Breaking News

ಕಪಗಲ್ ಗ್ರಾಮದ ರಸ್ತೆ ಅಪಘಾತವಾದ ಸ್ಥಳದಲ್ಲಿ ಗ್ರಾಮಸ್ಥಾರಿಂದ ಜಿಲ್ಲಾಧಿಕಾರಿ ಮನವಿ ಸ್ವೀಕಾರ

At the site of the road accident in Kapagal village, the district collector accepted the appeal from the villagers

ಜಾಹೀರಾತು
ಜಾಹೀರಾತು

ಮಾನ್ವಿ: ತಾಲೂಕಿನ ಕಪಗಲ್ ಗ್ರಾಮದ ಹತ್ತಿರದ ದೊಡ್ಡ ಹಳ್ಳದ ಹತ್ತಿರ ಕಪಗಲ್ ಗ್ರಾಮಸ್ಥಾರು ಹಾಗೂ ವಿವಿಧ ಪ್ರಗತಿಪರ ಸಂಘಟನೆಯವರು ರಾಯಚೂರು ಮಾನ್ವಿ ಹೆದ್ದಾರಿಯಲ್ಲಿ ೨ ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ರಾಯಚೂರು ಜಿಲ್ಲಾಧಿಕಾರಿ ನಿತೀಷ.ಕೆ ರವರಿಗೆ ಮನವಿ ಸಲ್ಲಿಸಿ ಗ್ರಾಮದ ಮುಖಂಡರಾದ ಮುಸ್ತಾಪ ಸಾಹುಕರ್ ಮಾತನಾಡಿ ರಾಯಚೂರು ಮಾನ್ವಿ ಹೆದ್ದಾರಿ ರಸ್ತೆಯಲ್ಲಿ ಬಾರಿ ಗಾತ್ರದ ಗುಂಡಿ,ತಗುಗಳು ಬಿದ್ದಿರುವುದರಿಂದ ಪ್ರತಿನಿತ್ಯ ರಸ್ತೆ ಅಪಘಾತಗಳು ಸಂಭಾವಿಸುತ್ತಿದ್ದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತೆಯಿಂದಾಗಿ ಇಂದು ನಡೆದ ಅಪಘಾತದಲ್ಲಿ ವಿದ್ಯಾರ್ಥಿಗಳ ಸಾವು ಸಂಭವಿಸಿದೆ ನಿರ್ಲಕ್ಷವಹಿಸಿದ ಲೋಯಾಲ ಶಿಕ್ಷಣ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳಬೇಕು ತಾಲೂಕಿನ ಖಾಸಗಿ ಶಾಲೆಯ ಆಡಳಿತ ಮಂಡಳಿಯ ಸಭೆ ಕರೆದು ತಾಲೂಕಿನ ಬೇರೆ ಬೇರೆ ಗ್ರಾಮಗಳಿಂದ ವಿದ್ಯಾರ್ಥಿಗಳನ್ನು ಕರೆತರುವಾಗ ಕಡ್ಡಾಯವಾಗಿ ವಾಹನ ಚಾಲನ ಪರವಾನಿಗೆ ಇರುವ ಚಾಲಕನನ್ನು ನೇಮಕ ಮಾಡಿಕೊಳ್ಳಬೇಕು ಶಾಲಾ ವಾಹನಗಳಲ್ಲಿ ಹಾಗೂ ಶಾಲೆಗಳಲ್ಲಿ ಮಕ್ಕಳ ಸುರಕ್ಷೆತೆಗೆ ಹೆಚ್ಚಿನ ಅದ್ಯತೆ ನೀಡುವಂತೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ಕಪಗಲ್ ಗ್ರಾಮದ ಹತ್ತಿರ ರಸ್ತೆ ಅಪಘಾತವಾದ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಗ್ರಾಮಸ್ಥಾರಿಂದ ಮನವಿ ಸ್ವಿಕರಿಸಿ ರಾಯಚೂರು ಜಿಲ್ಲಾಧಿಕಾರಿ ನಿತೀಷ.ಕೆ ಮಾತನಾಡಿ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಗಾಯಾವಾಗಿರುವ ವಿದ್ಯಾರ್ಥಿನಿಗೆ ನುರಿತ ನ್ಯೂರೋಸರ್ಜನ್ ಕರೆಸಿ ಶಸ್ತç ಚಿಕಿತ್ಸೆ ಮಾಡಿಸಲಾಗುತ್ತಿದೆ ಅಗತ್ಯ ಬಿದ್ದಲ್ಲಿ ಬೆಂಗಳೂರು,ಹೈದ್ರಾಬಾದ್‌ನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೋಡಿಸುವುದಕ್ಕೆ ಸರಕಾರದಿಂದಲ್ಲೇ ಅಗತ್ಯವಾದ ಎಲ್ಲಾ ಸಿದ್ದತೆಗಳನ್ನು ಮಾಡಕೊಳ್ಳಲಾಗಿದ್ದೆ ಶಾಲಾ ವಾಹನದಲ್ಲಿ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹಾಕಿದಲ್ಲಿ ಪೊಲೀಸ್ ಇಲಾಖೆ ಹಾಗೂ ಆರ್.