Breaking News

ಕೃಷ್ಣಾಪೂರ ಡಗ್ಗಿ ಅಂಗನವಾಡಿಕೇಂದ್ರದಲ್ಲಿಪೋಷಣಾಭಿಯಾನ,ಉಡಿತುಂಬುವ ಕಾರ್ಯಕ್ಕೆ ಚಾಲನೆ

Krishnapura Daggi Anganwadi Center launched nutrition drive

ಜಾಹೀರಾತು


ಪೋಷಣಾಭಿಯಾನದ ಪರಿಣಾಮ ಅಪೌಷ್ಠಿಕತೆ ದೂರವಾಗುತ್ತಿದೆ:ಇಒ ಲಕ್ಷ್ಮಿದೇವಿ
*ಕೃಷ್ಣಾಪೂರ ಡಗ್ಗಿ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯ
*ಬಸವನದುರ್ಗಾ,ರಾಮದುರ್ಗಾ ಸೇರಿ ಸುತ್ತಲಿನ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳು ಭಾಗಿ
ಗಂಗಾವತಿ: ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಸರಕಾರ ಗರ್ಭಿಣಿಯರು, ನವಜಾತ ಶಿಶುಗಳು ಮತ್ತು ಬಾಣಂತಿಯರಿಗೆ

ಪೋಷಕಾಂಶಗಳುಳ್ಳ ಆಹಾರ ಪದಾರ್ಥಗಳನ್ನು ನೀಡುವುದು ಹಾಗೂ ಆರೋಗ್ಯ ಜಾಗೃತಿ ಮೂಡಿಸುತ್ತಿರುವುದರಿಂದ ಅಪೌಷ್ಠಿಕತೆ ಕಡಿಮೆಯಾಗಿ ಬಾಣಂತಿಯರು ಮತ್ತು ಮಕ್ಕಳ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು ಈ ಕಾರ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯವರು, ಸಹಾಯಕಿಯರು ಮತ್ತು ಆಶಾ, ಆರೋಗ್ಯ ಕಾರ್ಯಕರ್ತೆಯರ ಪಾತ್ರ ಮಹತ್ವದ್ದು ಎಂದು ತಾ.ಪಂ.ಇಒ ಲಕ್ಷ್ಮಿದೇವಿ ಹೇಳಿದರು.
ಅವರು ತಾಲೂಕಿನ ಕೃಷ್ಣಾಪೂರ ಡಗ್ಗಿ ಗ್ರಾಮದ ಅಂಗನವಾಡಿಯಲ್ಲಿ ಏರ್ಪಡಿಸಿದ್ದ ಅನ್ನಪೋಷಣಾಭಿಯಾನ ಮತ್ತು ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಪೂರ್ವಪ್ರಾಥಮಿಕ ಹಂತದಲ್ಲಿ ಮಕ್ಕಳು, ಕಿಶೋರಿಯರು ಮತ್ತು ಗರ್ಭಿಣಿ, ಬಾಣಂತಿಯರಿಗೆ ಆರೋಗ್ಯ ಜಾಗೃತಿ ಮೂಡಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಯೋಜನೆ ರೂಪಿಸಿದ್ದು ಅದನ್ನು ಅಂಗನವಾಡಿಗಳ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ಮಾತೃಪೂರ್ಣ ಯೋಜನೆ ಮಹತ್ವದ್ದಾಗಿದ್ದು ಚಿಕ್ಕಮಕ್ಕಳು, ಕಿಶೋರಿಯವರು, ಬಾಣಂತಿಯರು ಮತ್ತು ಗರ್ಭಿಣಿಯರಿಗೆ ಆರೋಗ್ಯ, ದೈಹಿಕ ಮಾಹಿತಿ ನೀಡಲಾಗುತ್ತಿದೆ. ಪೌಷ್ಠಿಕಾಂಶವುಳ್ಳ ಕಾಳು ಕಡಿ, ಮೊಟ್ಟೆ ಹೋಗೆ ಹಲವು ಪದಾರ್ಥಗಳನ್ನು ಸರಕಾರ ವಿತರಣೆ ಮಾಡುತ್ತಿದೆ. ಆರೋಗ್ಯ ಜಾಗೃತಿಯನ್ನು ಆರೋಗ್ಯ ಇಲಾಖೆ ಮತ್ತು ಗ್ರಾ.ಪಂ. ಸಹ ಹಲವು ಯೋಜನೆಗಳನ್ನು ಅಂಗನವಾಡಿ ಕಾರ್ಯಕತೇಯರ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ಮುಖ್ಯವಾಗಿ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ದತಿ ತಡೆ ಮತ್ತು ಪರಿಸರ ಸಂರಕ್ಷಣೆ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಹಲವು ಕ್ಷೇತ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಗ್ರಾಮಸ್ಥರಿಗೆ ಮನವರಿಕೆ ಮಾಡಿ ಸರಕಾರದ ಯೋಜನೆ ಸಹಕಾರ ನೀಡುತ್ತಿದ್ದು ಇದರಿಂದ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತಿದೆ. ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಕಿಶೋರಿಯವರು ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆನೆಗೊಂದಿ ಗ್ರಾ.ಪಂ. ಅಧ್ಯಕ್ಷ ಕೆ.ಮಹಾದೇವಿ ಬಾಳೆಕಾಯಿ, ಪಿಡಿಒ ಕೆ.ಕೃಷ್ಣಪ್ಪ, ಗ್ರಾ.ಪಂ.ಸದಸ್ಯರಾದ ತಿಮ್ಮಪ್ಪ ಬಾಳೆಕಾಯಿ, ರಾಜಶೆಖರ, ಮುಖಂಡರಾದ ಹೊನ್ನಪ್ಪ ನಾಯಕ,ಸೂಪರವೈಸರ್ ಶರಣಮ್ಮ, ಈರಮ್ಮ, ಡಾ.ನವೀನಕುಮಾರ, ಮುಖ್ಯಶಿಕ್ಷಕ ಛತ್ರಪ್ಪ ತಂಬೂರಿ, ಅಂಗನವಾಡಿ ಶಿಕ್ಷಕಿಯರಾದ ಕವಿತಾ ಡೊಳ್ಳಿನ, ಗೀತಾ, ನಾಗರತ್ನ, ಸವಿತಾ, ಸರಿತಾ, ಮಂಜುಳಾ, ಸುಲೋಚನಾ, ಸಂಗಮ್ಮ, ಲಕ್ಷ್ಮಿ, ಸಹಾಯಕಿಯರಾದ ಹೊಳಿಯಮ್ಮ, ಬಸಮ್ಮ, ಹನುಮಕ್ಕ ಸೇರಿ ಕೃಷ್ಣಾಪೂರ ಡಗ್ಗಿ, ಬಸವನದುರ್ಗಾ ಗ್ರಾಮದ ಮಹಿಳೆಯರಿದ್ದರು.

About Mallikarjun

Check Also

76 ಮೈಲ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅನ್ನದಾತರ ಹೋರಾಟ ಒಣಗುವ ಸ್ಥಿತಿಯಲ್ಲಿರುವ ಜೋಳ ಬೆಳೆ ಉಳಿಸಿಕೊಡಿ ಎಂದ ರೈತರು.

The farmers have demanded that the 76-mile canal be drained of water, and the farmers …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.