Breaking News

ಸಿದ್ದಾಪುರ-ಜಮಾಪುರ ಮುರಾರ್ಜಿ ವಸತಿ ನಿಲಯದಲ್ಲಿನವಿದ್ಯಾರ್ಥಿಗಳ ಊಟದಲ್ಲಿ ದಿನನಿತ್ಯ ಹುಳುಗಳು ಕಳಪೆ ಮಟ್ಟದ ಆಹಾರ ಪೂರೈಕೆ SFI ಖಂಡನೆ

Siddapur-Jamapur Murarji hostel daily worms in student’s meals Poor level of food supply SFI condemns

ಜಾಹೀರಾತು

ಗಂಗಾವತಿ, ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲು ಇಂಗ್ಲಿಷ್ ಮಾಧ್ಯಮದಲ್ಲಿ 6 ರಿಂದ 10ನೇ ತರಗತಿ ಹಾಗೂ PUC ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳನ್ನು ಮೆರಿಟ್ ಆದರೆ ಮೇಲೆ ಆಯ್ಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ವಸತಿ ಸಹಿತ ಹಾಸ್ಟೆಲ್ ಗಳನ್ನು ಪ್ರಾರಂಭ ಮಾಡಲಾಗಿದೆ ಈ ಯೋಜನೆಯು ರಾಜ್ಯ ಸರ್ಕಾರ ಜಾರಿ ಮಾಡಿದೆ ಇದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಆಹಾರಕ್ಕಾಗಿ ಪ್ರತಿ ತಿಂಗಳು 1750 ರೂಪಾಯಿಗಳನ್ನು ಕೊಡುತ್ತ ಇದೆ. ಜೊತೆಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್, ಸೇರಿದಂತೆ ಗುಣಮಟ್ಟದ ಶಿಕ್ಷಣ ಕೊಡಲು ಉತ್ತಮವಾದ ಕಟ್ಟಡ ಸೌಲಭ್ಯವನ್ನು ಹೊಂದಿದ್ದರು ಸಹ ಅಧಿಕಾರಿಗಳ ದಿವ್ಯ ನಿರ್ಲಕ್ಷತನದಿಂದಾಗಿ ಕಾರಟಗಿ ತಾಲೂಕಿನ ಸಿದ್ದಾಪುರ ಜಮಾಪುರ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಎರಡು ತಿಂಗಳಿನಿಂದ ಕಳಪೆ ಮಟ್ಟದ ಆಹಾರದ ಜೊತೆಗೆ ದಿನನಿತ್ಯ ಟಿಫನ್ ಮತ್ತು ಊಟದಲ್ಲಿ ಹುಳಗಳನ್ನು ಒಳಗೊಂಡಂತೆ ಅಡುಗೆ ಮಾಡುತ್ತಿದ್ದಾರೆ, ದಿನಾಲು ವಿದ್ಯಾರ್ಥಿಗಳು ಹುಳಗಳೊಂದಿಗೆ ಇರುವ ಆಹಾರವನ್ನೇ ಊಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರೋದು ಅತ್ಯಂತ ಹೀನ ಮತ್ತು ಶೋಚನೀಯ ವಿಷಯವಾಗಿದೆ ಎಂದು ಹಾಸ್ಟೆಲ್ ಗೆ ಬೇಟೆ ನೀಡಿದ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಸಂಘಟನೆಯ ರಾಜ್ಯಾದ್ಯಕ್ಷರಾದ ಅಮರೇಶ ಕಡಗದ ವಿಷದ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವು ದಲಿತ ಸಮುದಾಯದ ವಿದ್ಯಾರ್ಥಿಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗುಣಮಟ್ಟದ ಆಹಾರ ಕೊಡಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಚಿವರು ಹೇಳುತ್ತಾರೆ ಆದರೆ ಇಲ್ಲಿನ ವಿದ್ಯಾರ್ಥಿಗಳಿಗೆ ಹುಳಗೊಳೊಂದಿಗೆ ಇರುವಂತಹ ಹಾರವನ್ನು ಊಟ ಬಡಿಸುತ್ತಾರೆ, ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಹಣ ಸಂಗ್ರಹ ಮಾಡಬಾರದು ಎಂದು ಕ್ರೈಸ್ ಇಲಾಖೆಯಿಂದ ಆದೇಶ ಇದ್ದರು ಸಹ ಈ ಶಾಲೆಯ ಪ್ರಾಚಾರ್ಯರು ಶಾಲೆಗೆ ಸುಣ್ಣಬಣ್ಣ ಬಡಿಯಲು ಪ್ರತಿಯೊಬ್ಬ ವಿದ್ಯಾರ್ಥಿಯಿಂದ 700 ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಈ ಹಿಂದಿನ ಪ್ರತಿಯೊಬ್ಬ ವಿದ್ಯಾರ್ಥಿಗಳಿಂದ 1000, ತೆಗೆದುಕೊಂಡಿದ್ದಿರು ಸಹ ಇಲ್ಲಿವರಿಗೆ ಶಾಲೆಗೆ ಸುಣ್ಣ ಬಣ್ಣ ಹಚ್ಚಿರುವುದಿಲ್ಲ, ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಊಟದ ಪ್ಲೇಟು, ಬೇಡ್ ಕಾಟ್, ಶೂ, ಸಾಕ್ಸು ಏನು ಕೊಟ್ಟಿರಿವುದಿಲ್ಲ ಕೆವಲ ಹೆಸರಿಗೆ ಮಾತ್ರ ಮೂಲಭೂತ ಸೌಲಭ್ಯಗಳನ್ನು ಕೊಡುತ್ತವೆ ಎಂದು ಹೇಳುತ್ತಾರೆ ಇಲ್ಲವೇ ಮಕ್ಕಳ ಹೆಸರನಲ್ಲಿ ಲೂಟಿ ಮಾಡುತ್ತಾ ಇದ್ದಾರೆ ಎಂದು ಸಂಘಟಕರ ಪ್ರಶ್ನೆ.

