Udaya Raga Program: Narayanappa Drive
Music is a soothing tool for the mind

ಗಂಗಾವತಿ.:ಸoಗೀತ ಕಲೆ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿಗೆ ನೆಮ್ಮದಿ ನೀಡುವ
ಸಾಧನವಾಗಿದೆ. ಈ ಸಾಧನವನ್ನು ಮೈಗೂಡಿಸಿಕೊಳ್ಳಲು ಹೆಚ್ಚಿನ ರೀತಿ ಸಾಧನೆ
ಮಾಡಬೇಕಾಗುತ್ತದೆ ಎಂದು ರೈತ ಮುಖಂಡ ಹಾಗೂ ಹಿರೇಜಂತಕಲ್ ಶ್ರೀ
ಚನ್ನಬಸವೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಿ.ನಾರಾಯಣಪ್ಪ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ, ಶ್ರೀ ಚನ್ನಬಸವೇಶ್ವರ
ಟ್ರಸ್ಟ್ ಕಮಿಟಿ(ರಿ)ಹಿರೇಜಂತಕಲ್ ಇವರ ಸಹಯೋಗದಲ್ಲಿ ಶನಿವಾರ ನಗರದ
ಹಿರೇಜಂತಕಲ್‌ನ ಕಂಬಾರ ಓಣಿ ಶ್ರೀ ಚನ್ನಬಸವೇಶ್ವರ ದೇವಸ್ಥಾನದಲ್ಲಿ
ಆಯೋಜಿಸಿದ್ದ ಉದಯ ರಾಗ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು
ಮಾತನಾಡಿದರು. ಸಂಗೀತ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅವಶ್ಯಕತೆ
ಇದೆ. ಸಂಗಿತ ಕಾರ್ಯಕ್ರಮಗಳು ನಿರಂತರ ನಡೆದರೆ ಕಲಾವಿದರ ಪ್ರತಿಭೆ
ಹೊರ ಬರುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ನAತರ ಉದಯ ರಾಗ ಪ್ರಾಯೋಜತ್ವದಲ್ಲಿ ಕಲಾವಿದ ರಿಜ್ವಾನ್ ಮುದ್ದಾಬಳ್ಳಿಯಿಂದ
ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಕಲಾವಿದ ಯುವರಾಜ
ಕುರುಗೋಡ ಹಾರ್ಮೋನಿಯಂ ಸಾತ್ ನೀಡಿದರು. ಪಂಚಾಕ್ಷರ ಬಮಲಾಪುರ
ನಿರ್ವಹಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಶಿವಯ್ಯತಾತ, ಹಿರೇಜಂತಕಲ್‌ನ
ಮುಖAಡರಾದ ಬಸಪ್ಪ ಆನೆಗೊಂದಿ, ಶಿವಮ್ಮ ಹಿರೇಮಠ, ಟಿ.ಅಕ್ಷಯಕುಮಾರ,
ಮಂಜುನಾಥ ಕಾತರಕಿ, ನಾಗರಾಜ ನಸಿಪುಡಿ, ಸಂದೇಶ ಹಿರೇಮಠ ಮತ್ತಿತರು
ಇದ್ದರು. ಸಂಗೀತ ಪಾಠ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.