತ ರಕ್ಷಣಾ ಬೇಲಿ ಅಳವಡಿಸಿಲ್ಲ ಮಕ್ಕಳು ಮುಟ್ಟಿ ಪ್ರಾಣ ಕಳೆದುಕೊಳ್ಳುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮವಹಿಸಿ ಎಂದು ಸ್ಥಳೀಯರು ದೂರಿದ್ದಾರೆ.

About Mallikarjun

Check Also

ಒಕ್ಕೂಟದ ನೂತನ ನಿರ್ದೇಶಕರಿಂದ ಪ್ರತ್ಯಂಗಿರಾ ದೇವಿಯ ದರ್ಶನ

New director of the union visits Pratyangira Devi ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ …

Leave a Reply

Your email address will not be published. Required fields are marked *