District robbery case,,,
ಭೇದಿಸಿದ ಪೋಲಿಸ್ ಇಲಾಖೆ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಪ್ರಶಂಸೆ,,
ಬಹುಮಾನ ಘೋಷಿಸಿದ ಜಿಲ್ಲಾ ಐಪಿಎಸ್ ಪೋಲಿಸ್ ಅಧಿಕ್ಷಕ ರಾಮ್. ಎಲ್ ಅರಸಿದ್ದಿ,,,
ಪಂಚಯ್ಯ ಹಿರೇಮಠ,,,
ಕೊಪ್ಪಳ : ಬೇವೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುನ್ನಾಳ ಸಿಮಾದಲ್ಲಿ ದಿ. 15.07.2024 ರಂದು ರಾತ್ರಿ 11ಗಂಟೆಯಿಂದ ದಿ. 16.07.2024ರಂದು ಮಧ್ಯರಾತ್ರಿ 3 ಗಂಟೆಯ ಅವಧಿಯಲ್ಲಿ, 9 ಜನರ ಗುಂಪೊಂದು ಜಮೀನಿನಲ್ಲಿ ಬಂದು ವಿದ್ಯುತ್ ಸಾಮಗ್ರಿಗಳನ್ನು ಕಾಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಕರ್ತವ್ಯದ ಗಾರ್ಡ್ ಗೆ ಚಾಕು ತೋರಿಸಿ ಹಗ್ಗದಿಂದ ಕೈ ಕಾಲು ಕಟ್ಟಿ ಹಾಕಿ,
ಕೂಡಿಹಾಕಿ ಸ್ಥಳದಲ್ಲಿದ್ದ ರೂ. 9.16350 ಬೆಲೆ ಬಾಳುವ ವಿದ್ಯುತ್ ಕಂಬದ ಹತ್ತಿರದಲ್ಲಿಯ ವಿದ್ಯುತ್ ಸಾಮಾಗ್ರಿ ಸಲಕರಣೆ ದರೋಡೆ ಮಾಡಿಕೊಂಡು ಹೋಗಿದ್ದು ಈ ಕುರಿತು ಸೂಪರ ಸೂಪರ್ವೈಸರ್ ಬಾಲಕೃಷ್ಣ, ಸಾ.ಮುತ್ತೆಆಲನಹಳ್ಳಿ, ತಾ.ಮಧುಗಿರಿ ದೂರ ನೀಡಿದ ಮೇರೆಗೆ ದಿ. 16.07.2024 ರಂದು ಬೇವೂರ ಪೋಲಿಸ್ ಠಾಣೆಯಲ್ಲಿ ಗುನ್ನೆ.ನಂ68/2024 ಕಲಂ- 303(2), 310(2) ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣ ಪತ್ತೆ ಕುರಿತು ರಚಿಸಿದ ವಿಶೇಷ ಪತ್ತೆ ತಂಡದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯವರು ಮಾಹಿತಿ ಸಂಗ್ರಹಿಸಿ,ದಿ. 02.08.2024ರಂದು 1. ಹಾಲಪ್ಪ ಶೇಖಪ್ಪ ಭಜಂತ್ರಿ ಸಾ. ಹಾಲಹಳ್ಳಿ ತಾ.ಜಿ ಕೊಪ್ಪಳ, 2. ದೇವರಾಜ್ ಸಿದ್ದಪ್ಪ ಹೊಸ್ಮನಿ ಸಾ. ಭಾಗ್ಯನಗರ ಕೊಪ್ಪಳ, 3. ತಾಯಪ್ಪ ಸಣ್ಣತಾಯಪ್ಪ ಭಜಂತ್ರಿ ಸಾ. ಕೊಪ್ಪಳ,4. ಸಿದ್ದೇಶ್ ಯಮನೂರಪ್ಪ ಭಜಂತ್ರಿ ಸಾ. ಜಂಗಮರ ಕಲ್ಗುಡಿ,ಹಾ.ವ.ಹಾಲಳ್ಳಿ,5. ಗವಿಸಿದ್ದಪ್ಪ ಯಲ್ಲಪ್ಪ ಭಜಂತ್ರಿ ಸಾ.ಹಾಲಹಳ್ಳಿ, 6. ಗಂಗಾಧರ್ ಹನುಮಪ್ಪ ಭಜಂತ್ರಿ ಸಾ.ಭಾಗ್ಯನಗರ,7. ಶ್ರೀಕಾಂತ್ ದ್ಯಾಮಣ್ಣ ಕೊರವಾರ,ಸಾ.ಸಜ್ಜಿ ಹೋಲ ಕೊಪ್ಪಳ,8. ಆನಂದ ನಾರಾಯಣಪ್ಪ ಕಲಾಲ್ ಸಾ.ಸಜ್ಜಿಹೋಲ ಕೊಪ್ಪಳ,9. ಹನುಮಂತಪ್ಪ ಗೋಣೆಪ್ಪ ಚಲವಾದಿ ಸಾ. ಮಾಳೆಕೊಪ್ಪ ತಾ.