ರವಿ ಹಂಜ್ ಅಭಿನಂದನೆ ವಿವಾದ: ಶಂಕರ ಬಿದರಿ ರಾಜೀನಾಮೆಗೆ ಹರೀಶ ಆರಾಧ್ಯ ಆಗ್ರಹ!

H.Mallikarjun
H.Mallikarjun - Kalyanasiri
1 Min Read
ಜಾಹೀರಾತು


Ravi Hanj Congratulation Controversy: Harish Aradhya Demands Shankara Bidari's Resignation!

ರವಿ ಹಂಜ್ ಅಭಿನಂದನೆ ವಿವಾದ: ಶಂಕರ ಬಿದರಿ ರಾಜೀನಾಮೆಗೆ ಹರೀಶ ಆರಾಧ್ಯ ಆಗ್ರಹ!

ಜಾಹೀರಾತು


ಬಸವ ತತ್ವಕ್ಕೆ ವಿರುದ್ಧವಾದ ನಡೆ ಸಹಿಸುವುದಿಲ್ಲ; ಮಹಾಸಭೆಯ ರಾಜ್ಯಾಧ್ಯಕ್ಷರ ವಿರುದ್ಧ ಆಕ್ರೋಶ


ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಹಾಸಭೆಯ ರಾಜ್ಯ ಉಪಾಧ್ಯಕ್ಷ ಹಾಗೂ ರಾಷ್ಟ್ರೀಯ ಕ್ರಿಕೆಟ್ ಆಟಗಾರ ಕೆ.ಎಲ್. ರಾಹುಲ್ ಅವರ ಚಿಕ್ಕಪ್ಪ ಹರೀಶ ಆರಾಧ್ಯ ಅವರು ಬಲವಾಗಿ ಆಗ್ರಹಿಸಿದ್ದಾರೆ.
ವಿವಾದಾತ್ಮಕ ಲೇಖಕ ರವಿ ಹಂಜ್ ಅವರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವತಿಯಿಂದ ಅಭಿನಂದನೆ ಸಲ್ಲಿಸಿರುವುದು ಹಾಗೂ ಅವರ ಕಾರ್ಯಕ್ರಮದಲ್ಲಿ ಶಂಕರ ಬಿದರಿ ಅವರು ಭಾಗವಹಿಸಿರುವುದನ್ನು ಹರೀಶ ಆರಾಧ್ಯ ಅವರು ತೀವ್ರವಾಗಿ ವಿರೋಧಿಸಿದ್ದಾರೆ.
ಬಸವ ತತ್ವ ಮತ್ತು ಸಿದ್ಧಾಂತಗಳ ಅಭಿಮಾನಿಯಾಗಿರುವ ತಾವು, ಬಸವಣ್ಣನವರ ವಿಚಾರಧಾರೆಗೆ ವಿರುದ್ಧವಾದ ವ್ಯಕ್ತಿಯನ್ನು ಮಹಾಸಭೆಯ ವೇದಿಕೆಯಲ್ಲಿ ಗೌರವಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಶಂಕರ ಬಿದರಿ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ವಿಚಾರವಾಗಿ ಮಹಾಸಭೆಯ ಕಚೇರಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿರುವುದಾಗಿ ತಿಳಿದುಬಂದಿದೆ.
ಬಸವ ತತ್ವ, ಸಿದ್ಧಾಂತ ಹಾಗೂ ಲಿಂಗಾಯತ ಧರ್ಮದ ಆಶಯಗಳ ಪರವಾಗಿ ಧ್ವನಿ ಎತ್ತಿರುವ ಹರೀಶ ಆರಾಧ್ಯ ಅವರ ನಿಲುವನ್ನು ಬಸವಾಭಿಮಾನಿಗಳು ಶ್ಲಾಘಿಸಿದ್ದಾರೆ ಎಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ಕರ್ನಾಟಕ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ, ಬೀದರ್ ಅವರು ತಿಳಿಸಿದ್ದಾರೆ.

Total Views: 0
Share This Article
Leave a Comment