Breaking News

ಹಿಂಗಾರು ಜೋಳ ಬಿತ್ತನೆ ಜೋರು – ರೈತರಿಗೆ ಆಸರೆಯಾದ ಕೃಷಿ ಯಂತ್ರಧಾರೆ

Hingeru Maize Seeding Coulter – Farm Machinery for Farmers

ಜಾಹೀರಾತು

ಮಾನ್ವಿ : ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನ ಮಳೆ ಆರಂಭದಲ್ಲಿ ಬಾರದೆ ಇದ್ದರೂ ನಂತರದ ಹಿಂಗಾರು ಮಳೆ ಉತ್ತಮವಾಗಿ ಬಂದಿದ್ದು, ರೈತರು ಹಿಂಗಾರು ಹಂಗಾಮಿನ ಜೋಳ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ತಾಲೂಕಿನಾದ್ಯಂತ ರೈತರು ಬೀಜ, ಗೊಬ್ಬರ ಖರೀದಿಸಿ ಬಿತ್ತನೆಗೆ ಸಜ್ಜಾಗಿದ್ದಾರೆ.

ಆಧುನಿಕ ಕೃಷಿ ಪದ್ಧತಿಗೆ ಒಡ್ಡಿಕೊಂಡಿರುವ ಜಿಲ್ಲೆಯ ಸಾವಿರಾರು ಅನ್ನದಾತರು ‘ಕೃಷಿ ಯಂತ್ರಧಾರೆ’ಗೆ ಮೊರೆ ಹೋಗುತ್ತಿದ್ದಾರೆ. ಬೆವರಿನ ಶ್ರಮವನ್ನು ಕಡಿಮೆ ಮಾಡುತ್ತಿರುವ ಈ ಯಂತ್ರೋಪಕರಣಗಳಿಂದ ಹೆಚ್ಚು ರೈತರಿಗೆ ಉಪಯೋಗ ಆಗಿದೆ.

ಸರ್ಕಾರದಿಂದ 2014ರಲ್ಲಿ ಆರಂಭವಾದ ಈ ಯೋಜನೆಯ ಲಾಭವನ್ನು ಮೊದಲೆರಡು ವರ್ಷಗಳಲ್ಲಿ ಜಿಲ್ಲೆಯ ಹೆಚ್ಚಿನ ರೈತರು ಮಾಹಿತಿ ಕೊರತೆಯಿಂದ ಪಡೆಯಲಿಲ್ಲ. ಆದರೆ, 2017ರಿಂದ ಈಚೆಗೆ ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಈ ಬಾರಿ ವರುಣದೇವ ಮನಸೋ ಇಚ್ಛೆ ಸುರಿಯುತ್ತಿದ್ದು ರೈತಾಪಿ ವರ್ಗದಲ್ಲಿ ಸಂತಸ ಮೂಡಿಸಿದೆ. ನಾವೂ ಬಿತ್ತನೆಗೆ ಅಣಿಯಾಗಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದರು.

ಎತ್ತುಗಳಿಲ್ಲದ್ದಕ್ಕೆ ಟ್ರ್ಯಾಕ್ಟರ್‌ ಬಳಕೆ: ತಾಲೂಕಿನಾದ್ಯಂತ ಕಳೆದ ವರ್ಷ ಬರಗಾಲದಿಂದ ನೀರು, ಮೇವು ಪೂರೈಕೆ ಮಾಡಲಾಗದ್ದಕ್ಕೆ ರೈತರು ದನ-ಕರುಗಳನ್ನು ಕಮ್ಮಿ ಬೆಲೆಗೆ ಮಾರಿದ್ದಾರೆ. ಈಗ ಬಿತ್ತನೆಗೆ, ಉಳುಮೆಗೆ ಎತ್ತುಗಳಿಲ್ಲದ್ದರಿಂದ ದುಬಾರಿ ಬಾಡಿಗೆ ನೀಡಿ ಟ್ರ್ಯಾಕ್ಟರ್‌ ಮೂಲಕ ಬಿತ್ತನೆ ಮಾಡುತ್ತಿದ್ದಾರೆ.


