Breaking News

ಕರ್ನಾಟಕ ಪತ್ರಕರ್ತರ ಸಂಘ ಪತ್ರಕರ್ತರಿಗೆ ರಾಜ್ಯದಲ್ಲಿಯೇಪ್ರಥಮವಾಗಿ ಶ್ಲಾಘನಿಯ ಕೆಲಸ ಮಾಡಿದೆ- ಶಾಸಕ ಎಸ್ ವೈ ಮೇಟಿ

Karnataka Journalists Association has done commendable work for journalists first in the state - MLA SY Matey

ಬಾಗಿಲಕೋಟೆ -ಜು.30– ಕರ್ನಾಟಕ ಪತ್ರಕರ್ತರ ಸಂಘ ರಾಜ್ಯ ಸಮಿತಿಯಿಂದ ಇಂದು ಬಾಗಿಲಕೋಟೆ ಜಿಲ್ಲೆಯ ನವನಗರ ದಲ್ಲಿ ಪತ್ರಿಕಾ ದಿನಾಚರಣೆ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನ ಬಾಗಿಲಕೋಟೆ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿ ನಡೆಸಿಕೊಟ್ಟಿದೆ. ಸಭೆಯ ಸಾನಿಧ್ಯವನ್ನ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪೋಜ್ಯ ಶ್ರೀ ಅಲ್ಲಮಪ್ರಭು ಸಾಮೀಜಿಗಳು ವಹಿಸಿದ್ದರು. ಕಾರ್ಯಕ್ರಮಮದ ಮುಖ್ಯಅಥಿತಿಗಳಾಗಿ

ಜಾಹೀರಾತು

ಬಾಗಿಲಕೋಟೆಯ ಶಾಸಕರಾದ ಎಸ್ ವೈ ಮೇಟಿಯವರು ಆಗಮಿಸಿ ಸಮಾರಂಭವನ್ನ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ಪತ್ರಿಕೆ ನಡೆಸುವುದು ತುಂಬಾ ಕಷ್ಟ, ಪತ್ರಕರ್ತರ ಕೆಲಸ ತುಂಬಾ ಕ್ಲಿಷ್ಟ, ಸಮಾಜದ ಮತ್ತು ದೇಶದ ಬದಲಾವಣೆಯಲ್ಲಿ ಪತ್ರಿಕಾಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ, ಸಂಘದ ಮತ್ತು ಪತ್ರಕರ್ತರ ಎಲ್ಲಾ ಸಹಕಾರ ಸಹಾಯವನ್ನ ಸರ್ಕಾರದ ಮುಖಾಂತರ ಮಾಡುತ್ತೇನೆ ಈ ಕುರಿತು ಮುಖ್ಯ ಮಂತ್ರಿಗಳಲ್ಲಿ ಮಾತಾನಾಡುತ್ತೇನೆ. ಪತ್ರಕರ್ತರ ಕಲ್ಯಾಣಕ್ಕಾಗಿ ಶ್ರಮಿಸುವ ಸಮಾರಂಭ ಯಶಸ್ವಿಯಾಗಲಿ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನ ಮುರುಗೇಶ ಶಿವಪುಜೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿ ಸಂಘವು ಪ್ರಾರಂಭದಿಂದಲೂ ಸರ್ಕಾರ ಮತ್ತು ಯಾರಿಂದಲೂ ಸಹಾಯ ನಿರೀಕ್ಷೆಮಾಡದೆ ಸದಸ್ಯರಿಗೆ ಮಾಡುತ್ತಿರುವ ಸಹಾಯಗಳನ್ನ ತಿಳಿಸಿದರು, ಸಂಪಾದಕರು ಮತ್ತು ವಾರದಿಗಾರರಾಲ್ಲದೆ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲಾ ಸದಸ್ಯರಿಗೋ 4 ಲಕ್ಷ ರೊ ವಿಮೆ ಮತ್ತು ಹಣಕಾಸಿನ ಸಹಾಯ ಮಾಡುತ್ತಿದೆ ಎಂದು ಹೇಳಿ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.

ಸಾನಿಧ್ಯ ವಹಿಸಿದ್ದ ಶ್ರೀಗಳು ಮಾತನಾಡಿ ವ್ಯಕ್ತಿಯ ವಿಶೇಷ ಬೆಳವಣಿಗೆಯನ್ನ ಪತ್ರಿಕೆ ಮಾಡುತ್ತಿದೆ, ಗ್ರಾಮೀಣ ಭಾಗದ ಪತ್ರಕರ್ತರನ್ನ ಗುರುತಿಸಿ ಅವರಿಗೆ ವಿಶೇಷ ಸಹಾಯ ಮಾಡುತ್ತಿರುವ ಪ್ರಥಮ ಏಕೈಕ ಸಂಘ ಕರ್ನಾಟಕ ಪತ್ರಕರ್ತರ ಸಂಘ, ಈ ಕೆಲಸ ಉಳಿದ ಸಂಘಗಳಿಗೆ ಮಾದರಿಯಾಗಬೇಕು, ಪತ್ರಕರ್ತರು ಒಳ್ಳಿಯ ಮನಸ್ಥಿತಿ ಇಟ್ಟುಕೊಂಡು ಕೆಲಸ ಮಾಡಬೇಕು, ಇವರ ಜವಾಬ್ದಾರಿ ಮಹತ್ವದ್ದಾಗಿದೆ, ಸಮಾಜದಲ್ಲಿ ಶಾಂತಿ ಮೋಡಿಸುವ ಕೆಲಸವನ್ನು ಮಾಡಬೇಕು, ಸಮಾಜಕ್ಕೆ ಒಳ್ಕೆಯದಾಗಿಸುವ ಮತ್ತು ಒಳ್ಳೆಯದನ್ನು ಮಾಡುತ್ತಿರುವ ವ್ಯಕ್ತಿಗಳನ್ನ ಮಾಡಬೇಕು. ಪತ್ರಕರ್ತ ರಿಗೆ ಇರುವ ಕಷ್ಟಗಳನ್ನು ಪ್ರತಿಬಿಂಬಿಸಿ ಅವುಗಳನ್ನು ನಿವಾರಿಸುವ ಕಾರ್ಯವನ್ನು ಕರ್ನಾಟಕ ಪತ್ರಕರ್ತರ ಸಂಘ ಮಾಡಲಿ ಎಂದು ಆಶೀರ್ವಾದ ನೀಡಿದರು.

ವೇದಿಕೆಯಲ್ಲಿ ಸಂಘದ ರಾಜ್ಯ ಪದಾಧಿಕಾರಿಗಳು, ಎಲ್ಲಾ ಜಿಲ್ಲೆಯ ಅಧ್ಯಕ್ಷರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಬಾಗಿಲಕೋಟೆ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಿ ಬಿ ವಿಜಯಶೆಂಕರ್ ಸ್ವಾಗತಿಸಿದರು, ಸುದೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

About Mallikarjun

Check Also

ಶ್ರೀ ಶಂಕರಾಚಾರ್ಯ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ.

Preparatory meeting on the occasion of Sri Shankaracharya Jayanthotsava. ಗಂಗಾವತಿ. ನಗರದ ತಹಸಿಲ್. ಕಚೇರಿಯ ಕಾರ್ಯಾಲಯದಲ್ಲಿ ಸೋಮವಾರದಂದು. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.