
Jewelery Fair to Shine with Revamped Lucky Lakshmi Festival: Bright Chance to Win Rs 10 Crore Prize


ಬೆಂಗಳೂರು, ಅ, 10 ; ಉನ್ನತ ನಿರೀಕ್ಷೆಯ ಲಕ್ಕಿ ಲಕ್ಷ್ಮಿ ಫೆಸ್ಟಿವಲ್‌ನೊಂದಿಗೆ ಆಲ್ ಇಂಡಿಯಾ ಜೆಮ್ ಎಂಡ್ ಜ್ಯುವೆಲರಿ ಡೊಮೆಸ್ಟಿಕ್ ಕೌನ್ಸಿಲ್(ಜಿಜೆಸಿ) ರೋಮಾಂಚಿತಗೊಂಡಿದೆ. ಒಟ್ಟು 10 ಕೋಟಿ ರೂ.ಗಳ ಬಹುಮಾನ ಹೊಂದಿರುವ ಈ ಉತ್ಸವ ಎಲ್ಲರನ್ನು ತೊಡಗಿಸುವಂತಹ ಸ್ಪರ್ಧೆಗಳ ಜೊತೆಗೆ ಚಲನಶೀಲ ಚಟುವಟಿಕೆಗಳ ವೈಶಿಷ್ಟ್ಯತೆಯಿಂದ ಕೂಡಿರಲಿದೆ.
ಬೆಂಗಳೂರಿನಲ್ಲಿ ಈ ಉತ್ಸವ ಅಕ್ಟೋಬರ್ 22ರಿಂದ ಡಿಸೆಂಬರ್ 09, 2024ರವರೆಗೆ ನಡೆಯಲಿದ್ದು, `ಗೆಟ್ ಬ್ಲೆಸ್ಡ್, ಬಿ ಲಕ್ಕಿ’(ಆರ್ಶೀವಾದ ಪಡೆಯಿರಿ, ಅದೃಷ್ಟಶಾಲಿಗಳಾಗಿರಿ) ಎಂಬ ತಿರುಳನ್ನು ಹೊಂದಿದೆ. ಈ ಹಬ್ಬ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ನಡೆಯಲಿದ್ದು, ಆಭರಣ ವ್ಯಾಪಾರಿಗಳಿಗೆ ಗ್ರಾಹಕರೊಂದಿಗೆ ನೇರವಾಗಿ ಸಂಪರ್ಕ ಹೊಂದಲು ಅಸಾಧಾರಣ ವೇದಿಕೆ ಒದಗಿಸಲಿದೆ.
ನವೀನ ವಿನ್ಯಾಸಗಳು ಹಾಗೂ ಅಸಾಧಾರಣ ಕರಕುಶಲ ವಿನ್ಯಾಸಗಳನ್ನು ಹಿಡಿದಿಡುವಂತಹ ಮಿಶ್ರಣವನ್ನು ಇದು ಒಳಗೊಂಡಿದೆ. ಜೊತೆಗೆ ಸಾಂಪ್ರದಾಯಿಕ ಆಕರ್ಷಣೆಯ ಜೊತೆಗೆ ಆಧುನಿಕ ಸೊಬಗಿನ ಮಿಶ್ರಣ ಇಲ್ಲಿ ಸಿಗಲಿದೆ.
ಭಾಗವಹಿಸಿದವರಿಗೆ ಗಮನಾರ್ಹ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಭಾರತೀಯ ಆಭರಣ ಕೈಗಾರಿಕೆಗೆ ಹೊಸ ಉತ್ಸಾಹ ನೀಡುವ ಗುರಿ ಹೊಂದಿರುತ್ತದೆ. ಸಂದರ್ಶಕರಿಗೆ ಬಹುಮಾನಗಳನ್ನು ಗೆಲ್ಲುವ ಖಾತ್ರಿಯ ಹಲವಾರು ಅವಕಾಶಗಳು ಇಲ್ಲಿರುತ್ತವೆ. ಜೊತೆಗೆ ಕಾಲಕಾಲಕ್ಕೆ, ಪ್ರತಿ ವಾರಕ್ಕೊಮ್ಮೆ ಮತ್ತು ಬಂಪರ್ ಬಹುಮಾನಗಳ ಡ್ರಾಗಳಿರುತ್ತವೆ.
ಆಲ್ ಇಂಡಿಯಾ ಜೆಮ್ ಎಂಡ್ ಜ್ಯುವೆಲರಿ ಡೊಮೆಸ್ಟಿಕ್ ಕೌನ್ಸಿಲ್(ಜಿಜೆಸಿ)ನ ಅಧ್ಯಕ್ಷ ಸಾಯ್ಯಾಮ್ ಮೆಹ್ರಾ ಮಾತನಾಡಿ, ಬೆಂಗಳೂರು ಆಭರಣ ಮಾರುಕಟ್ಟೆ ಮತ್ತು ಅಲ್ಲಿಂದಾಚೆಗೆ ಈ ಕಾರ್ಯಕ್ರಮದ ಸಕಾರಾತ್ಮಕ ಪ್ರಭಾವವನ್ನು ವೀಕ್ಷಿಸಲು ನಾವು ಕಾತುರರಾಗಿದ್ದೇವೆ’’ ಎಂದರು.
ಲಕ್ಕಿ ಲಕ್ಷ್ಮಿ ಫೆಸ್ಟಿವಲ್‌ನ ಸಂಚಾಲಕ ಕಮಲ್ ಮಾತನಾಡಿ, ವಿಸ್ತರಿಸಲಾದ ಕೊಡುಗೆಗಳು ಮತ್ತು ವೈವಿಧ್ಯಪೂರ್ಣ ಶ್ರೇಣಿಯ ಬಹುಮಾನಗಳೊಂದಿಗೆ ಸಮೃದ್ಧತೆ ಮತ್ತು ಯಶಸ್ಸನ್ನು ವೈಭವಯುತವಾಗಿ ಸಂಭ್ರಮಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.
%%%
