Breaking News

ರಾಯಚೂರು ವಿಶ್ವವಿದ್ಯಾಲಯ:ಮಾಧ್ಯಮ ವಿದ್ಯಾರ್ಥಿಗಳಿಗೆ ಕೌಶಲ್ಯಗಳೇಬಂಡವಾಳ – ವಿಶ್ವನಾಥ್ ಹೂಗಾರ್

University of Raichur: Skills Capital for Media Students – Vishwanath Hoogar

ಜಾಹೀರಾತು

ರಾಯಚೂರು: ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ವಿದ್ಯಾರ್ಥಿಗಳಿಗೆ ಕೌಶಲ್ಯಗಳೇ ಬಂಡವಾಳ. ಬರವಣಿಗೆ, ಮಾತುಗಾರಿಕೆ, ಛಾಯಾಗ್ರಹಣ, ಸಂಕಲನ, ಕಾರ್ಯಕ್ರಮ/ಸಿನೆಮಾ ನಿರ್ಮಾಣ ಹೀಗೆ ಅನೇಕ ಕೌಶಲಗಳನ್ನು ರೂಢಿಸಿಕೊಳ್ಳಲು ಪತ್ರಿಕೋದ್ಯಮ ಶಿಕ್ಷಣದಲ್ಲಿ ಅವಕಾಶವಿದ್ದು, ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿತಲ್ಲಿ ಪತ್ರಿಕೆ, ರೇಡಿಯೋ, ಟೀವಿಯಂತಹ ಸಾಂಪ್ರದಾಯಿಕ ಮಾಧ್ಯಮಗಳಿರಲಿ ಅಥವಾ ಯೂಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್ಬುಕ್ನಂತಹ ನವ ಮಾಧ್ಯಮಗಳಿರಲ್ಲಿ ಎಲ್ಲಾ ಕ್ಷೇತ್ರದಲ್ಲೂ ಯಶಸ್ವಿಯಾಗಲು ಸಾಧ್ಯವಿದೆ ಎಂದು ಪತ್ರಕರ್ತ, ನ್ಯೂಸ್-18 (ಕನ್ನಡ) ಜಿಲ್ಲಾ ವರದಿಗಾರ ವಿಶ್ವನಾಥ್ ಹೂಗಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇತ್ತೀಚಿಗೆ ರಾಯಚೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ‘ಟೆಲಿವಿಷನ್ ಮಾಧ್ಯಮದಲ್ಲಿನ ಇತ್ತೀಚಿನ ವಿದ್ಯಮಾನಗಳು ಮತ್ತು ಉದ್ಯೋಗಾವಕಾಶಗಳು’ ವಿಷಯವಾಗಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ಸುಧಾರಣೆ ಮತ್ತು ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ ತುಂಬಾ ದೊಡ್ಡದಿದೆ. ಅಭಿವೃದ್ಧಿಯ ವೇಗ ವರ್ಧಕಗಳು ಅಂತ ಈ ಮಾಧ್ಯಮಗಳನ್ನ ಸಮಾಜ ವಿಜ್ಞಾನಿಗಳು ಕರೆದಿದ್ದಾರೆ. ಆದರೆ ವಿಪರ್ಯಾಸದ ರೀತಿಯಲ್ಲಿ ಇತ್ತೀಚಿಗೆ ಇದಕ್ಕೆ ವಿರುದ್ಧವಾದ ಸನ್ನಿವೇಶಗಳನ್ನು ಸಹ ನಾವು ನೋಡುತ್ತಿದ್ದೇವೆ. ಅವು ಏನು ಮತ್ತು ಅದಕ್ಕೆ ಕಾರಣ ಏನು ಅಂತ ಹುಡುಕುತ್ತಾ ಹೋಗುವುದಾದರೆ ಅನೇಕ ಉತ್ತರಗಳು ಸಿಗುತ್ತವೆ.

