Cooperation of officials and people’s representatives is necessary for the development of villages,,: Narayan

ವರದಿ : ಬಂಗಾರಪ್ಪ. ,ಸಿ .
ಹನೂರು :- ತಾಲ್ಲೂಕಿನ ಎಲ್ಲೆಮಾಳ ಗ್ರಾಮ ಪಂಚಾಯಿತಿಯ ಕಛೇರಿಯ ಮುಂಭಾಗದಲ್ಲಿ ಆಯೋಜಿಸಿದ್ದ 2023 24ನೇ ಸಾಲಿನ ನರೇಗಾ ಯೋಜನೆ ಸಾಮಾಜಿಕ ಪರಿಶೋಧನೆ ಹಾಗೂ 14 ಮತ್ತು 15ನೇ ಹಣಕಾಸು ಯೋಜನೆಯ ಗ್ರಾಮ ಸಭೆಯನ್ನು ಆಯೋಜಿಸಲಾಗಿದೆ ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಂಡು ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಾಮಾಜಿಕ ಲೆಕ್ಕಪರಿಶೋಧಕರಾದ ನಾರಾಯಣ್ ತಿಳಿಸಿದರು .
ನಂತರ ಮಾತನಾಡಿದ ಅವರು ಗ್ರಾಮ ಪಂಚಾಯತಿಯಲ್ಲಿ
ಕಳೆದ 01 ವರ್ಷದಲ್ಲಿ ನರೇಗಾ ಯೋಜನೆಯಡಿ ರೇಷ್ಮೆ ಇಲಾಖೆ 08 ಕಾಮಗಾರಿ, ಕೃಷಿ ಇಲಾಖೆ 04 ಕಾಮಗಾರಿ ಒಟ್ಟು 144 ಕಾಮಗಾರಿಗಳನ್ನು ಕೈಗೊಂಡಿದ್ದು ಕೂಲಿ ಮೊತ್ತ 96, 92, 352 ಲಕ್ಷ ರೂ. ಸಾಮಾಗ್ರಿ ಮೊತ್ತ 75,18,598 ಲಕ್ಷ ರೂ. ಒಟ್ಟು 1,68,05,206 ಲಕ್ಷ ರೂಗಳು ಖರ್ಚಾಗಿರುತ್ತದೆ ಎಂದು ಸವಿವರವಾಗಿ ತಿಳಿಸಿದ ಅವರು ಸರ್ಕಾರಕ್ಕೆ ಕಟ್ಟಬೇಕಾದ ಲಕ್ಷ ರೂ. ತೆರಿಗೆ ಹಣವನ್ನು ಕಟ್ಟಿರುವುದಿಲ್ಲ ಎಂದು ಸಭೆಯಲ್ಲಿ ತಿಳಿಸಿದರು.
ಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಪರಿಶೋಧನಾ ತಂಡದವರು ಕಾಮಗಾರಿ ಸ್ಥಳ ಪರಿಶೀಲನೆ ನಡೆಸುತ್ತಿದ್ದು ಕಾಮಗಾರಿಗಳ ದಾಖಲೆ ಕಡತಗಳು ಕ್ಯಾಸ್ ಪುಸ್ತಕ ಸಾಮಾಗ್ರಿ ಬಿಲ್ ರೇಷ್ಮೆ ಇಲಾಖೆ ಹಾಗೂ ಅರಣ್ಯ ಇಲಾಖೆ ಸೇರಿದಂತೆ ಒಟ್ಟು ಕಡತಗಳನ್ನೂ ಕೊಟ್ಟಿರುವುದಿಲ್ಲ. ಮೇಲ್ಕಂಡ ಸಿಬ್ಬಂದಿಗಳು ಯಾವುದೇ ರೀತಿ ಮಾಹಿತಿ ನೀಡಿಲ್ಲ ಎಂದರು.
15ನೇ ಹಣಕಾಸು ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗೆ ಬಿಡುಗಡೆ ಹಾಗಿರುವ ಒಟ್ಟು ಮೊತ್ತ 1,27,97,183 ಲಕ್ಷ ರೂ ಆದರೆ ಹಲವು ಅಭಿವೃದ್ಧಿ ಯೋಜನೆಗಳಿಗೆ 80,00,000 ಲಕ್ಷ ರೂಗಳನ್ನು ಖರ್ಚು ಮಾಡಲಾಗಿದೆ ಎಂದು ವಿವರಣೆಯನ್ನು ತಿಳಿಸಿಕೊಟ್ಟರು. ಈ ಹಣವು ಗ್ರಾಮಗಳ ಜನಸಂಖ್ಯೆ ಆಧಾರದ ಮೇಲೆ ಬರುತ್ತಿದೆ. ಗ್ರಾಮಗಳ ಸ್ವಚ್ಚತೆ ಕುಡಿಯುವ ನೀರು ಬೀದಿ ದೀಪ ನಿರ್ವಾಹಣೆ ನೌಕರರ ವೇತನ ಬಳಕೆ ಮಾಡಬಹುದು ಎಂದು ತಿಳಿಸಿದರು.
ನೋಡೆಲ್ ಅಧಿಕಾರಿ ಪಶು ವೈದ್ಯಾಧಿಕಾರಿಗಳಾದ ಅನಿಲ್ ಮಾತನಾಡಿ ಸಾಮಾನ್ಯವಾಗಿ ಹಸುಗಳಿಗೆ ಕಾಲು ಬಾಯಿ ರೋಗ ,ಘಂಟು ರೋಗ ,ಚರ್ಮರೋಗ ಗಳನ್ನು ಬರದಂತೆ ಪ್ರಯತ್ನಿಸಿದ್ದರೆ ನಾವು ರಾಸುಗಳ ಪೋಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಮಲಮ್ಮ ,ಸದಸ್ಯರುಗಳಾದ ಗೋವಿಂದು ,ಇತೀಯಬೇಗಂ,ಸುಮೀಯಖಾನಂ ,ರಾಜಪ್ಪ ,ಗೀತಬಾಯಿ ,ಹಾಗೂ ಗ್ರಾಮಸ್ಥರು ಸೇರಿದಂತೆ ಇನ್ನಿತರರು ಭಾಗವಹಿಸಿದರು.