Vanajakshi Rajesh was elected as the president of Kandaiya's Palya Milk Producers Association.
ವರದಿ : ಬಂಗಾರಪ್ಪ ಸಿ ಹನೂರು ,
ಹನೂರು,:ತಾಲ್ಲೋಕಿನಕಂಡಯ್ಯನಪಾಳ್ಯ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ವನಜಾಕ್ಷಿ ರಾಜೇಶ್ ಹಾಗೂ ಉಪಾಧ್ಯಕ್ಷರಾಗಿ ಜಯಲಕ್ಷ್ಮಿ ದಾಸೋಬೋವಿ ಅವಿರೋಧ ಆಯ್ಕೆಯಾಗಿದ್ದಾರೆ.
ಕಳೆದ ವಾರ ಕಂಡಯ್ಯನಪಾಳ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ 12 ಜನ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.
ಸಾಮಾನ್ಯ ಕ್ಷೇತ್ರದಿಂದ ಶಾಂತಿ, ಕೆಂಪರಾಜಮ್ಮ, ಶೋಭಾ, ವೆಂಕಟಮ್ಮ, ವನಜಾಕ್ಷಿ, ಆಶಾ, ನಯನ, ಶಿವಮ್ಮ, ಪರಿಶಿಷ್ಟ ಜಾತಿಯಿಂದ ಜಯಲಕ್ಷ್ಮಿ, ಹಿಂದುಳಿದ ವರ್ಗ ಎ ಕಣ್ಣಮ್ಮಾ, ಹಿಂದುಳಿದ ವರ್ಗ ಪ್ರವರ್ಗ ಬಿ ಯಿಂದ ಗೀತಾ ಅವಿರೋಧವಾಗಿ ಆಯ್ಕೆಯಾಗಿದ್ದರು.
ಸೋಮವಾರ ನಡೆದ ಅಧ್ಯಕ್ಷರು ಉಪಾಧ್ಯಕ್ಷರ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದ ವನಜಾಕ್ಷಿ ರಾಜೇಶ್ ಹಾಗೂ ಉಪಾಧ್ಯಕ್ಷರಾಗಿ ಜಯಲಕ್ಷ್ಮಿ ದಾಸೋ ಬೋವಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರುಗಳು ಸನ್ಮಾನಿಸಿದರು.
ಚುನಾವಣಾ ಅಧಿಕಾರಿಯಾಗಿ ರಿಟರ್ನಿಂಗ್ ಅಧಿಕಾರಿ ಎಂ ಎಸ್ ಸಿದ್ದ ಲಿಂಗ ಮೂರ್ತಿ ಕಾರ್ಯನಿರ್ವಹಿಸಿದರು.
ಈ ವೇಳೆ ಚೆನ್ನಾಲಿಂಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷರಾದ ಕೆಸಿ ಮಾದೇಶ್, ಮುಖಂಡರಾದ ರಾಜೇಶ್, ದಾಸೋ ಭೋವಿ, ಮುರುಗೇಶ್ ರಮೇಶ್, ದಾಸೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.