ರೈತರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೋಳ್ಳಲು ಶಾಸಕ ಎಮ್ ಆರ್ ಮಂಜುನಾಥ್ ಕರೆ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
MLA M R Manjunath calls on farmers to make good use of government facilities




ರೈತರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೋಳ್ಳಲು ಶಾಸಕ ಎಮ್ ಆರ್ ಮಂಜುನಾಥ್ ಕರೆ

ಜಾಹೀರಾತು


ವರದಿ: ಬಂಗಾರಪ್ಪ .ಸಿ.
ಹನೂರು : ರಾಜ್ಯ ಸರ್ಕಾರವು ರೈತರಿಗಾಗಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಂ. ಆರ್ ಮಂಜುನಾಥ್ ತಿಳಿಸಿದರು.
ಹನೂರು
ಪಟ್ಟಣದ ಹೊರವಲಯದಲ್ಲಿರುವ ಕೃಷಿ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಕಳೆದ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿತ್ತು . ಈ ಬಾರಿ ಸ್ವಲ್ಪ ಮುಂಚಿತವಾಗಿ ಮಳೆಯಾಗಿರುವುದರಿಂದ ರೈತರು ಬಿತ್ತನೆ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದು ಅದಕ್ಕಾಗಿ ಸರ್ಕಾರ ದ್ವಿದಳ ಧಾನ್ಯಗಳು ಮುಸುಕಿನ ಜೋಳ ಉದ್ದು ಇನ್ನಿತರ ಪದಾರ್ಥಗಳನ್ನು ರೈತ ದರದಲ್ಲಿ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಂಡು ರೈತರು ಆರ್ಥಿಕವಾಗಿ ಮುಂದೆ ಬರಬೇಕು. ಎಂದರು

ಕೇಂದ್ರ ಸರ್ಕಾರದ ಆದೇಶದಂತೆ ಕೃಷಿ ಇಲಾಖೆ ಅಧಿಕಾರಿಗಳು ಬಿತ್ತನೆ ಬೀಜ ಯಾಯಿತಿ ದರದಲ್ಲಿ ನೀಡುತ್ತಿದ್ದಾರೆ ರೈತರು ಕೃಷಿ ಅಧಿಕಾರಿಗಳ ಮಾರ್ಗದರ್ಶನ ಪಡೆದು ಮಣ್ಣಿನ ಪರೀಕ್ಷೆ ಮಾಡಿಸಿ ರಾಸಾಯನಿಕ ಗೊಬ್ಬರಗಳ ಮೊರೆ ಹೋಗದೆ ಕೃತಕ ಗೊಬ್ಬರಗಳನ್ನು ಬಳಸುವ ಮೂಲಕ ಉತ್ತಮ ಮತ್ತು ಫಲವತ್ತಾದ ಬೆಳೆಗಳನ್ನು ಬೆಳೆಯಬೇಕು.

ವೈಜ್ಞಾನಿಕವಾಗಿ ಇಂದಿನ ಮಾಹಿತಿ ತಂತ್ರಜ್ಞಾನ ಅಳವಡಿಸಿ ಕೊಂಡು ಉತ್ತಮ ಬೆಳೆಯಲು ರೈತರು ಪ್ರಯತ್ನ ಪಡಬೇಕು ಹಾಗೆಯೇ ನಮ್ಮನ್ನು ಅವಲಂಬಿಸಿಕೊಂಡಿರುವ ಜನರಿಗೆ ಮೊದಲು ನೀರಿಗೆ ಆದ್ಯತೆ ನೀಡುತ್ತೇನೆ ನಂತರ ಕರೆಂಟು , ಕೃತಜ್ಞತಾ ರಸ್ತೆಗೆ ಆದ್ಯತೆ ನೀಡುತ್ತೇನೆ . ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಕೆರೆಕಟ್ಟೆಗಳನ್ನು ತುಂಬಿಸುವ ಕೆಲಸ ಆಗಬೇಕು ಆವಾಗ ಅಂತರ್ಜಲ ವೃದ್ಧಿಯಾಗುತ್ತದೆ ರೈತರಿಗೆ ಮುಖ್ಯವಾಗಿ ನೀರು ಒದಗಿಸಿದಾಗ ಅವರು ವರ್ಷವಿಡಿ ವ್ಯವಸಾಯ ಮಾಡುತ್ತಾರೆ ಅವರ ಆರ್ಥಿಕ ಬದುಕಿಗೆ ಒಂದು ದಾರಿಯಾಗುತ್ತದೆ ಎಂದರು .

ಇದೇ ವೇಳೆ ಕೃಷಿ ಸಹಾಯಕ ನಿರ್ದೇಶಕ ರಂಗಸ್ವಾಮಿ , ಕೃಷಿ ಅಧಿಕಾರಿ ನಾಗೇಂದ್ರ ಕಛೇರಿ ಸಿಬ್ಬಂದಿಗಳು ಕೃಷಿ ಸಖೀಯರು ಮುಖಂಡರಾದ ಶಾಗ್ಯ ಬಾಬಣ್ಣ, ಜೇಸಿಮ್ ಪಾಷ, ಚಿನ್ನವೆಂಕಟ್, ಬಂಡಳ್ಳಿ ತಿರುಪತಿ ನಾಗಯ್ಯ, ಎಸ್, ಆರ್ ಮಹಾದೇವ್,ಅಮಿನ್ ವೆಂಕಟೇಶ ಉದ್ದನೂರು ಗಿರೀಶ್, ಪ್ರಮೋದ್,ದಿನ್ನಲ್ಲಿ ಮೂರ್ತಿ,ಇನ್ನಿತರರು ಹಾಜರಿದ್ದರು

Total Views: 0
Share This Article