A bike accident is a fatality.

ಕಲ್ಯಾಣ ಸಿರಿ ವಾರ್ತೆ ಕೊಪ್ಪಳ.
ಕುಕನೂರು : ಪಟ್ಟಣದ ನವೋದಯ ವಿದ್ಯಾಲಯದ ಹತ್ತಿರದ ರಸ್ತೆಯಲ್ಲಿ ಬೈಕ್ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಒರ್ವ ಯುವಕ ಸಾವನಪ್ಪಿರುವ ಘಟನೆ ನೆಡೆದಿದೆ.
ಫೆ.23ರ ರವಿವಾರದಂದು ಮಧ್ಯಾಹ್ನ12 ಗಂಟೆ ಸುಮಾರಿಗೆ ಕುಕನೂರು ಪಟ್ಟಣದಿಂದ ಗುದ್ನೇಪ್ಪನಮಠದ ಕಡೆಗೆ ಹೋಗುತ್ತಿರುವ ಬೈಕ್ ಸವಾರನ ನಿಯಂತ್ರಣ ತಪ್ಪಿದ್ದರಿಂದ, ಅಪಘಾತ ಸಂಭವಿಸಿ ಹಿಂಬದಿ ಸವಾರ ಕಕ್ಕಿಹಳ್ಳಿ ಗ್ರಾಮದ ಶರಣಯ್ಯ ವೀರಭದ್ರಯ್ಯ ಮಾಟರಂಗಿ (26) ಎಂಬ ಯುವಕ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ನೆಡೆದಿದೆ.
ಬೈಕ್ ಸಾವರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾನೆ.
ಈ ಕುರಿತು ಕುಕನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.