Breaking News

ಶ್ರೀ ಕೊಲ್ಲಿ ನಾಗೇಶ್ವರರಾವ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ರಂಗಮAದಿರ ನಿರ್ಮಾಣ: ಭೂದಾನಿಗಳ ಆಕ್ಷೇಪ

Construction of theater in front of Sri Kolli Nageswara Rao Gangaiah Government First Class College: Land Donors Objection

ಜಾಹೀರಾತು


ಗಂಗಾವತಿ: ಇಲ್ಲಿಯ ಆನೆಗೊಂದಿ ರಸ್ತೆ ಮಾರ್ಗದಲ್ಲಿರುವ ಶ್ರೀ ಕೊಲ್ಲಿ ನಾಗೇಶ್ವರರಾವ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಂದಿಕೊAಡು ಮುಂಭಾಗದಲ್ಲಿ ರಂಗಮAದಿರ ನಿರ್ಮಾಣವಾಗುತ್ತಿರುವದಕ್ಕೆ ಭೂ ದಾನಿಗಳು ಹಾಗೂ ಅಂತರಾಷ್ಟಿçÃಯ ಮಾನವ ಹಕ್ಕುಗಳ ಕರ್ನಾಟಕ ರಾಜ್ಯ ಆಯೋಗದ ರಾಜ್ಯಾದ್ಯಕ್ಷರಾಗಿರುವ ಡಾ. ಕೊಲ್ಲಿ ನಾಗೇಶ್ವರರಾವ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಕಳೆದ ೩೦ ವರ್ಷಗಳ ಹಿಂದೆ ಕಾಲೇಜು ಕಟ್ಟಡಕ್ಕಾಗಿ ಸುಮಾರು ೧೫೦ ಕೋಟಿ ರೂಪಾಯಿ ಬೆಲೆಬಾಳುವ ಸರ್ವೆ ನಂ. ೪೪/೪ ಪ್ರದೇಶದಲ್ಲಿ ೩ ಎಕರೆ ೨೮ ಗುಂಟೆ ಭೂಮಿಯನ್ನು ರಾಜ್ಯಪಾಲರ ಹೆಸರಿನಲ್ಲಿ ನೊಂದಾಯಿಸಿ ನೀಡಲಾಗಿತ್ತು. ಈಗ ಆ ಕಾಲೇಜು ಮುಂಭಾಗದಲ್ಲಿ ರಂಗಮAದಿರ ನಿರ್ಮಾಣ ಮಾಡುತ್ತಿದ್ದರಿಂದ ಶಾಲಾ ಕೋಠಡಿಯಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಬೆಳಕು, ಗಾಳಿ ಇಲ್ಲದೇ ತೊಂದರೆಯಾಗುತ್ತಿದೆ. ಈಗಾಗಲೇ ಕಾಲೇಜು ಆವರಣದಲ್ಲಿ ಎರಡು ಆಡಿಟೋರಿಯಂ ಹಾಲ್‌ಗಳಿದ್ದು, ಇದನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪರವರು ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಗಾಲಿ ಜನಾರ್ದನರೆಡ್ಡಿ ಅವರು ಉಪಸ್ಥಿತರಿದ್ದರು. ಈಗ ರಂಗಮAದಿರ ನಿರ್ಮಾಣವಾಗುತ್ತಿದ್ದರಿಂದ ಕಟ್ಟಡದ ಮುಂಭಾಗದ ಕಳೆ ಬಾರದಂತಾಗುತ್ತಿದೆ. ಪ್ರಸ್ತುತ ಕಟ್ಟಡ ನಿರ್ಮಾಣವಾಗುವುದರ ಬಗ್ಗೆ ಸ್ಥಳೀಯ ಶಾಸಕರ ನಿವಾಸದಲ್ಲಿ ಜುಲೈ-೭ ರಂದು ಭೇಟಿಯಾಗಿ ಲಿಖಿತವಾಗಿ ಪತ್ರ ಬರೆದು ತಡೆಹಿಡಿಯುವಂತೆ ಕೋರಲಾಗಿತ್ತು. ಅಲ್ಲದೇ ಕಾಲೇಜಿನ ಪ್ರಾಚಾರ್ಯ ಜಾಜಿ ದೇವೇಂದ್ರಪ್ಪ ಅವರಿಗೆ ಹಲವಾರು ಬಾರಿ ಮಾಹಿತಿ ನೀಡಲಾಗಿತ್ತು. ಕೂಡಲೇ ಶಾಸಕರು ಕಾಲೇಜಿನ ಪ್ರಾಚರ್ಯರಿಗೆ ದೂರವಾಣಿ ಮೂಲಕ ಕರೆಮಾಡಿ ರಂಗಮAದಿರ ಕಟ್ಟಡ ನಿರ್ಮಿಸಬಾರದು, ಕೇವಲ ಬಯಲು ರಂಗಮAದಿರ ನಿರ್ಮಿಸುವಂತೆ ಸೂಚಿಸಲಾಗಿತ್ತು. ಆದರೆ ಈಗ ಎರಡನೇ ಬಾರಿ ಶಾಸಕರ ಗಮನಕ್ಕೆ ತಂದಾಗ ಕಾಮಗಾರಿ ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಸೆಪ್ಟೆಂಬರ್-೮ ರಂದು ಕಟ್ಟಡದ ಆರ್‌ಸಿಸಿ ಹಾಕುವಾಗ ಭೂಮಾಲಿಕರು ಆಕ್ಷೇಪ ವ್ಯಕ್ತಪಡಿಸಿ ಶಾಸಕರು ಬರುವ ತನಕ ಕಾಮಗಾರಿ ಕೈಗೊಳ್ಳಬಾರದೆಂದು ಒತ್ತಾಯಿಸಿದರು. ಮತ್ತೇ ಗುತ್ತಿಗೆದಾರರು ಭೂಮಾಲೀಕರ ಮಾತು ಕೇಳದೆ ಪೊಲೀಸರನ್ನು ಕರೆಯಿಸಿ ಆರ್‌ಸಿಸಿ ಪ್ರಾರಂಭಿಸಿ ದೌರ್ಜನ್ಯ ಮಾಡಿದ್ದಾರೆಂದು ಅರೋಪಿಸಿದ್ದಾರೆ. ಕೂಡಲೆ ಈ ಕಟ್ಟಡದ ಕಾಮಗಾರಿ ನಿಲ್ಲಿಸದಿದ್ದರೆ ಕಾಲೇಜು ಆವರಣದಲ್ಲಿ ಭೂದಾನಿಗಳಾಗಿರುವ ಕೊಲ್ಲಿ ನಾಗೇಶ್ವರರಾವ ಕುಟಂಬದವರು ಕಾಲೇಜಿನ ಪ್ರಾಚರ್ಯರರು, ಮತ್ತು ಗುತ್ತಿಗೆದಾರನ ವಿರುದ್ಧ ಧರಣಿ ನಡೆಸಲಾಗುವದೆಂದು ಕೊಲ್ಲಿ ನಾಗೇಶ್ವರರಾವ ಎಚ್ಚರಿಸಿದ್ದಾರೆ.

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.