ವಸತಿ ನಿಲಯದಲ್ಲಿ ರಾತ್ರಿ ಸಮಯದಲ್ಲಿ ಕರೆಂಟ್ ಇಲ್ಲದ ಸಂದರ್ಭದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲ, ರಾತ್ರಿ ವೇಳೆಯಲ್ಲಿ ಇಲ್ಲಿ ಹಾವುಗಳು ಬರುತ್ತವೆ, ಹಾಸ್ಟೆಲ್ ಮತ್ತು ಕಾಲೇಜ್ ನಲ್ಲಿ ವಿದ್ಯಾರ್ಥಿಗಳಿಗೆ ಕುಡಿಯಲು ನೀರು ಇಲ್ಲ, ಸ್ಲಿಪ್ಪರ್ ಸ್ಟ್ಯಾಂಡು, ಕೀಟ್, ಸೋಪು, ಪೇಸ್ಟು, ಕೊಬ್ಬರಿ ಎಣ್ಣೆ ಕೊಡದೇ ಇರವುದನ್ನು ನೋಡಿದರೆ ವಿದ್ಯಾರ್ಥಿಗಳಿಗೆ ಕನಿಷ್ಠ ಸೌಲಭ್ಯಗಳನ್ನು ಕೊಡುವಲ್ಲಿ ಇಲಾಖೆಯು ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ SFI ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಶಿವಕುಮಾರ, ಪ್ರಮುಖರಾದ ರಾಜಭಕ್ಷಿ, ಮೌನೇಶ, ಶಂಕರ, ಪ್ರಶಾಂತ ಹಾಗೂ ಅಮ್ಮ ಆದ್ಮಿ ಪಕ್ಷದ ಜಿಲ್ಲಾ ಸಂಘಟನೆ ಕಾರ್ಯದರ್ಶಿ ಯರಿಸ್ವಾಮಿ ಕುಂಟೋಜಿ ಇತರರು ಇದ್ದರು.

About Mallikarjun

Check Also

ಹದಿನೈದು ದಿನವಾದರೂ ಬರದ ಕಸ ವಿಲೇವಾರಿ ವಾಹನ,,! ಸಾರ್ವಜನಿಕರ ಗೋಳು ಕೇಳುವವರು ಯಾರು ??

The garbage disposal vehicle hasn't arrived for fifteen days! Who listens to the public's complaints? …

Leave a Reply

Your email address will not be published. Required fields are marked *