Breaking News

ಕರ್ನಾಟಕ ಸ್ಟೇಟ್ ಕ್ರಿಕಿಟ್ಅಸೊಸಿಯೇಷನ್ ಅವರಿಂದ ಇದೇ ಜೂನ್-೨೮ ಮತ್ತು ೨೯ ರಂದು ರಾಯಚೂರು ವಲಯದಲ್ಲಿ ಜಿಲ್ಲಾ ಮಟ್ಟಕ್ಕೆ ಕ್ರೀಡಾಟುಗಳ ಆಯ್ಕೆ.

The Karnataka State Cricket Association will select players for the district level in the Raichur region on June 28th and 29th

ಜಾಹೀರಾತು

ಗಂಗಾವತಿ: ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೊಸಿಯೇಷನ್‌ವತಿಯಿಂದ ಇದೇ ಜೂನ್-೨೮ ಮತ್ತು ೨೯ ರಂದು ೧೬ ವರ್ಷದೊಳಗಿನ ಮತ್ತು ೧೯ ವರ್ಷದೊಳಗಿನ ಉತ್ತಮ ಆಟಗಾರರನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಆಸಕ್ತ ಉತ್ತಮ ಆಟಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಗ್ರಾಮೀಣ ಭಾರತಿ ೯೦.೪ ಎಫ್.ಎಂ ರೇಡಿಯೋ ಕೇಂದ್ರದ ನಿಲಯ ನಿರ್ದೇಶಕರಾದ ರಾಘವೇಂದ್ರ ತೂನ ಪ್ರಕಟಣೆಯಲ್ಲಿ ತಿಳಿಸಿದರು.
ಜೂನ್-೨೮ ಶನಿವಾರ ೧೬ ವರ್ಷದೊಳಗಿನ ಮತ್ತು ಜೂನ್-೨೯ ಭಾನುವಾರ ೧೯ ವರ್ಷದೊಳಗಿನ ಉತ್ತಮ ಆಟಗಾರರ ಆಯ್ಕೆ ನಡೆಯಲಿದೆ. ಆಯ್ಕೆಯು ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಆಸಕ್ತರು ರಾಯಚೂರಿನ ಮಂತ್ರಾಲಯ ರಸ್ತೆಯಲ್ಲಿರುವ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಭಾಗವಹಿಸಬಹುದಾಗಿದೆ. ಅದೇರೀತಿ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯವರು ಕಲಬುರ್ಗಿಯ ಎನ್.ವಿ ಮೈದಾನ, ಬೀದರ ಜಿಲ್ಲೆಯವರು ಬೀದರ್ ನೆಹರು ಸ್ಟೇಡಿಯಂ ಮೈದಾನ, ವಿಜಯಪುರ ಜಿಲ್ಲೆಯವರು ವಿಜಯಪುರದ ಬಿ.ಎಲ್.ಡಿ.ಎ ಮೈದಾನ, ಬಾಗಲಕೋಟೆ ಜಿಲ್ಲೆಯವರು ಬಾಗಲಕೋಟೆಯ ಬಿ.ವಿ.ವಿ.ಎಸ್ ಇಂಜಿನೀಯರಿAಗ್ ಕಾಲೇಜ್ ಕ್ಯಾಂಪಸ್‌ನಲ್ಲಿ ಭಾಗವಹಿಸಬಹುದಾಗಿದೆ.
ಆಸಕ್ತರು ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೊಸಿಯೇಷನ್ ಜಿಲ್ಲಾ ಶರಣ ರೆಡ್ಡಿ ಮೊ: ೭೮೯೨೦೬೩೪೭೦ (ರಾಯಚೂರು), ಚಂದ್ರಶೇಖರ ಎಂ. ಮೊ: ೯೪೪೮೬೩೩೭೪೮ (ಕೊಪ್ಪಳ), ಎನ್.ಎಂ. ಹುತಗಿ ಮೊ: ೯೪೪೮೬೭೮೨೮೦ (ವಿಜಯಪುರ), ಕೆ. ವಿಶ್ವನಾಥ ಮೊ: ೯೮೮೦೨೧೨೭೬೯ (ಕಲಬುರ್ಗಿ), ಕುಶಾಲ್ ಪಾಟೀಲ್ ಮೊ: ೯೪೪೮೪೭೬೮೮೯ (ಬೀದರ್) ಮತ್ತು ರವಿ ಮಾಗ್ದಮ್ ಮೊ: ೯೮೪೫೩೩೨೮೬೮ (ಬಾಗಲಕೋಟೆ) ಇವರುಗಳನ್ನು ಸಂಪರ್ಕಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *