When is Kottoor town panchayat president vice president election?

ಕೊಟ್ಟೂರು ಪಟ್ಟಣದ ಪಟ್ಟಣ ಪಂಚಾಯಿತಿಗೆ 10 ನೇ ಅವಧಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯಪತ್ರದಲ್ಲಿ 05.08.2024 ರಂದು ಅಧಿಸೂಚನೆ ಹೊರಡಿಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆಯನ್ನು ನಡೆಸಲು ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶ ನೀಡಿದ್ದಾರೆ. ಅಲ್ಲದೇ ಪಕ್ಕದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸಂಬಂಧಿಸಿದ ಚುನಾವಣಾಧಿಕಾರಿಗಳು ಈಗಾಗಲೇ ದಿನಾಂಕ ನಿಗದಿಪಡಿಸಿದ್ದಾರೆ. ಆದರೆ ಕೊಟ್ಟೂರು ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆಗೆ ಚುನಾವಣಾಧಿಕಾರಿಗಳಾದ ಕೊಟ್ಟೂರು ತಹಶೀಲ್ದಾರರು ಇದುವರೆಗೂ ಗಮನ ಹರಿಸದಿರುವುದು ಕಂಡು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಜಿಲ್ಲಾಧಿಕಾರಿಗಳ ಮೂಲಕ ಸಕ್ಷಮ ಪ್ರಾಧಿಕಾರವೇ ಅನುಮತಿ ನೀಡಿದ ಮೇಲೂ ಚುನಾವಣೆಗೆ ಮೀನಾಮೇಷ ಎಣಿಸುತ್ತಿರುವುದನ್ನು ನೋಡಿದರೆ, ಇದರಲ್ಲೂ ರಾಜಕಾರಣ ನಡೆಯುತ್ತಿರುವುದೆಂಬ ಅನುಮಾನ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಕೂಡಲೇ ಕೊಟ್ಟೂರು ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಸಿ, ಸಾರ್ವಜನಿಕರಲ್ಲಿ ವ್ಯಕ್ತವಾಗಿರುವ ಅನುಮಾನಗಳಿಗೆ ಕೊಟ್ಟೂರು ತಹಶೀಲ್ದಾರರು ತೆರೆ ಎಳೆಯುವರೇ ಕಾದು ನೋಡಬೇಕಾಗಿದೆ.ಎಂದು ಮಹಿತಿ ಹಕ್ಕು ಕಾರ್ಯಕರ್ತ ರಾಜೇಶ್,ಮಾನವಹಕ್ಕು ಸಂಘಟನೆಯ ಪ್ರವೀಣ್ ಕುಮಾರ್ ಹೇಳಿದರು.