ಟಿ.ಓ. ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿ ವಾಹನ ಸಿಜ್ ಮಾಡಲಾಗುವುದು, ಮೃತ ಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಹಾಗೂ ಹೆದ್ದಾರಿ ಪರಿಹಾರ ನಿಧಿಯಿಂದ ಪರಿಹಾರ ನೀಡಲಾಗುವುದು ಕೈ,ಕಾಲುಗಳನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ತಕ್ಷಣವೇ ೩ ಲಕ್ಷ ಪರಿಹಾರ ಹಾಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು, ರೈತರಿಗೆ ಶಿಘ್ರವೇ ಭೂ ಪರಿಹಾರ ನೀಡಿ ೬ ಲೈನ್ ಹೆದ್ದಾರಿ ನಿರ್ಮಾಣ ಶಿಘ್ರಗತಿಯಲ್ಲಿ ಪೂರ್ಣಗೊಳಿಸಲಾಗುವುದು. ಈ ಸ್ಥಳದಲ್ಲಿ ಹೆಚ್ಚು ಅಪಘಾತಗಳಾಗುತ್ತಿರುವುದಾಗಿ ಗ್ರಾಮಸ್ಥರು ದೂರು ನೀಡುತ್ತಿರುವುದರಿಂದ ಪೊಲೀಸ್ ಇಲಾಖೆ ಹಾಗೂ ಆರ್.ಟಿ.ಒ.ಇಲಾಖೆಯಿಂದ ಅಗತ್ಯ ಮುನ್ನೇಚ್ಚರಿಕೆ ಪಾಲಕಗಳನ್ನು ಅಳವಡಿಸಿ ಅಪಘಾತವಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ರಸ್ತೆ ತಡೆ ನಡೆಸಿದರಿಂದ ೨ಗಂಟೆಗಳ ಕಾಲ ಹೆದ್ದಾರಿ ರಸ್ತೆ ಸಂಚಾರದಲ್ಲಿ ವ್ಯತ್ಯಾಯ ಉಂಟಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ , ಎಂ. ಸಹಾಯಕ ಆಯುಕ್ತರಾದ ಮೇಹಬೂಬೀ, ತಹಸೀಲ್ದಾರ್ ರಾಜುಪಿರಂಗಿ , ಪಿ.ಐ.ವೀರಭದ್ರಯ್ಯ ಹಿರೇಮಠ,ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಕಪಗಲ್ ಗ್ರಾಮದ ಗೋಕುಲಪ್ಪಸಾಲಿ, ರಮೇಶನಾಯಕ,ಚಾಂದಪಾಷ, ಬಾಷಸಾಬ್, ಜೆ.ಡಿ.ಎಸ್. ಪಕ್ಷದ ಜಿಲ್ಲಾಧ್ಯಕ್ಷರಾದ ಎಂ.ವಿರೂಪಾಕ್ಷಿ, ಕಾರ್ಯದರ್ಶಿ ಶಿವಶಂಕರ ವಕೀಲರು, ಪ್ರಗತಿಪರ ಸಂಘಟನೆಗಳ ಮುಖಂಡರಾದ ಜಾವೇದ್‌ಖಾನ್,ಪ್ರಭುರಾಜ ಕೋಡ್ಲಿ ಸೇರಿದಂತೆ ನೂರಾರು ಗ್ರಾಮಸ್ಥಾರು ಪ್ರತಿಭಟನೆಯಲ್ಲಿ ಭಾಗವಹಿಸಿದರು

About Mallikarjun

Check Also

ನ್ಯಾಯಾಲಯಗಳಲ್ಲಿ ಕನ್ನಡ ಭಾಷಾ ಅನುಷ್ಠಾನ ರಾಜ್ಯ ಸಮಿತಿ ಉದ್ಘಾಟನಾ ಸಮಾರಂಭ.

Inaugural ceremony of the State Committee for Implementation of Kannada Language in Courts. ಬೆಂಗಳೂರು ಮಾರ್ಚ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.