ಜಾಹೀರಾತು

Ambedkar Mahaparinirvan Day: d. On 4th 'Mumbai Chalo' Big Yatra
ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ: ಡಿ. 4ರಂದು ‘ಮುಂಬೈ ಚಲೋ’ ಬೃಹತ್ ಯಾತ್ರೆ
ಚೈತ್ಯಭೂಮಿ ದರ್ಶನಕ್ಕೆ ಮೂರು ದಿನಗಳ ಕಾರ್ಯಕ್ರಮ; ರಾಜ್ಯದ ಭೀಮಸೈನಿಕರು, ಅಂಬೇಡ್ಕರ್ ಅನುಯಾಯಿಗಳಿಗೆ ಎಂ.ಡಿ. ಬೋಜರಾಜ್ ಕರೆ
ಗಂಗಾವತಿ: ಸಂವಿಧಾನ ಶಿಲ್ಪಿ, ವಿಶ್ವಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ 70ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಡಿಸೆಂಬರ್ 4ರಂದು ಧಾರವಾಡದಿಂದ ಮುಂಬೈನ ದಾದರ್ನಲ್ಲಿರುವ ಚೈತ್ಯಭೂಮಿಗೆ ಮೂರು ದಿನಗಳ ಬೃಹತ್ ಯಾತ್ರೆ ಹಾಗೂ ‘ಮುಂಬೈ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಭೀಮ್ ಸೇನೆ ಸಮಿತಿ (ರಿ), ಬೆಂಗಳೂರು ಇದರ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ಡಿ. ಬೋಜರಾಜ್ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯ ರಾಜ್ಯ ಹಾಗೂ ಎಲ್ಲಾ ಜಿಲ್ಲಾ ಸಮಿತಿಗಳ ಸಹಯೋಗದಲ್ಲಿ ಈ ಯಾತ್ರೆ ಆಯೋಜಿಸಲಾಗಿದ್ದು, ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು ಎಂದು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
Total Views:
0


