Breaking News

ಮಾನವ ಕಳ್ಳ ಸಾಗಾಣಿಕೆ ತಡೆಗೆ ಒಗ್ಗೂಡಿ; ಜಯಶ್ರೀ ಬಿ ದೇವರಾಜ್ 

Unite to stop human trafficking; Jayashree B Devaraj

 

ಪ್ರಸ್ತುತ ಸಮಾಜದಲ್ಲಿ ಮಾನವ ಕಳ್ಳ ಸಾಗಾಣಿಕೆ ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಮಕ್ಕಳು, ಯುವತಿಯರು ಹಾಗೂ ಹೆಣ್ಣು ಮಕ್ಕಳನ್ನು ಬಲಿಪಶು ಮಾಡಿ, ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಆಪ್ತ  ಸಮಾಲೋಚಕರು ಜಯಶ್ರೀ ಬಿ ದೇವರಾಜ್ ಹೇಳಿದರು. 

 ಗಂಗಾವತಿ :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ  ಕೊಪ್ಪಳ ಹಾಗೂ ವೀರು ಗ್ರಾಮೀಣ ಅಭಿವೃದ್ಧಿ  ಸಂಸ್ಥೆಯ ಸಂಯೋಗದೊಂದಿಗೆ ನೊಂದ ಮಹಿಳಾ ಸಾಂತ್ವನ ಕೇಂದ್ರದಿಂದ ವಿಶ್ವ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯ ಕಾರ್ಯಕ್ರಮ ಜರಗಿತು.

ಈ ವೇಳೆ ಆಪ್ತ ಸಮಾಲೋಚಕರು ಜಯಶ್ರೀ ಬಿ ದೇವರಾಜ್ ಮಾತನಾಡಿ ಇಂದು ಮಾನವ ಕಳ್ಳ ಸಾಗಾಣಿಕೆ ಗಂಭೀರ ವಿಷಯವಾಗಿದೆ. ಮಕ್ಕಳನ್ನು ಅಪಹರಿಸಿ ಅಪರಾಧ ಚಟುವಟಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ.18 ವರ್ಷದ ಒಳಗಾಗಿರುವ ಯುವತಿಯರಿಗೆ ಆಮಿಷವೊಡ್ಡಿ, ಅಕ್ರಮ ಚಟುವಟಿಕೆಗಳಿಗೆ ತಳ್ಳುವ ಸಂಭವ ಇದೆ.ಮಾನವ ಕಳ್ಳ ಸಾಗಾಣಿಕೆ ಮೂಲಕ ಸಣ್ಣ ಮಕ್ಕಳನ್ನು ಭಿಕ್ಷಾಟನೆಗೆ, ಅಂಗಾಗಗಳ ಮಾರಾಟದ ಜಾಲಗಳಿಗೆ ತಳ್ಳಾಗುತ್ತಿದೆ, ಮಾನವ ಕಳ್ಳ ಸಾಗಾಣಿಕೆ ತಡೆಯ ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಸುತ್ತಿರುವ ಪ್ರತಿಯೊಬ್ಬರು ಜಾಗರೂಕರಾಗಿದ್ದು, ಈ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಚಿಸಿರುವ ಹಲವು ಕಾನೂನು ಹಾಗೂ ಕಾಯ್ದೆಗಳನ್ನು ಬಳಸಿ ಮಾನವ ಕಳ್ಳ ಸಾಗಾಣಿಕೆಗೆ ತುತ್ತಾದವರ ಹಕ್ಕುಗಳನ್ನು ರಕ್ಷಿಸಿ, ಸೂಕ್ತ ನೆರವು ನೀಡಬೇಕು ಎಂದು ಹೇಳಿದರು.

ಶಿಶು ಯೋಜನಾ ಕಾರ್ಯಾಲಯ ಅಂಗನವಾಡಿ ಮೇಲ್ವಿಚಾರಕರು ಸುಜಾತ ಮತ್ತು ಶಾಹಿನ್ ಬಾನು ಮಾತನಾಡಿ ಮಾನವ ಕಳ್ಳ ಸಾಗಾಣಿಕೆ ತಡೆಯಲು ಗ್ರಾಮ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಸಮಿತಿಗಳನ್ನು ಸ್ಥಾಪಿಸಲಾಗಿದೆ,ಇತಿಹಾಸದ ಉದ್ದಕ್ಕೂ ಬೇರೆ ಬೇರೆ ಕಾರಣಗಳಿಗೆ ದೌರ್ಜನ್ಯ ನಡೆದ ಘಟನೆಗಳು ಇವೆ. ಪ್ರಸ್ತುತ ಮಾನವ ಕಳ್ಳ ಸಾಗಾಣಿಕೆ ರೂಪದಲ್ಲಿ ಈ ದೌರ್ಜನ್ಯ ಮುಂದುವರೆದಿದ್ದು, ಮಕ್ಕಳು ಹಾಗೂ ಮಹಿಳೆಯರ ಬಲಿ ಪಶು ಆಗುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಇದನ್ನು ತಡೆಗಟ್ಟಲು ಜಿಲ್ಲಾ ಮಟ್ಟದ ಕಾರ್ಯಪಡೆಗಳ ಎಲ್ಲಾ ಇಲಾಖೆಗಳು ಪರಸ್ಪರ ಸಹಕಾರ ನೀಡಬೇಕು. ಆಗ ಮಾತ್ರ ಇದನ್ನು ತಡೆಗಟ್ಟಲು ಯಶಸ್ವಿಯಾಗಲಿದ್ದೇವೆ ಎಂದರು.

 ನಂತರ ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವುದಾಗಿ ಪ್ರತಿಜ್ಞಾ ಮಾಡಿದರು.

 ಈ ಸಂದರ್ಭದಲ್ಲಿ ರೀಡ್ಸ್ ಸಂಸ್ಥೆಯ ಪ್ರವೀಣ್,  ಜ್ಯೋತಿ ತಾಲೂಕು ಸಂಚಾಲಕರು, ಮಂಜುನಾಥ್, ಐಶ್ವರ್ಯ, ನೇತ್ರಾವತಿ, ಸಾಂತ್ವಾನ ಕೇಂದ್ರದ ಸಿಬ್ಬಂದಿಗಳು ಹಾಗೂ ಅಂಗನವಾಡಿ ಶಿಕ್ಷಕರು ಉಪಸ್ಥಿತರಿದ್ದರು.

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.