Lions Club Gangavathi receives awards
ಲಯನ್ಸ್ ಕ್ಲಬ್ ಗಂಗಾವತಿಗೆ ಪ್ರಶಸ್ತಿಗಳ ಗರಿ

ಗಂಗಾವತಿ: ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಲಯನ್ಸ್ ಕ್ಲಬ್ ಗಂಗಾವತಿಗೆ 2025-26ನೇ ಸಾಲಿನಲ್ಲಿ ಮಾಡಿದ ಕ್ರಿಯಾಶೀಲ ಕಾರ್ಯಗಳಿಗೆ ಏಳು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಗೋವಾದಲ್ಲಿ ನಡೆದ District 317-B ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉತ್ತರ ಕರ್ನಾಟಕ, ಗೋವಾ ರಾಜ್ಯದ ನೂರಕ್ಕಿಂತ ಹೆಚ್ಚಿನ ಕ್ಲಬ್‌ಗಳಲ್ಲಿ ಅತ್ಯುತ್ತಮ ಲಯನ್ಸ್ ಕ್ಲಬ್ ಪ್ರಶಸ್ತಿಯನ್ನು ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ಜೈಮೊಲ್ ನಾಯ್ಕ್ ಅವರು ಗಂಗಾವತಿ ಲಯನ್ಸ್ ಕ್ಲಬ್ ಗೆ ನೀಡಿ ಗೌರವಿಸಿದರು. ಜೊತೆಗೆ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿಯನ್ನು 2025-26ನೇ ಸಾಲಿನ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಡಾ|| ಶಿವಕುಮಾರ್ ಮಾಲಿಪಾಟೀಲ ಪಡೆದುಕೊಂಡರು. ಹಾಗೆಯೇ ಸ್ರ್ಕಾಫ್ ಬುಕ್ ಗಾಗಿ ಕೂಡಾ ಪ್ರಶಸ್ತಿ ಪಡೆದು ಕ್ಲಬ್ ಗಮನ ಸೆಳೆಯಿತು.
ಗಂಗಾವತಿಯಲ್ಲಿ ಲಯನ್ಸ್ ಕಣ್ಣಿನ ಆಸ್ಪತ್ರೆ ಸ್ಥಾಪಿಸಲು ಪ್ರಮುಖ ಕಾರಣಿಕರ್ತರಾದ ಲಯನ್ ಟಿ. ರಾಮಕೃಷ್ಣ ಅವರಿಗೆ ಶಾಶ್ವತ ಯೋಜನೆಗಾಗಿ ಗವರ್ನರ್ ಮೆಚ್ಚುಗೆಯ ಪ್ರಶಸ್ತಿ ಪಡೆದುಕೊಂಡರು. ಹಾಗೆಯೇ ಲಯನ್ಸ್ ಶಾಲಾವಾಹನ ಖರೀದಿಸಲು ಪ್ರಮುಖ ಕಾರಣೀಕರ್ತರಾದ ಡಾ. ಜಂಬುನಾಥಗೌಡ ಅವರಿಗೆ ಗವರ್ನರ್ ಮೆಚ್ಚುಗೆಯ ಪ್ರಶಸ್ತಿ ಪಡೆದರು. ಹಿರಿಯ ಸದಸ್ಯರಾದ ಲಯನ್ ಎಫ್.ಎಚ್. ಚಿತ್ರಗಾರ ಹಾಗೂ ಲಯನ್ ರಾಜಶೇಖರ ಹೇರೂರ್ ಅವರಿಗೆ ಉತ್ತಮ District Chairperson ಪ್ರಶಸ್ತಿ ಪಡೆದುಕೊಂಡರು.
ಲಯನ್ಸ್ ಕ್ಲಬ್ ಗಂಗಾವತಿಗೆ ಹಲವಾರು ಪ್ರಶಸ್ತಿ ಬರಲು ಶ್ರಮಿಸಿದ 2025-26ನೇ ಸಾಲಿನ ಅಧ್ಯಕ್ಷರಾದ ಡಾ|| ಶಿವಕುಮಾರ್ ಮಾಲಿಪಾಟೀಲ್, ಕಾರ್ಯದರ್ಶಿ ಜಂಬಣ್ಣ ಐಲಿ ಹಾಗೂ ಖಜಾಂಚಿ ಶಿವಪ್ಪ ಗಾಳಿ ತಂಡಕ್ಕೆ ಲಯನ್ಸ್ ಕ್ಲಬ್ ಹಿರಿಯ ಸದಸ್ಯರಾದ ಡಾ|| ಜಿ. ಚಂದ್ರಪ್ಪ, ಡಾ|| ಸೋಮರಾಜು, ಡಾ|| ಮಾದವಶೆಟ್ಟಿ, ಡಾ|| ಪಂಪಾಪತಿ, ಡಾ|| ಮಾಣಿಕಪ್ಪ, ಸಿದ್ದನಗೌಡ ವಕೀಲರು ಹಾಗೂ ಲಯನ್ಸ್ ಕ್ಲಬ್ ಪ್ರಸ್ತುತ ಅಧ್ಯಕ್ಷರಾದ ಡಾ|| ದೇವರಾಜ ಹಾಗೂ ಇನ್ನಿತರ ಸದಸ್ಯರು, ಗಂಗಾವತಿ ಚಾರಣ ಬಳಗ, ಕಾವ್ಯಲೋಕ ಹಾಗೂ ಕಿಷ್ಕಿಂದ ಪರಿಸರ ಟ್ರಸ್ಟ್, ಕೆವೈಟಿಸಿ ಬಳಗ, ಕಸಾಪ ಗಂಗಾವತಿ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಮಾಹಿತಿಗಾಗಿ:
ಡಾ|| ಶಿವಕುಮಾರ ಮಾಲಿಪಾಟೀಲ್
ದಂತವೈದ್ಯರು, ಗಂಗಾವತಿ.
ಮೊ: 9448302775


