Breaking News

ನಗರಸಭೆಯ ಪೌರಕಾರ್ಮಿಕರು, ವಾಹನ ಚಾಲಕರು, ಲೋರ‍್ಸ್, ಗಾರ್ಡನರ್ ಇವರಿಂದಅನಿರ್ಧಿಷ್ಟಾವಧಿ ಧರಣಿ

By municipal civil servants, motorists, lors, gardeners Indefinite sit-in

ಜಾಹೀರಾತು

ಗಂಗಾವತಿ: ಗಂಗಾವತಿ ನಗರಸಭೆಯಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರು ಸೇರಿದಂತೆ ವಿವಿಧ ಸ್ವಚ್ಛತಾ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕರಿಗೆ ನಿಯಮಿತವಾಗಿ ವೇತನ ಪಾವತಿಸದೇ ಬಾಕಿ ಉಳಿಸಿಕೊಂಡಿರುವುದು ಸೇರಿದಂತೆ ವಿವಿಧ ಸರ್ಕಾರದ ಸೌಲಭ್ಯಗಳನ್ನು ಕೊಡದೇ ಇರುವುದನ್ನು ಖಂಡಿಸಿ, ಫೆಬ್ರವರಿ-೧೦ ಸೋಮವಾರದಿಂದ ನಗರಸಭೆಯ ಮುಂದೆ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಂಡು, ಇಂದಿನಿAದ ಧರಣಿಗೆ ಕುಳಿತುಕೊಳ್ಳಲಾಗಿದೆ ಎ.ಐ.ಸಿ.ಸಿ.ಟಿ.ಯು ಜಿಲ್ಲಾಧ್ಯಕ್ಷ ವಿಜಯ್ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದುವರೆದು ಅವರು ಮಾತನಾಡುತ್ತಾ, ನಗರಸಭೆಯು ಪೌರಾಯುಕ್ತರ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸದೇ ನಿರ್ಲಕ್ಷ ಮಾಡುತ್ತಿದ್ದು, ಪೌರಕಾರ್ಮಿಕರಿಗೆ ಕಳೆದ ೬-೭ ತಿಂಗಳ ದ ವೇತನ ಬಾಕಿ ಇಟ್ಟಿರುವುದು, ಗೃಹಭಾಗ್ಯ ಯೋಜನೆಯಡಿ ಎಲ್ಲಾ ಸ್ವಚ್ಛತಾ ಕಾರ್ಮಿಕರಿಗೆ ವಸತಿ ನಿವೇಶನ ನೀಡುವುದು, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸುವುದು, ಪಿ.ಎಫ್ ಮತ್ತು ಇ.ಎಸ್.ಐ ಸೌಲಭ್ಯ ಒದಗಿಸುವುದು, ಮೃತ ಪೌರಕಾರ್ಮಿಕರ ಕುಟುಂಬದ ಸದಸ್ಯರಿಗೆ ಮಾನವೀಯತೆ ದೃಷ್ಟಿಯಿಂದ ಕೆಲಸ ನೀಡುವುದು ಸೇರಿದಂತೆ ಇತರ ಬೇಡಿಕೆಗಳಿಗೆ ಒತ್ತಾಯಿಸಲಾಗಿದೆ, ಈ ಬೇಡಿಕೆಗಳಿಗೆ ನಗರಸಭೆ ಯಾವುದೇ ಕ್ರಮ ಜರುಗಿಸದೇ ಇದ್ದಲ್ಲಿ, ಪೌರಕಾರ್ಮಿಕರ ಸೇವೆ ದಿನನಿತ್ಯ ಅಗತ್ಯಸೇವೆ ಎಂದು ಪರಿಗಣಿಸಿ, ನಗರಸಭೆಗೆ ಎಚ್ಚರಿಕೆಗಾಗಿ ಈಗಾಗಲೇ ಫೆಬ್ರವರಿ-೧ ರಿಂದ ಕಪ್ಪು ಪಟ್ಟಿ ಧರಿಸಿ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸಿದ್ದು, ಆದಾಗ್ಯೂ ಪೌರಕಾರ್ಮಿಕರ ಹಾಗೂ ವಿವಿಧ ಸ್ವಚ್ಛತಾ ಕಾರ್ಮಿಕರ ಬೇಡಿಕೆಗಳಿಗೆ ನಗರಸಭೆ ಸ್ಪಂದಿಸದೇ ಇರುವುದರಿಂದ ಈ ಅನಿರ್ಧಿಷ್ಟಾವಧಿ ಧರಣಿ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಈ ಅನಿರ್ಧಿಷ್ಟಾವಧಿ ಧರಣಿಯಲ್ಲಿ ನಗರಸಭೆಯ ಪೌರಕಾರ್ಮಿಕರು, ವಾಹನ ಚಾಲಕರು, ಲೋರ‍್ಸ್ಗಳು, ಗಾರ್ಡನರ್‌ಗಳು ಪಾಲ್ಗೊಂಡಿದ್ದರು. ಗಂಗಾವತಿ ನಗರದ ಎಲ್ಲಾ ಸಾರ್ವಜನಿಕರು, ಸಂಘ-ಸAಸ್ಥೆಗಳು ಈ ಅನಿರ್ಧಿಷ್ಟಾವಧಿ ಧರಣಿಗೆ ಸಹಕಾರ ಹಾಗೂ ಬೆಂಬಲ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಎ.ಐ.ಸಿ.ಸಿ.ಟಿ.ಯು ಸಂಘನಟೆಯ ಸಣ್ಣ ಹನುಮಂತಪ್ಪ ಹುಲಿಹೈದರ, ಪ್ರಗತಿಪರ ಪೌರಕಾರ್ಮಿಕರು ಹಾಗೂ ವಾಹನ ಚಾಲಕರ ಸಂಘಟನೆಗಳ ಪರಶುರಾಮ್, ಕೇಶವ ನಾಯಕ, ಬಾಬರ್, ರಮೇಶ ಕೆ., ಕನಕಪ್ಪ ನಾಯಕ, ಭೀಮಣ್ಣ, ಮಾಯಮ್ಮ, ಪಾರ್ವತಮ್ಮ, ಹೊನ್ನಾಳಪ್ಪ, ಕೊಟ್ರೋಶ, ಹುಲಿಗೆಮ್ಮ, ಕೆಂಚಮ್ಮ, ಗಿಡ್ಡಪ್ಪ, ಹನುಮಂತ, ಹೇಮಣ್ಣ ಉಪಸ್ಥಿತರಿದ್ದರು.

About Mallikarjun

Check Also

ಶಿಕ್ಷಣಕ್ಕೂ ಶಿಸ್ತಿಗೂ ಒತ್ತು : ಬೇತಲ್ ಕಾಲೇಜಿನಲ್ಲಿ ಸಮನ್ವಯ ಸಮಾರಂಭ

Emphasis on education and discipline: Coordination ceremony at Bethel College “ಜನಸಂಖ್ಯೆ ಅಲ್ಲ, ಮಾನವ ಸಂಪನ್ಮೂಲ” – …

Leave a Reply

Your email address will not be published. Required fields are marked *