For construction of clean drinking water plant in government land: Green Sena appeal
ಮಾನ್ವಿ :ತಾಲೂಕಿನ ಉಟಕನೂರು ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಬೇರೆ ಕಡೆ. ಇರುವ ಸರಕಾರಿ ಸ್ಥಳದಲ್ಲಿ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು
ಉಟಕನೂರು ಗ್ರಾಮದಲ್ಲಿ ಹೊಸದಾಗಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗುತ್ತಿರುವ ಪಂಚಾಯತಿಯ ಗೋದಾಮು ಸ್ಥಳದಲ್ಲಿ ಕಾಮಗಾರಿಯನ್ನು ಆರಂಭ ಮಾಡುವುದಕ್ಕೆ ಸಾಮಾಗ್ರಿಗಳನ್ನು ಗುತ್ತಿಗೆದಾರರು ತಂದಿದ್ದು ಈ ಒಂದು ಜಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡುತ್ತಿರುವುದನ್ನು ತಡೆ ಹಿಡಿದು, ಏಕೆಂದರೆ ಈಗ ನಿರ್ಮಾಣ ಮಾಡುತ್ತಿರುವ ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇರುತ್ತದೆ. ಆದ್ದರಿಂದ ಈ ಹಿಂದೆ ಗ್ರಾಮಸ್ಥರೆಲ್ಲ ಊರಿನ ಒಳಗಡೆ ಇರುವ ಬಸವಣ್ಣ ಕಟ್ಟಿಯ ಹಿಂದಿನ ಜಾಗದಲ್ಲಿ ಅಥವಾ ಕನಕದಾಸ ಭವನದ ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡಿಕೊಡಬೇಕೆಂದು ಗ್ರಾಮಸ್ಥರು ಹಾಗೂ ರೈತ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ನಿರ್ಲಕ್ಷ್ಯ ವಹಿಸಿದ್ದಾರೆ ಮುಂದಿನ ದಿನಗಳಲ್ಲಿ ತಮ್ಮ ಕಛೇರಿಯ ಮುಂದೆ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಹೊಳೆಯಪ್ಪ ಉಟಕನೂರು, ಮರಿಬಸವರಾಜ, ಶ್ರೀ ಶೈಲ್, ಮರಿಬಸವ, ಗಂಗಮ್ಮ, ಬಸಮ್ಮ, ಈರಮ್ಮ, ಮಲ್ಲಮ್ಮ, ಶಾಂತಮ್ಮ, ಹಾಗೂ ಕರಿಯಪ್ಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.