Breaking News

ಕಲಬುರಗಿಯಲ್ಲಿ ಸೆಪ್ಟೆಂಬರ್ 13-14 ರಾಜ್ಯ ಮಟ್ಟದ ಪ್ರಥಮ ಆಶಾ ಕಾರ್ಯಕರ್ತೆಯರ ಸಮ್ಮೇಳನ

September 13-14 State Level First ASHA Workers Conference at Kalaburagi

ಜಾಹೀರಾತು

ಕೊಪ್ಪಳ, ರೋಗ್ಯ ಅಭಿಯಾನದಡಿ ನೇಮಿಸಲ್ಪಟ್ಟ ಆಶಾ ಕಾರ್ಯಕರ್ತೆಯರು ಆರೋಗ್ಯ ಕ್ಷೇತ್ರದ ಅತ್ಯಂತ ಕೆಳ ಹಂತದಲ್ಲಿ  ಕಾರ್ಯನಿರ್ವಹಿಸುತ್ತಿದ್ದು ಸಾಮಾಜಿಕ ಸ್ವಾಸ್ಥ್ಯಕ್ಕೆ ಅಪಾರ ಕೊಡುಗೆಯನ್ನು ನೀಡುತ್ತಿದ್ದಾರೆ. ಅವರನ್ನು ನಮ್ಮ ದೇಶದ ಆರೋಗ್ಯ ಸ್ತಂಭ ಎಂದರೆ ತಪ್ಪಾಗಲಾರದು. ಸರ್ಕಾರದ ಕೈಪಿಡಿಯಲ್ಲಿ ದಾಖಲಾಗಿರುವಂತೆ ಈ ಯೋಜನೆ “ಪ್ರಪಂಚದ ಅತಿ ಹೆಚ್ಚು ಸಾಮೂಹಿಕ ಆರೋಗ್ಯ ಕಾರ್ಯಕರ್ತೆಯರು ಹೊಂದಿರುವ ಯೋಜನೆ” ಹಾಗೂ ಕೊರೋನಾ ಕಾಲಘಟ್ಟದಲ್ಲಿ ಅವರ ಅನುಪಮ ಸೇವೆಯನ್ನು ಗುರುತಿಸಿ ನಮ್ಮ ಸರಕಾರಗಳು ಕೊರೋನಾ ವಾರಿಯರ್ಸ್ ಎಂದು ಗುರುತಿಸಿದರೆ ವಿಶ್ವ ಆರೋಗ್ಯ ಸಂಸ್ಥೆಯು “ಜಾಗತಿಕ ಆರೋಗ್ಯ ನಾಯಕ”ರೆಂದು ಶ್ಲಾಘಿಸಿತು .
ಆಶಾ ಕಾರ್ಯಕರ್ತೆಯರ ಆಯ್ಕೆಗಿಂತಲೂ ಮುಂಚಿನ ಆರೋಗ್ಯ ಕ್ಷೇತ್ರದ ಪರಿಸ್ಥಿತಿ :
ಗ್ರಾಮಾಂತರ ಪ್ರದೇಶಗಳಲ್ಲಿ ಶಿಶು ಮರಣ, ತಾಯಿ ಮರಣ, ಮನೆ ಹೆರಿಗೆ ಪ್ರಮಾಣ ಆತಂಕಕಾರಿಯಾಗಿತ್ತು, ಆಶಾ ಕಾರ್ಯಕರ್ತೆಯರ ಆಯ್ಕೆಯ ನಂತರ ಶಿಶು ಹಾಗೂ ತಾಯಿ ಮರಣದ ಪ್ರಮಾಣ ತುಂಬಾ ಕಡಿಮೆಯಾಗಿದೆ. ಸಾಂಸ್ಥಿಕ ಹೆರಿಗೆ ಅಭಿವೃದ್ಧಿ ಹೊಂದಿದೆ. ಎಲ್ಲಾ ಆರೋಗ್ಯ ಸೂಚಿ ಮಾಪಕಗಳು ಹೆಚ್ಚಿದೆ. ಇದನ್ನು ಇಲಾಖೆಯೇ ಗುರುತಿಸಿದೆ. ಇಂದು ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ತಾಯಿಬೇರುಗಳಂತೆ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸಿಕೊಂಡಿದ್ದಾರೆ. ರೋಗಗ್ರಸ್ತ ಇಲಾಖೆಯಂತಿದ್ದ ಆರೋಗ್ಯ ಇಲಾಖೆಗೂ ಮರು ಜೀವ ಬಂದಂತಾಗಿದೆ.
