Breaking News

ವಿಜೃಂಭಣೆಯಿಂದ ಜರುಗಿದ ಮಾದಪ್ಪನ ಸನ್ನಿಧಿಯಲ್ಲಿ ಭೀಮನ ಅಮವಾಸ್ಯೆ ಪೂಜಾ ಕಾರ್ಯ

Bhima’s Amavasya Puja in the presence of Madappa, which was celebrated with exuberance.

ಜಾಹೀರಾತು


ವರದಿ : ಬಂಗಾರಪ್ಪ ,ಸಿ .

ಹನೂರು : ರಾಜ್ಯದ ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆಮಹದೇಶ್ವರ ಬೆಟ್ಟದಲ್ಲಿ ಬೇಡಗಂಪಣ ಅರ್ಚಕರಿಂದ 108 ಕುಂಭೋತ್ಸವ ಸೇವೆ ಸೇರಿದಂತೆ ಇನ್ನಿತರ ಪೂಜೆಗಳು ಬಹಳ ಭಕ್ತಿಪೂರ್ವಹಕವಾಗಿ ಅರ್ಚಕ ತಂಡ ನೆರವೆರಿಸಿತು .
ಸಾವಿರಾರು ಭಕ್ತರು ಆಗಮಿಸಿ ಸೋಮವಾರ ಶ್ರದ್ಧಾಭಕ್ತಿಯಿಂದ ನೆರೆವೇರಿಸಿದರು :
ಸನ್ನಿಧಾನದ ಆಗಮಿಕರಾದ ಕರವೀರಸ್ವಾಮಿ ನೇತೃತ್ವದಲ್ಲಿ ಬೇಡಗಂಪಣ ಅರ್ಚಕರು ಮಜ್ಜನಬಾವಿಯಿಂದ 108 ಕುಂಭಗಳನ್ನು* ಹೊತ್ತು ತಂದು ಹೋಮ ನೆರವೇರಿಸಿ ಸ್ವಾಮಿಗೆ ಅಭಿಷೇಕ ಮಾಡಿದ್ದಾರೆ. ಇದರೊಟ್ಟಿಗೆ, 108 ಎಳನೀರುಗಳಿಂದಲೂ ಅಭಿಷೇಕ ಮಾಡುವ ಮೂಲಕ ಶ್ರಾವಣ ಮಾಸದ ವಿಶೇಷ ಪೂಜೆ ನೆರವೇರಿತು.

ದೇವಾಲಯದಲ್ಲಿ ಮೊದಲಪೂಜೆ ಆರಂಭವಾಗಿದ್ದು, ಇದರ ಜೊತೆಗೆ ದೇವಾಲಯದ ರಾಜಗೋಪುರದ ಮುಂದೆ ಮಜ್ಜನ ಬಾವಿಗೆ ತೆರಳಿ ಗಂಗೆ ಪೂಜೆ ಸೇರಿ ವಿಶೇಷ ಪೂಜೆ ಕೈಗೊಂಡರು. ಬಳಿಕ ವಾದ್ಯಮೇಳ, ಛತ್ರಿ, ಚಾಮರಗಳೊಂದಿಗೆ 108 ಅರ್ಚಕರು ಕುಂಬ ಹೊತ್ತು ದೇವಾಲಯದ ಹೊರ ಹಾಗೂ ಒಳ ಆವರಣದಲ್ಲಿ ಮೆರವಣಿಗೆ ಮಾಡಿ ಗರ್ಭಗುಡಿ ಸುತ್ತ ಪ್ರದಕ್ಷಿಣೆ ಹಾಕಿದರು.

ಪೂಜೆ ನಡೆದ ನಂತರ ಕುಂಬಾಭಿಷೇಕ ನೆರವೇರಿಸಿದರು. ಪ್ರತಿದಿನ ದೇವರಿಗೆ 12 ಕುಂಬಾಭಿಷೇಕ, ಲಕ್ಷಬಿಲ್ವಾರ್ಚನೆ ಪೂಜೆ ಸಲ್ಲಿಕೆಯಾಗಲಿದೆ. ಶ್ರಾವಣ ಮಾಸದ ಕೊನೆಯ ದಿನ ಮತ್ತೆ 108 ಕುಂಬಾಭಿಷೇಕ ಜರುಗಲಿದೆ.

