Breaking News

ದೇಶದ ಕಾರ್ಮಿಕ ವರ್ಗದ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಮಾನ್ಯ ಪ್ರಧಾಮಂತ್ರಿಗಳಿಗೆ ಮನವಿ .

Appeal to the honorable Prime Ministers to resolve the problems of the country’s working class.

ಜಾಹೀರಾತು

ಕೊಪ್ಪಳ: ಮಾನ್ಯ ಪ್ರಧಾನ ಮಂತ್ರಿಗಳಿಗೆ ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಆಶಾ ಕಾರ್ಯಕರ್ತೆಯರು  ಹಕ್ಕೊತ್ತಾಯಗಳ ಪತ್ರವನ್ನು ಸಲ್ಲಿಸಿದರು.
ದೇಶದ ಕಾರ್ಮಿಕರು ಮತ್ತಿತರ ದುಡಿಯುವ ಜನರ ವಿರೋಧಿ ನೀತಿಗಳನ್ನು ಕೈಬಿಡಬೇಕು ಮತ್ತು ಅವರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಎಐಯುಟಿಯುಸಿ ಸೇರಿದಂತೆ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರಕ್ಕೆ ಎಐಯುಟಿಯುಸಿ ಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಕೊಪ್ಪಳ ಜಿಲ್ಲಾ  ಸಮಿತಿಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಮತ್ತು ಮುಷ್ಕರದಲ್ಲಿ ಭಾಗವಹಿಸಿದೆ.
ಅದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರ ಗೌರವಧನ/ ಪ್ರೋತ್ಸಾಹಧನಗಳನ್ನು ಹೆಚ್ಚಿಸಬೇಕು. ರಾಜ್ಯ ಸರ್ಕಾರ ಭರವಸೆ ನೀಡಿರುವಂತೆ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ರೂ.10.000/- ಪಾವತಿಯಾಗುವಂತೆ ಶೀಘ್ರವಾಗಿ ಆದೇಶ ಮಾಡಲು ಆಗ್ರಹಿಸುತ್ತೇವೆ. ಹಾಗೂ ಈ ಕೆಳಗಿನ ಪಟ್ಟಿಯಲ್ಲಿ ಇರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಜಿಲ್ಲೆಯಾದ್ಯಂತ  ಮನವಿ ಪತ್ರ ಸಲ್ಲಿಸಲಾಯಿತು. ಆಶಾ ಜಿಲ್ಲಾ ಮುಖಂಡರಾದ ಶೋಭಾ ಹೂಗಾರ್,ಅನ್ನಪೂರ್ಣ, ಶಿವಮ್ಮ  ಸುನಿತಾ, ಜಿಲ್ಲಾ ಕಾರ್ಯದರ್ಶಿಗಳಾದ ಕೌಶಲ್ಯ, ಶಂಕ್ರಮ್ಮ, ಜ್ಯೋತಿ ಲಕ್ಷ್ಮಿ, ವಿಜಯಲಕ್ಷ್ಮಿ, ಮುಂತಾದ ಆಶಾ ಮುಖಂಡರು ಭಾಗವಹಿಸಿದ್ದರು

About Mallikarjun

Check Also

ಶಿಕ್ಷಣಕ್ಕೂ ಶಿಸ್ತಿಗೂ ಒತ್ತು : ಬೇತಲ್ ಕಾಲೇಜಿನಲ್ಲಿ ಸಮನ್ವಯ ಸಮಾರಂಭ

Emphasis on education and discipline: Coordination ceremony at Bethel College “ಜನಸಂಖ್ಯೆ ಅಲ್ಲ, ಮಾನವ ಸಂಪನ್ಮೂಲ” – …

Leave a Reply

Your email address will not be published. Required fields are marked *