ಪ್ರಸ್ತುತ ಆಶಾ ಕಾರ್ಯಕರ್ತೆಯರ ಪರಿಸ್ಥಿತಿ :
ಎಷ್ಟೆಲ್ಲಾ ಪ್ರಶಂಸೆಗಳ ಸುರಿಮಳೆ ಇದ್ದರೂ ಅವರ ಜೀವನವು ಸುಗಮವಾದದ್ದಲ್ಲ. ಅನೇಕ ಅಡೆತಡೆಗಳನ್ನು ಮೀರಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ರಿ)ದ ಅಡಿಯಲ್ಲಿ ಆಶಾ ಕಾರ್ಯಕರ್ತೆಯರು ರಾಜ್ಯದ ಉದ್ದಗಲಕ್ಕೂ ಒಗ್ಗೂಡಿ ನಿಗದಿತ ವೇತನಕ್ಕಾಗಿ ಹೋರಾಡಿದರು. ಚಳಿ, ಮಳೆ ಎನ್ನದೆ ತಮ್ಮ ಪುಟ್ಟ ಕಂದಮ್ಮಗಳನ್ನು ಕರೆತಂದು ಚಳುವಳಿಯಲ್ಲಿ ಭಾಗಿಯಾದರು. ಹೋರಾಟದ ಪರಿಣಾಮವಾಗಿ ಕೇಂದ್ರ ಸರ್ಕಾರದ ಪ್ರೋತ್ಸಾಹ ಧನಕ್ಕೆ ಸರಿ ಸಮಾನವಾಗಿ ರಾಜ್ಯ ಸರ್ಕಾರವು ಮ್ಯಾಚಿಂಗ್ ಗ್ರಾಂಟ್ ನೀಡಲು ಒಪ್ಪಿಗೆ ಸೂಚಿಸಿತು. ತದನಂತರ ನಿಶ್ಚಿತ ವೇತನ ನೀಡಲು ಆಗ್ರಹಿಸಿ ಹೋರಾಟ ಬೆಳೆಸಲಾಯಿತು. ಸತತ ಹೋರಾಟದ ಪರಿಣಾಮವಾಗಿ ರಾಜ್ಯ ಸರ್ಕಾರದಿಂದ ನಿಶ್ಚಿತ ವೇತನವು ಜಾರಿಯಾಯಿತು. ಇದರ ರ ಮಧ್ಯೆ ರಾಜ್ಯದಲ್ಲಿ ಕೇಂದ್ರದ ಪ್ರೋತ್ಸಾಹ ಧನ ನೀಡಲು ಕೇಂದ್ರದ ಪೋರ್ಟಲ್ಗೆ ಲಿಂಕ್ ಮಾಡಿ ಆಶಾ ನಿಧಿ ಎಂಬ ಸಾಫ್ಟ್ವೇರ್ ಅನ್ನು ಅಳವಡಿಸಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ಕಾರಣದಿಂದಾಗಿ ವಿವಿಧ ರೀತಿಯ ಸಮಸ್ಯೆಗಳು ಸೃಷ್ಟಿಯಾಗಿದೆ. ದುಡಿತಕ್ಕೆ ತಕ್ಕ ಪ್ರತಿಫಲ ಪಾವತಿಯಾಗದೇ ಇರುವ ದಾಖಲೆಗಳನ್ನು ಇಲಾಖೆಗೆ ನೀಡಲಾಗಿದೆ. ಕಳೆದ 8-9 ವರ್ಷಗಳಿಂದ ಕಾರ್ಯಕರ್ತೆಯರಿಗೆ ಆರ್ಥಿಕ ನಷ್ಟವನ್ನು ಅನುಭವಿಸುತ್ತಿರುವರು. ಸರಕಾರದ ಇಲಾಖೆಯಲ್ಲಿ ಕೆಲಸ ಮಾಡುತ್ತಾ ಅತ್ಯಲ್ಪ ಗೌರವಧನಕ್ಕೆ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಬಗ್ಗೆ ಇಲಾಖೆಯು ಅತ್ಯಂತ ನಿರ್ಲಕ್ಷ್ಯ ಧೋರಣೆಯನ್ನು ಹೊಂದಿದೆ.