Breaking News

ಕೊಪ್ಪಳ: ವಾರ್ಡ್ ನಂ.೨೩ ರಲ್ಲಿ ರಸ್ತೆಗಳು ತುಂಬಾ ಹದಗೆಟ್ಟಿವೆ. ಮಳೆಗಾಲದಲ್ಲಂತೂ, ಕೆಸರುಗದ್ದೆಯಂತಾಗಿದೆ ಗುಣಮಟ್ಟದ ಡಾಂಬರ್ ರಸ್ತೆ ನಿರ್ಮಾಣ ಮಾಡುಲು ಮನವಿ

Koppala: Roads in Ward No.23 are very bad. A request to build a quality asphalt road is like a mud pit even in rainy season


ಕೊಪ್ಪಳ ನಗರದ ವಾರ್ಡ್ ನಂ.೨೩ ನ ಸಾರ್ವಜನಿಕರು ಮಾನ್ಯ ಪೌರಾಯುಕ್ತರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ,
ವಾರ್ಡ್ ನಂ.೨೩ ರಲ್ಲಿ ರಸ್ತೆಗಳು ತುಂಬಾ ಹದಗೆಟ್ಟಿವೆ. ಮಳೆಗಾಲದಲ್ಲಂತೂ, ಕೆಸರುಗದ್ದೆಯಂತಾಗಿದೆ. ತುಂಬಾ ದಿನಗಳಿಂದಲೂ ವಾರ್ಡ್ನಲ್ಲಿ ರಸ್ತೆಗಳೇ ಸರಿಯಲ್ಲ. ಅದರಲ್ಲೂ ‘ಗಾಂಧಿನಗರ’ ಎಂಬ ಏರಿಯಾದಲ್ಲಿ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ಸ.ಹಿ.ಪ್ರಾ.ಶಾಲೆ ಗಾಂಧಿನಗರಕ್ಕೆ ಹೋಗುವ ರಸ್ತೆ ತಗ್ಗು ದಿನ್ನೆಗಳಿಂದ ಕೂಡಿದೆ. ಶಾಲೆಗೆ ಹೋಗುವ ಹಾಗೂ ಬರುವ ಶಿಕ್ಷಕರ ವಾಹನ ಹಾಗೂ ಪಾಲಕರ ವಾಹನಗಳು ಸುತ್ತು ಬಳಸಿ ಬರುವ ಹಾಗೂ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಚ್ಚಾ ರಸ್ತೆಗಳಿಂದಾಗಿ ಹಿಡಿ ಶಾಪ ಹಾಕುತ್ತಾರೆ. ಪ್ರಮುಖವಾಗಿ ಕೊರಮ್ಮ & ದುರುಗಮ್ಮ ದೇವಿ ದೇವಸ್ಥಾನದಿಂದ ಹಿಡಿದು ಶಾಲಾ ಮಾರ್ಗವಾಗಿ ದುರುಗಪ್ಪ ಕನಕಮೈಲಿ ಮನೆಯ ವರೆಗೆ ಮತ್ತು ಒಂಟೇಲಿ ಗಂಗಪ್ಪನ ಮನೆಯಿಂದ ಕನಕಮೈಲಿ ದುರುಗಪ್ಪನ ಮನೆಯವರೆಗೆ ಹಾಗೂ ಮಶೀದಿಯಿಂದ ಕನಕಮೈಲಿ ದುರುಗಪ್ಪನ ಮನೆಯವರೆಗೆ ಮತ್ತು ಸಂಜೀವಪ್ಪ ದೊಡ್ಮನಿ ಮನೆಯಿಂದ ಸಾಬಪ್ಪ ಡಂಬಳ ಮನೆಯ ಮುಖಾಂತರ ದುರುಗಪ್ಪ ಕನಕಮೈಲಿ ಮನೆಯವರೆಗೆ ರಸ್ತೆಗಳ ನಿರ್ಮಾಣ ಮಾಡಬೇಕು.
ಈಗಾಗಲೇ ಮಳೆಗಾಲ ಆರಂಭವಾಗಿರುವುದರಿAದ ಮಳೆ ಮುಕ್ತಾಯ ಹಂತಕ್ಕೆ ಬಂದು ತಲುಪಿದೆ ಈಗಲಾದರೂ ನಗರಸಭೆಯವರು ಮುತುವರ್ಜಿವಹಿಸಿ ಹೊಸ ರಸ್ತೆಗಳ ನಿರ್ಮಾಣ ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು. ಒಳ್ಳೆಯ ಗುಣಮಟ್ಟದ ಡಾಂಬರ ರಸ್ತೆ ನಿರ್ಮಾಣ ಮಾಡಿಕೊಡಬೇಕು. ಕೊಳಚೆ ಪ್ರದೇಶವಾಗಿರುವುದರಿಂದ ವ್ಯವಸ್ಥೆಯ ನಿರ್ಲಕ್ಷö್ಯಕ್ಕೆ ಒಳಗಾಗುವ ಸಂಭವ ಬಹುತೇಕ ಇರುವುದರಿಂದ ಶಾಶ್ವತವಾಗಿ ಒಮ್ಮೆ ಡಾಂಬರ್ ರಸ್ತೆಗಳ ನಿರ್ಮಾಣವು ತುಂಬಾ ಅಗತ್ಯ ಇದೆ.
ಮಾನ್ಯ ಪೌರಾಯುಕ್ತರು ವಾರ್ಡ ನಂ.೨೩ ಗಾಂಧಿನಗರಕ್ಕೆ ಒಮ್ಮೆ ವೀಕ್ಷಿಸಿ ವಸ್ತುಸ್ಥಿತಿಯನ್ನು ಗಮನಿಸಿ, ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರಿಗೆ ಡಾಂಬರ್ ರಸ್ತೆ ನಿರ್ಮಿಸಲು ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಮಾಡುತ್ತೀರೆಂದು ನಂಬುತ್ತಾ, ವಾರ್ಡ್ನ ರಸ್ತೆಗಳನ್ನು ನಿರ್ಮಾಣ ಮಾಡುತ್ತಿರೆಂದು ಮತ್ತೊಮ್ಮೆ ವಿನಂತಿಸುತ್ತಾ ಈ ಮನವಿಯನ್ನು ಮಾನ್ಯ ಪೌರಾಯುಕ್ತರು ನಗರಸಭೆ ಕೊಪ್ಪಳÀ ಇವರಿಗೆ ವಾರ್ಡ್ ನ ಸಾರ್ವಜನಿಕರು ಮನವಿಯನ್ನು ಸಲ್ಲಿಸಿದರುಂ

About Mallikarjun

Check Also

ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರಜನ್ಮ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮಕ್ಕೆಕೊಪ್ಪಳದಿಂದ 100 ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ

More than 100 people from Koppal will participate in the closing ceremony of the founder …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.