Bull died due to lightning – register a case
ಕಾನಹೊಸಹಳ್ಳಿ :- ಸಿಡಿಲು ಬಡಿದು ಎತ್ತು ಮೃತಪಟ್ಟಿರುವ ಘಟನೆ ಗುಂಡು ಮುಣು ಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮಾಡ್ಲಾ ಕನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಭಾನುವಾರ ಸಂಜೆ ಜರುಗಿದೆ.
ಮಾಡ್ಲಾ ಕನಹಳ್ಳಿ ಗ್ರಾಮದ ದೊಡ್ಡಬಾ ಲಪ್ಪ ಎಂಬುವರು ವ್ಯವಸಾಯದ ಕೆಲಸಕ್ಕಾಗಿ ಮೂರು ತಿಂಗಳ ಹಿಂದೆ 85, ಸಾವಿರ ರೂ ಗಳಿಗೆ 2 ಎತ್ತುಗಳನ್ನು ಖರೀದಿ ಮಾಡಿ ಕೊಂಡು ಬಂದಿದ್ದ ಈ ಎರಡು ಎತ್ತುಗಳನ್ನು ಮನೆಯಲ್ಲಿ ಸಾಕಿಕೊಂಡು ಬಂದಿದ್ದ.
9. 2024ರಂದು ದೊಡ್ಡ ಬಾಲಪ್ಪ ಮತ್ತು ಆತನ ಮಗ ಹಾಗೂ ಇತರರು ಜಮೀನಿನಲ್ಲಿ ಜೋಳ ಕುಯ್ಯಲು ಹೋಗಿದ್ದ ರು.ಎತ್ತುಗಳನ್ನು ಹೊಲದ ಬದುವಿನಲ್ಲಿ ಕಟ್ಟಿ ಹಾಕಿದ್ದನು ಸಂಜೆ 6:30 ಸಮಯದಲ್ಲಿ ಗುಡುಗು ಮಿಂಚು ಸಹಿತಮಳೆ ಸುರಿಯುತ್ತಿದ್ದರಿಂದ ಜೋಳ ಕೊಯ್ಯಲು ಬಂದಿರುವ ದೊಡ್ಡ ಬಾಲಪ್ಪ ಮತ್ತು ಮಗ ಇತರರು ಗಿಡಗಳ ಮರೆಯಲ್ಲಿ ಅಮಿತು ಕೊಂಡಿದ್ದೆವು ಸ್ವಲ್ಪ ಹೊತ್ತಿನಲ್ಲಿ ಮಳೆ ಬಿಟ್ಟ ನಂತರ ಬಂದು ಎತ್ತುಗಳನ್ನು ನೋಡಿದಾಗ ಒಂದು ಎತ್ತು ಮೃತಪಟ್ಟಿತ್ತು ಇನ್ನೊಂದು ಎತ್ತನ್ನು ಬೇರೆ ಕಡೆ ಕಟ್ಟಿದ್ದರಿಂದ ಸುರಕ್ಷಿತವಾಗಿ ಇತ್ತು. ಕಷ್ಟಪಟ್ಟು ಕೂಲಿ ಮಾಡಿ ದುಡಿದು ವ್ಯವಸಾಯ ಮಾಡಲಿಕ್ಕೆ ಖರೀದಿ ಮಾಡಿಕೊಂಡು ಬಂದ ಸುಮಾರು 50, ಸಾವಿರ ಬೆಲೆ ಬಾಳುವ ಎತ್ತು ಸಿಡಿಲು ಬಡಿದು ಮೃತಪಟ್ಟಿರುವುದರಿಂದ ಎ ತ್ತಿನ ಸಾವಿನ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ದೊಡ್ಡಬಾ ಲಪ್ಪ ಕೊಟ್ಟ ದೂರಿನಂತೆ ಕಾನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.