ಆಶಾ ಕಾರ್ಯಕರ್ತೆಯರ ಹಕ್ಕುಗಳ ಈಡೇರಿಗೆ ಸೂಕ್ತ ತಿಳುವಳಿಕೆಯ ಒಗ್ಗಟ್ಟು ಮಾತ್ರವೇ ಪರಿಹಾರ: ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯಂತಹ ಸರಕಾರಿ ಇಲಾಖೆಯಡಿ ಕೆಲಸ ಮಾಡುತ್ತಿದ್ದರೂ ಸರಕಾರಿ ನೌಕರರಲ್ಲ, ಕನಿಷ್ಠ ವೇತನ ಮೊದಲೇ ಇಲ್ಲ.ಜೀವನಯೋಗ್ಯ ವೇತನ ನೀಡಿ ಗೌರವಯುತವಾಗಿ ಬದುಕುವಂತೆ ಏರ್ಪಾಡು ಮಾಡುವ ಇಚ್ಚಾಶಕ್ತಿ ಇಲಾಖೆಗೆ ಇಲ್ಲ. ಗೌರವಧನದ ಹೆಸರಿನಲ್ಲಿ ಆಗೌರವ ತೋರುತ್ತಿರುವ ಸರ್ಕಾರ ಬಡ ಹೆಣ್ಣು ಮಕ್ಕಳ ಹೊಟ್ಟೆಯ ಮೇಲೆ ಹೊಡೆಯುತ್ತಿದೆ.ಆರೋಗ್ಯ ಇಲಾಖೆ ಇನ್ನಾದರೂ ಆರ್ಸಿಎಚ್ ಪೋರ್ಟಲ್ಗೆ ಲಿಂಕ್ ಮಾಡಿ ಕಾಂಪೊನೆಂಟ್ ಮಾದರಿಯಲ್ಲಿ ಪ್ರೋತ್ಸಾಹ ಧನ ನೀಡುವ ಮಾದರಿಯನ್ನು ತಕ್ಷಣವೇ ನಿಲ್ಲಿಸಬೇಕು. ಸರಕಾರಿ ನೌಕರರೆಂದು ಪರಿಗಣಿಸಬೇಕು. ಅಲ್ಲಿಯವರೆಗೆ ಐಎಲ್ಒ ಶಿಫಾರಸ್ಸಿನಂತೆ ಕಾರ್ಮಿಕರೆಂದು ಪರಿಗಣಿಸಿ ಕನಿಷ್ಟ ವೇತನ ಜೊತೆಗೆ ವಿವಿಧ ಕಾರ್ಮಿಕರ ಸೌಲಭ್ಯಗಳನ್ನು ಖಾತ್ರಿ ಪಡಿಸಬೇಕು. ಹಾಗೆಯೇ ಕೂಡಲೇ ರೂ. 15000 ನಿಗದಿತ ವೇತನವನ್ನು ಆಶಾಗಳ ಬ್ಯಾಂಕ್ ಖಾತೆಗೆ ಹಾಕುವ ಪದ್ಧತಿ ಜಾರಿಗೊಳಿಸಬೇಕು.
ಈ ಎಲ್ಲ ಬೇಡಿಕೆಗಳೊಂದಿಗೆ ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಕ್ಕೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ರಿ) ಕಳೆದ ಅನೇಕ ವರ್ಷಗಳಿಂದ ತಾಲೂಕು. ಜಿಲ್ಲೆ. ರಾಜ್ಯ ಮಟ್ಟದಲ್ಲಿ ಸತತವಾಗಿ ಅನೇಕ ಹೋರಾಟಗಳನ್ನು ನಡೆಸುತ್ತಾ ಬಂದಿದೆ. ಇದುವರೆಗೂ ಹಂತ ಹಂತವಾಗಿ ಸಂಘಟನೆಯನ್ನು ಬೆಳೆಸುತ್ತಾ ನಿಶ್ಚಿತ ವೇತನವನ್ನು ಪಡೆಯಲು ಸಾಧ್ಯವಾಗಿದೆ. ಇದೀಗ ಆಶಾ ಕಾರ್ಯಕರ್ತೆಯರ ಜೀವನ ಭದ್ರತೆಗಾಗಿ ಸರ್ಕಾರದ ಮೇಲೆ ಒತ್ತಡ ತರಲು ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸುವುದೊಂದೇ ನಮ್ಮ ಮುಂದಿರುವ ದಾರಿಯಾಗಿದೆ.ಪ್ರಥಮ ಸಮ್ಮೇಳನಕ್ಕೆ ಮುನ್ನಡೆಯಿರಿ !!