ದೇವಾಲಯದಲ್ಲಿ ತ್ರಿಕಾಲ ಪೂಜೆ ಪ್ರಾರಂಭವಾಗಿದ್ದು, ಬೆಳಿಗ್ಗೆ 4ರಿಂದ ಬೆಳಿಗ್ಗೆ 6ರವರೆಗೆ ಮೊದಲ ಪೂಜೆ, ಅಭಿಷೇಕ, ಬಿಲ್ವಾರ್ಚನೆ, ಆರತಿ, 10.30ಕ್ಕೆ ಎರಡನೇ ಪೂಜೆ, ಸಂಜೆ 6.30ರಿಂದ ರಾತ್ರಿ 8.30ರವರೆಗೆ ಮೂರನೇ ಪೂಜೆ ಜರುಗಿದವು. ಅಲ್ಲದೆ ಈ ರಾತ್ರಿ 7ಕ್ಕೆ ಚಿನ್ನದ ತೇರಿನ ಉತ್ಸವ ವಿಭೃಂಜಣೆಯಿಂದ ಜರುಗಲಿದೆ.* ಮೆರವಣಿಗೆಯಲ್ಲಿ ಉಮಾಮಹೇಶ್ವರಿ, ನಂದಿಕಂಬ, ವೀರಗಾಸೆ ಕುಣಿತ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ನೆರೆದಿದ್ದ ಭಕ್ತರು ಉಘೇ ಮಾದಪ್ಪ, ಉಘೇ ಮಾಯ್ಕಾರ ಎಂಬ ಜಯಘೋಷ ಹಾಕಿದರು,

ಶ್ರೀ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಶ್ರಾವಣ_ಮಾಸದ ಮೊದಲ ದಿನವಾದ ಬೇಡಗಂಪಣ ಅರ್ಚಕರಿಂದ ಶ್ರೀ ಸ್ವಾಮಿಗೆ 108 ಕುಂಭಾಭಿಷೇಕ ಪ್ರಯುಕ್ತ ಗಂಗಾಪೂಜೆ. ಗಣಪತಿಪೂಜೆ ಪುಣ್ಯಾಹ, ಪಂಚ ಕಳಶ, ನವಗ್ರಹ ಸಮೇತ ಮಹಾಮೃತ್ಯುಂಜಯ, ಅಷ್ಟದಿಕ್ಷಾಲಕರು. ಸಪ್ತ ಸಭಾ ದೇವತೆಗಳು ಕಳಸ ಉಮಾಮಹೇಶ್ವರ ಕಳಸ ಆವಾಹನೆ ಹಾಗೂ ಹೋಮಹವನ ಪೂಜೆಯನ್ನು ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಶ್ರೀ ರಘು ಎ.ಇ, ಕ.ಆ.ಸೇ (ಹಿರಿಯ ಶ್ರೇಣಿ) ರವರು ನೇತೃತ್ವದಲ್ಲಿ ಹಾಗೂ ಬೇಡಗಂಪನ ಅರ್ಚಕರ ವತಿಯಿಂದ ಹಾಗೂ ಶ್ರೀ ಸಾಲೂರು ಬೃಹನ್ಮಠಾಧ್ಯಕ್ಷರಾದ ಪಟ್ಟದ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿಗಳರವರ ಮತ್ತು ಗುಂಡೆಗಾಲದ ಮಲ್ಲಿಕಾರ್ಜುನ ಸ್ವಾಮೀಜಿಯವರ ಸಾನಿತ್ಯದಲ್ಲಿ* 108 ಕುಂಭಗಳ ಉತ್ಸವ ಮತ್ತು ಶ್ರೀ ಸ್ವಾಮಿಗೆ ಅಭಿಷೇಕಗಳೊಂದಿಗೆ ಶ್ರಾವಣ ಮಾಸದ ಪೂಜೆ ವಿಜೃಂಭಣೆಯಿಂದ ನಡೆಯಿತು, ಮಹದೇಶ್ವರಬೆಟ್ಟ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು ಬಂದೋಬಸ್ತ್ ಕಲ್ಪಿಸಿದರು ಎಂದು ತಿಳಿಸಲಾಗಿದೆ .

About Mallikarjun

Check Also

ಆಶ್ರಯ ಮನೆಗಳ ಕಾಮಗಾರಿಪೂರ್ಣಗೊಳಿಸಿ ಅನುದಾನ ಪಡೆಯಿರಿ:ಮುಖ್ಯಾಧಿಕಾರಿ ನಾಗೇಶ,

Complete the work of shelter homes and get grant: Headmaster Nagesh ವರದಿ : ಪಂಚಯ್ಯ ಹಿರೇಮಠ.ಕಲ್ಯಾಣಸಿರಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.