A terrible road accident between a car and a lorry near Kallur, three people from Manvi died on the spot
ಮಾನ್ವಿ : ಕಲ್ಲೂರು ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಾನ್ವಿ ಪಟ್ಟಣದ ಮೂವರು ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜರುಗಿದೆ.
ಮಾನ್ವಿಯಿಂದ ರಾಯಚೂರಿಗೆ ಹೊರಟಿದ್ದ ಕಾರು ಹಾಗೂ ರಾಯಚೂರಿನಿಂದ ಮಾನ್ವಿ ಕಡೆ ಬರುತ್ತಿದ್ದ ಲಾರಿ ಕಲ್ಲೂರು ರಾಜ್ಯ ಹೆದ್ದಾರಿಯಲ್ಲಿ ಪರಸ್ಪರ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಮಾನ್ವಿ ಪಟ್ಟಣದ ಕೋನಾಪುರಪೇಟೆಯ ಸಬ್ ಪೋಸ್ಟ್ ಆಫೀಸ್ ಬಳಿಯ ಶೇಖ್ ಅರಾಫತ್ (34), ಜಮಾದರ್ ಕಟ್ಟೆಯ ಮಕ್ಬೂಲ್ (38) ಹಾಗೂ ಪ್ರವಾಸಿ ಮಂದಿರದ ಕೆನಾಲ್ ಬಳಿಯ ಯಾಸೀನ್ (40) ಈ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಲಾರಿಯಲ್ಲಿದ್ದ ಚಾಲಕ ಪರಾರಿಯಾಗಿದ್ದಾನೆ.
ಮೃತ ಹೊಂದಿದ ಶೇಖ್ ಅರಾಫತ್ ತಮ್ಮ ತಂಗಿಯ ಮದುವೆಯ ನಿಮಿತ್ಯ ಮದುವೆ ಕಾರ್ಡುಗಳನ್ನು ಕೊಡಲು ಇಬ್ಬರು ಸ್ನೇಹಿತರನ್ನು ರಾಯಚೂರಿಗೆ ಕರೆದುಕೊಂಡು ಹೊರಟ ಸಂದರ್ಭದಲ್ಲಿ ಕಲ್ಲೂರು ಕ್ರಾಸ್ ಬಳಿ ರಾಯಚೂರು ಕಡೆಯಿಂದ ವೇಗವಾಗಿ ಬಂದ ಲಾರಿ ಕಾರಿಗೆ ರಭಸವಾಗಿ ಢಿಕ್ಕಿ ಹೊಡೆದ ಭೀಕರತೆಗೆ ಕಾರು ಲಾರಿಯೊಳಗೆ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದೆ.
ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮಾನ್ವಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶವಗಳನ್ನು ಸಾಗಿಸಿ ಮರಣೋತ್ತರ ಪರೀಕ್ಷೆ ಮಾಡಿಸಿ ಮೃತರ ಕುಟುಂಬಗಳಿಗೆ ಹಸ್ತಾಂತರಿಸಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ಹೊಂದಿದ ಸಂಭಂದಿಕರ ಆಕ್ರಂದನ ಮುಗಿಲು ಮುಟ್ಟಿತ್ತು.