ಸರ್ಕಾರ, ಇಲಾಖೆಯನ್ನು ಪದೇಪದೇ ಎಚ್ಚರಿಸುತ್ತಾ ಆಶಾ ಕಾರ್ಯಕರ್ತೆಯರನ್ನು ಸಂಘಟಿಸಿ ಅವರ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಎ.ಐ.ಯು.ಟಿ.ಯು.ಸಿ ಕೇಂದ್ರ ಕಾರ್ಮಿಕ ಸಂಘಟನೆಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ರಾಜ್ಯ ಮಟ್ಟದ ಸಮ್ಮೇಳನವನ್ನು ಸೆಪ್ಟೆಂಬರ್ 13, 14 ರಂದು ಕಲಬುರಗಿಯಲ್ಲಿ ಹಮ್ಮಿಕೊಂಡಿರುತ್ತೇವೆ. ಸಮ್ಮೇಳನಕ್ಕೆ ರಾಜ್ಯದ 31 ಜಿಲ್ಲೆಗಳಿಂದ ಆಶಾ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಬಹಿರಂಗ ಅಧಿವೇಶನಕ್ಕೆ ಸುಮಾರು 6000 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಹಾಗೂ ಪ್ರತಿನಿಧಿ ಅಧಿವೇಶನಕ್ಕೆ 600 ಆಶಾ ಕಾರ್ಯಕರ್ತೆಯರು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ನಾಡಿನ ಸಹೃದಯ ಜನತೆ ಬೆಂಬಲಿಸಬೇಕೆಂದು ಕೋರುತ್ತೇವೆ ಹಾಗೂ ಎಲ್ಲಾ ಆಶಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷರು ಶರಣು  ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡರ,ಶ್ರೀಮತಿ ಶೋಭಾ ಹೂಗಾರ, ಶಂಕ್ರಮ್ಮ ಹಳ್ಳಿಕೇರಿ, ಅನ್ನಪೂರ್ಣ, ಸುಜಾತಾ ಉಪಸ್ಥಿತರಿದ್ದರು.

About Mallikarjun

Check Also

76 ಮೈಲ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅನ್ನದಾತರ ಹೋರಾಟ ಒಣಗುವ ಸ್ಥಿತಿಯಲ್ಲಿರುವ ಜೋಳ ಬೆಳೆ ಉಳಿಸಿಕೊಡಿ ಎಂದ ರೈತರು.

The farmers have demanded that the 76-mile canal be drained of water, and the farmers …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.