ಕೂರಿಗೆ ಮೂಲಕ ಬಿದಿರಿನ ಕೊಳವೆಯಿಂದ ಮಡಲಿಗೆ ಕಟ್ಟಿಕೊಂಡ ಬೀಜವನ್ನು ಕೈಯಲ್ಲಿ ತೆಗೆದು ಬಿತ್ತನೆ ಮಾಡುವಾಗ ಕುಂಟು ಸಾಲುಗಳು ಹೆಚ್ಚು ಆಗುತ್ತಿದ್ದವು. ಸಾಂಪ್ರದಾಯಿಕ ಮರ–ಮುಟ್ಟು ಕೃಷಿ ಉಪಕರಣಗಳಿಂದ ಉಳುಮೆ ಹಾಗೂ ಬಿತ್ತನೆ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿರಲಿಲ್ಲ. ಈಗ ಸುಲಭವಾಗಿದೆ’ ಎನ್ನುತ್ತಾರೆ. ಮುದ್ದನಗುಡ್ಡಿ ಗ್ರಾಮದ ಯುವ ರೈತ ಬಸವರಾಜ.


ಬಿತ್ತನೆ ಕೂರಿಗೆ ಮತ್ತು ಕುಂಟೆ ಬೇಸಾಯಕ್ಕೆ ಎರಡು ಜತೆ ಜೋಡೆತ್ತುಗಳು ಸೇರಿದಂತೆ 5–7 ಜನ ಕೂಲಿ ಕಾರ್ಮಿಕರು ಬೇಕು. ಎತ್ತಿನ ಬೇಸಾಯದಲ್ಲಿ ಪ್ರತಿ ದಿನ 2–3 ಎಕರೆ ಮಾತ್ರ ಬಿತ್ತನೆ ಮಾಡಬಹುದು. ಇದರಿಂದ ಶ್ರಮ ಮತ್ತು ದುಬಾರಿ ಕೂಲಿ ಆಗುತ್ತಿತ್ತು. ಆದರೆ, ಸರ್ಕಾರ ಒದಗಿಸಿದ ಯಂತ್ರೋಪಕರಣದಿಂದ ಈಗ ಬಿತ್ತನೆ ಕಾರ್ಯ ತುಂಬಾ ಸುಲಭವಾಗಿದೆ’ ಎನ್ನುತ್ತಾರೆ ದೇವಿಪುರ ಗ್ರಾಮದ ರೈತ ದ್ಯಾವಪ್ಪ.

‘ಕಬ್ಬಿಣದ ಕೂರಿಗೆಯಿಂದ ಟ್ರ್ಯಾಕ್ಟರ್ ಮೂಲಕ ಬೀಜ ಮತ್ತು ಗೊಬ್ಬರವನ್ನು ಒಟ್ಟಿಗೆ ಬಿತ್ತನೆ ಮಾಡುವುದರಿಂದ ಅಕ್ಕಡಿ ಮತ್ತು ಅಂಟು ಸಾಲುಗಳು ಆಗುವುದಿಲ್ಲ. ಇಂಚು ಇಂಚಿಗೂ ಸಮ ಅಳತೆ ಪ್ರಮಾಣದಲ್ಲಿ ನೆಲಕ್ಕೆ ಬೀಜಗಳು ಬೀಳುತ್ತವೆ. ಕುಂಟು ಸಾಲು ನಿವಾರಣೆ ಮಾಡುತ್ತವೆ. ಎಲ್ಲ ಬೀಜಗಳು ತುಂಬು ಹಸಿಗೆ ಬೀಳುತ್ತವೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಮಾಡಬಹುದು’ ಎಂಬುದು ಕೆಲ ರೈತರ ಅಭಿಪ್ರಾಯ.

About Mallikarjun

Check Also

ಶ್ರೀ ಶಂಕರಾಚಾರ್ಯ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ.

Preparatory meeting on the occasion of Sri Shankaracharya Jayanthotsava. ಗಂಗಾವತಿ. ನಗರದ ತಹಸಿಲ್. ಕಚೇರಿಯ ಕಾರ್ಯಾಲಯದಲ್ಲಿ ಸೋಮವಾರದಂದು. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.