ಪತ್ರಿಕೋದ್ಯಮ ಕ್ಷೇತ್ರ ಸೇವಾ ಕ್ಷೇತ್ರವಾಗಿ ಉಳಿಯದೇ ಬಂಡವಾಳ ಶಾಹಿಗಳ ಕೈಗೆ ಸಿಲುಕಿ ಕೇವಲ ಉದ್ಯಮವಾಗಿ ಬೆಳೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಣ ಹೂಡಿಕೆ ಮಾಡಿ, ಹಣ ತೆಗೆಯುವುದಷ್ಟೇ ಉದ್ಯಮಿಗಳ ಮನಸ್ಥಿತಿಯಾಗಿರೋದರಿಂದ ಸಮಾಜಿಕ ಸುಧಾರಣೆ, ಅಭಿವೃದ್ಧಿ, ನೈತಿಕತೆ ಇವೆಲ್ಲಾ ಮಾಧ್ಯಮಗಳಿಂದ ನಿಧಾನವಾಗಿ ದೂರ ಸರಿದಿವೆ. ಜನ ಹೆಚ್ಚೆಚ್ಚು ತಮ್ಮ ಚಾನೆಲ್ ನೋಡೋದರಿಂದ ಟಿಆರ್ಪಿ ಜಾಸ್ತಿಯಾಗುತ್ತದೆ, ಟಿಆರ್ಪಿ ಜಾಸ್ತಿಯಾದಂತೆಲ್ಲಾ ಹೆಚ್ಚೆಚ್ಚು ಜಾಹಿರಾತು ಮತ್ತು ಹಣ ಸಿಗುತ್ತದೆ ಅನ್ನೋದೊಂದೇ ಮಾಧ್ಯಮ ಮಾಲೀಕರಿಗೆ ಕಾಣೋದು. ಅದಕ್ಕಾಗಿ ಏನು ಬೇಕಾದರೂ ಪ್ರಸಾರ ಮಾಡೋಕೆ ಅವರು ಸಿದ್ಧರಿರುತ್ತಾರೆ. ಇದೇ ಟಿರ್ಪಿಯ ಹಿಂದೆ ಬಿದ್ದ ನ್ಯೂಸ್ ಚಾನೆಲ್ಗಳು ಮಾಧ್ಯಮ ನೀತಿಸಂಹಿತೆಗಳನ್ನೆಲ್ಲಾ ಗಾಳಿಗೆ ತೂರಿ, ಬೆಕಿದ್ದು-ಬೇಡವಾದದ್ದು ಎಲ್ಲವನ್ನೂ ದಿನಗಟ್ಟಲೆ ತೋರಿಸುತ್ತಾರೆ. ಇದರಿಂದ ಜನರಿಗೆ ಅಥವಾ ಸಮಾಜಕ್ಕೆ ಏನು ಲಾಭ ಅನ್ನೋದನ್ನೂ ಕನಿಷ್ಟವಾಗಿ ಯೋಚಿಸುವುದಿಲ್ಲ. ಬಹುಶಃ ಹೀಗಿರೋದಕ್ಕೇ ಜನ ನ್ಯೂಸ್ ಚಾನೆಲ್ಗಳನ್ನ ಬಿಟ್ಟು ಮನರಂಜನಾ ಚಾನೆಲ್ಗಳ ಕಡೆಗೆ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಅಂತ ಇತ್ತೀಚಿನ ಕೆಲವು ಅಧ್ಯಯನ ವರದಿಗಳು ಹೇಳುತ್ತಿರುವುದು ಎಂದು ಕಳವಳ ವ್ಯಕ್ತಪಡಿಸಿದರು.

ವಿಭಾಗದ ಉಪನ್ಯಾಸಕರಾದ ಡಾ. ಮಲ್ಲಿಕಾರ್ಜುನ್.ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಸಂಯೋಜಕರಾದ ವಿಜಯ್ ಸರೋದೆ ಅತಿಥಿಗಳ ಪರಿಚಯ ಮಾಡಿಕೊಟ್ಟರು, ಡಾ. ಗೀತಮ್ಮ ಅಂಗಡಿ ನಿರೂಪಿಸಿದರು ಮತ್ತು ಡಾ. ಪ್ರಭಾ ಬಸವರಾಜ ಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಿಶ್ವನಾಥ್ ಹೂಗಾರ್ ಅವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

About Mallikarjun

Check Also

ಆಶ್ರಯ ಮನೆಗಳ ಕಾಮಗಾರಿಪೂರ್ಣಗೊಳಿಸಿ ಅನುದಾನ ಪಡೆಯಿರಿ:ಮುಖ್ಯಾಧಿಕಾರಿ ನಾಗೇಶ,

Complete the work of shelter homes and get grant: Headmaster Nagesh ವರದಿ : ಪಂಚಯ್ಯ ಹಿರೇಮಠ.ಕಲ್ಯಾಣಸಿರಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.