Breaking News

ನೇತ್ರದಾನದ ಮೂಲಕ ಸಾವಲ್ಲೂ ಸಾರ್ಥಕತೆ ಮೆರೆದ ಜಂಗಮಜೀವಿ

Jangamjeevi is a person who has achieved success even in death through eye donation

ಜಾಹೀರಾತು


ರಾಯಚೂರು, ಸೆ.03: ನಗರದ ಪ್ರಸಿದ್ಧ ವಾಣಿಜ್ಯೋದ್ಯಮಿಗಳು, ಜಿಲ್ಲಾ ಆರ್ಯ ವೈಶ್ಯ ಸಮಾಜದ ಹಿರಿಯ ಮುಖಂಡರೂ ಆದ ಕೊಂಡ ಕೃಷ್ಣಮೂರ್ತಿಯವರು ದೀರ್ಘಕಾಲದ ಅನಾರೋಗ್ಯದ ಬಳಿಕ ಮಂಗಳವಾರ ಬೆಳಿಗ್ಗೆ 9.30ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘ, ರೈಸ್ ಮಿಲ್ ಮಾಲೀಕರ ಸಂಘ, ಜಿಲ್ಲಾ ಆರ್ಯ ವೈಶ್ಯ ಸಮಾಜ, ಗ್ರೀನ್ ರಾಯಚೂರು ಸಂಸ್ಥೆ ಸೇರಿದಂತೆ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರು, ಗೌರವಾಧ್ಯಕ್ಷರು ಸೇರಿದಂತೆ ಮಹತ್ವದ ಸ್ಥಾನಮಾನಗಳನ್ನು ನಿರ್ವಹಿಸಿರುವ ಅವರು ನಗರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ರೇಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು. ಸಮಾಜ ಸೇವೆ, ಧಾರ್ಮಿಕ ಸೇವೆ (ದೇವಾಲಯಗಳ ಸ್ಥಾಪನೆ ಮತ್ತು ಅಭಿವೃದ್ಧಿ), ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ, ಶೈಕ್ಷಣಿಕ ಸೇವೆ‌ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದ ಅವರು, ಹಗಲಿರುಳೆನ್ನದೇ ಶ್ರಮಿಸುತ್ತಿದ್ದ ಕಾಯಕ ಜೀವಿಗಳಾಗಿದ್ದರು. ಜಗಜ್ಯೋತಿ ಬಸವಣ್ಣನವರ ಕಾಯಕ, ಜಂಗಮ ಮತ್ತು ಶರಣ ಸಂಸ್ಕೃತಿಗೆ ಸಾಕಾರ ರೂಪದಂತಿದ್ದ ಅವರು, ಸದಾ ಹಸನ್ಮುಖಿಯಾಗಿದ್ದುಕೊಂಡ ಬಡವರು-ಶ್ರೀಮಂತರು, ಮತ, ಪಂಥ, ಜಾತಿ, ಪಕ್ಷ ಯಾವುದನ್ನೂ ನೋಡದೇ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಜಿಲ್ಲೆಯು ಇಂತಹ ಒಬ್ಬ ಆದರ್ಶ ವ್ಯಕ್ತಿಯನ್ನು ಕಳೆದುಕೊಂಡತಾಗಿದ್ದು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಧಾರ್ಮಿಕ‌ ಮುಖಂಡರು, ಗಣ್ಯರು, ರಾಜಕೀಯ ನಾಯಕರು ಸೇರಿದಂತೆ ಆಪ್ತ ವಲಯದವರು ಕಂಬನಿಯನ್ನು ಮಿಡಿದಿದ್ದಾರೆ.

ನೇತ್ರದಾನದ ಮೂಲಕ ಸಾವಲ್ಲೂ ಸಾರ್ಥಕತೆ: ನುಡಿದಂತೆ ನಡೆವವನೇ ನಿಜ ಶರಣ ಎನ್ನುವ ಮಾತಿನಂತೆ ಬದುಕಿರುವಾಗ ಕಾಯಕ ಯೋಗಿಯಾಗಿ, ಮಾನವೀಯ ಗುಣದ ಸಮಾಜ ಸೇವಕರಾಗಿ ಆದರ್ಶ ಜೀವನ ನಡೆಸಿದ್ದ ಕೊಂಡ ಕೃಷ್ಣಮೂರ್ತಿಯವರ ಪೂರ್ವ ಆಸೆಯಂತೆ, ಅವರ ಎರಡೂ ಕಣ್ಣುಗಳನ್ನು ದಾನ ಮಾಡಲಾಗಿದೆ. ಕುಟುಂಬದವರ ಉಪಸ್ಥಿತಿಯಲ್ಲಿ ನವೋದಯ ವೈದ್ಯಕೀಯ ಮಹಾವಿದ್ಯಾಲಯದ ನೇತ್ರ ಬ್ಯಾಂಕಿನ ಮುಖ್ಯಸ್ಥರಾದ ಡಾ. ಅನುಪಮಾ ಮತ್ತು ಅವರ ತಂಡ ನೇತ್ರದಾನದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಕೊಂಡ ಕೃಷ್ಣಮೂರ್ತಿಯವರ ಸಹೋದರ ಹಾಗೂ ಹಿರಿಯ ಶಸ್ತ್ರ ಚಿಕಿತ್ಸಕರೂ ಆಗಿರುವ ಡಾ. ಎಂ.ಕೆ.ರಾಮಕೃಷ್ಣ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

About Mallikarjun

Check Also

76 ಮೈಲ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅನ್ನದಾತರ ಹೋರಾಟ ಒಣಗುವ ಸ್ಥಿತಿಯಲ್ಲಿರುವ ಜೋಳ ಬೆಳೆ ಉಳಿಸಿಕೊಡಿ ಎಂದ ರೈತರು.

The farmers have demanded that the 76-mile canal be drained of water, and the farmers …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.