ಕುಕನೂರ, ಇವರನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಇವರು ಪ್ರಕರಣದಲ್ಲಿ ದರೋಡೆ ಮಾಡಿದ್ದನ್ನು ಒಪ್ಪಿಕೊಂಡಿದ್ದು ಅಲ್ಲದೆ ಅಳವಂಡಿ ಠಾಣೆಯ ಗುನ್ನೆ. 28/2024 ಕಲಂ 379 ಐಪಿಸಿ ಪ್ರಕರಣದಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಆರೋಪಿತರಿಂದ ಒಟ್ಟು ಏಳು ಲಕ್ಷ ನಗದು, ಹಣ ಮತ್ತು 500ಕೆಜಿ ಅಲ್ಯುಮಿನಿಯಂ ತಂತಿ, ಅಂಕಿ 150000/ರೂ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಂದು ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ, 4 ಚಾಕು 2 ಬ್ಲೇಡ್, 2 ದೊಡ್ಡ ಕಟರ್, ಮತ್ತು 2 ಮೋಟಾರ್ ಸೈಕಲ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆ ಕುರಿತು, ಹೇಮಂತ ಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಪ್ಪಳ, ಮುತ್ತಣ್ಣ ಸರವಗೋಳ ಪೊಲೀಸ್ ಉಪಾಧಿಕ್ಷಕರು, ಕೊಪ್ಪಳ ವಿಭಾಗ ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಮೌನೇಶ್ವರ ಸಿಪಿಐ ಯಲಬುರ್ಗಾ ವೃತ್ತ, ನೇತೃತ್ವದಲ್ಲಿ ಪ್ರಶಾಂತ್ ಪಿಎಸ್ಐ ಬೇವೂರ್, ಟಿ.ಗುರುರಾಜ ಪಿಎಸ್ಐ ಕುಕನೂರು, ವಿಜಯ ಪ್ರತಾಪ್ ಪಿಎಸ್ಐ ಯಲಬುರ್ಗಾ, ಹಾಗೂ ಸಿಬ್ಬಂದಿಗಳಾದ ದೇವೇಂದ್ರಪ್ಪ ಸಿ ಎಚ್ ಸಿ- 53, ಮೆಹಬೂಬ್ ಸಿ ಎಚ್ ಸಿ -81, ಮಹಾಂತಗೌಡ ಸಿಪಿಸಿ -392, ಶರಣಪ್ಪ ಸಿಪಿಸಿ – 492, ರವಿ ಸಿಪಿಸಿ 509, ಹನುಮಂತಪ್ಪ ಸಿ ಎಚ್ ಸಿ -97, ಬಕ್ಷಿದ್ ಸಾಬ್ ಸಿಪಿಸಿ -172, ಸಿಡಿಆರ್ ವಿಭಾಗದ ಪ್ರಸಾದ್ ಪಿಪಿಸಿ -166 ರವರನ್ನೊಳಗೊಂಡ, ಒಂದು ವಿಶೇಷ ಪತ್ತೆ ತಂಡವನ್ನು ರಚನೆ ಮಾಡಲಾಗಿತ್ತು.
ಘೋರ ಸ್ವತ್ತಿನ ಪ್ರಕರಣದಲ್ಲಿ ಚಾಣಕ್ಷತನದಿಂದ ಮಾಹಿತಿ ಸಂಗ್ರಹಿಸಿ ಆರೋಪಿತರನ್ನು ಪತ್ತೆ ಮಾಡಿ ಬೇವೂರ ಪೊಲೀಸ್ ಠಾಣೆ ಗುನ್ನೆ ನಂ.68/2024 ಸಹಿತ, ನಾಲ್ಕು ಸ್ವತ್ತಿನ ಪ್ರಕರಣಗಳನ್ನು ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಡಾ.ರಾಮ್ ಎಲ್.ಅರಸಿದ್ದಿ ಐಪಿಎಸ್ ಪೊಲೀಸ್ ಅಧೀಕ್ಷಕರು ಕೊಪ್ಪಳ ಜಿಲ್ಲೆ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.