Breaking News

ಹಿರೇಜಂತಕಲ್‌ನಲ್ಲಿ ಸ.ಮಾ.ಹಿ.ಪ್ರಾಶಾಲೆಯಲ್ಲಿನಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ಕೊರತೆಯನ್ನುಸರಿಪಡಿಸಲುಕ್ಷೇತ್ರಶಿಕ್ಷಣಾಧಿಕಾರಿಗಳಿಗೆಒತ್ತಾಯ:ಹುಲಿಗೆಮ್ಮ ಕಿರಿಕಿರಿ

Huligemma’s anger: Urges field education officers to rectify the shortage of headmasters and teachers at S.M.H.P.A. School in Hirejantakal

ಜಾಹೀರಾತು

ಗಂಗಾವತಿ: ಗಂಗಾವತಿ ನಗರದ ೩೨ನೇ ವಾರ್ಡ್ನ ಹಿರೇಜಂತಕಲ್‌ನಲ್ಲಿರುವ ಸ.ಮಾ.ಹಿ.ಪ್ರಾ ಶಾಲೆಯಲ್ಲಿ ಎಲ್.ಕೆ.ಜಿ ಯಿಂದ ೮ನೇ ತರಗತಿವರೆಗೆ ಸುಮಾರು ೪೭೦ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಈ ಶಾಲೆಯಲ್ಲಿ ಕೇವಲ ೦೭ ಜನ ಮಾತ್ರ ಶಿಕ್ಷಕ ಸಿಬ್ಬಂದಿಗಳಿದ್ದು, ಮುಖ್ಯೋಪಾಧ್ಯಾಯರ (೦೧) ಹುದ್ದೆಯೇ ಖಾಲಿ ಇದೆ ಎಂದು ನಗರಸಭೆ ಸದಸ್ಯರಾದ ಹುಲಿಗೆಮ್ಮ ಕಿರಿಕಿರಿ ಬೇಸರ ವ್ಯಕ್ತಪಡಿಸಿದರು.
ಅವರು ಜೂನ್-೨೩ ಸೋಮವಾರ ಸದರಿ ಶಾಲೆಯಲ್ಲಿನ ಸಿಬ್ಬಂದಿಗಳ ಕೊರತೆಯನ್ನು ಸರಿಪಡಿಸಲು ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ಈ ಶಾಲೆಯಲ್ಲಿ ಕನ್ನಡ ಮತ್ತು ಸಮಾಜ ವಿಷಯಕ್ಕೆ ೦೨ ಶಿಕ್ಷಕರು, ಹಿಂದಿ ವಿಷಯಕ್ಕೆ ೦೧ ಶಿಕ್ಷಕರು, ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ೦೨ ಶಿಕ್ಷಕರು ಹಾಗೂ ಇಂಗ್ಲೀಷ್ ವಿಷಯಕ್ಕೆ ೦೨ ಶಿಕ್ಷಕರು ಸೇರಿದಂತೆ ಒಟ್ಟು ೦೭ ಜನ ಶಿಕ್ಷಕರ ಕೊರತೆ ಇರುತ್ತದೆ. ಇದರಿಂದ ಶಾಲೆಯಲ್ಲಿ ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆಯುವಲ್ಲಿ ವಂಚಿತರಾಗಿರುತ್ತಾರೆ. ಕಾರಣ ಕೂಡಲೇ ಕ್ಷೇತ್ರ ಶಿಕ್ಷಣಾದಿಕಾರಿಗಳು ಈ ಶಾಲೆಗೆ ಶಾಶ್ವತ ಮುಖ್ಯೋಪಾಧ್ಯಾಯರನ್ನು ನೇಮಿಸಿ, ಕೊರತೆಯಲ್ಲಿರುವ ಶಿಕ್ಷಕ ಸಿಬ್ಬಂದಿಯವರನ್ನು ನಿಯೋಜಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕ ಸದಸ್ಯರಾದ ಪರಶುರಾಮ ಕಿರಿಕಿರಿ ಉಪಸ್ಥಿತರಿದ್ದರು.

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *