Breaking News

ಕನ್ನಡಕ್ಕೆ ತನ್ನದೇ ಆದ ವಿಶೇಷ ಸ್ಥಾನವಿದೆ ಎಂದುವಿದ್ವಾಂಸಬಸವರಾಜು ಬುಡರಕಟ್ಟಿ

Scholar Basavaraju Budarakatti said that Kannada has its own special place

ಜಾಹೀರಾತು
ಜಾಹೀರಾತು

ಭಾರತೀಯ ಭಾಷೆಗಳಲ್ಲಿ ಕನ್ನಡಕ್ಕೆ ತನ್ನದೇ ಆದ ವಿಶೇಷ ಸ್ಥಾನವಿದೆ ಎಂದು ವಿದ್ವಾಂಸ ಬಸವರಾಜು ಬುಡರಕಟ್ಟಿ ತಿಳಿಸಿದರು.
ಚಾಮರಾಜನಗರ ತಾಲೂಕಿನ ಯರಗನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಜೆ ಎಸ್ ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೩’ ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಜ್ಯೋತಿ ಬೆಳಗಿಸಿ ಮಾತನಾಡಿದರು.
ಕನ್ನಡದ ಭಾಷೆ ಹಾಗೂ ಸಾಹಿತ್ಯ ಕ್ಷೇತ್ರ ಈ ಮಟ್ಟಕ್ಕೆ ಬರಲು ಹಲವರ ಪರಿಶ್ರಮ ಇದೆ. ಭವಿಷ್ಯದಲ್ಲೂ ನಮ್ಮ ಭಾಷೆಯನ್ನು ದೊಡ್ಡ ಮಟ್ಟಕ್ಕೆ ಏರಿಸಬೇಕಿದೆ. ಈ ಮುನ್ನೋಟವನ್ನು ಗ್ರಹಿಸಿ ಭಾಷೆ ಬೆಳವಣಿಗೆಯಲ್ಲಿ ಎಲ್ಲರೂ ಪಾಲ್ಗೊಳ್ಳುವ ಅವಶ್ಯಕತೆ ಇದೆ. ಆದಿಕವಿ ಪಂಪ, ರನ್ನ, ಜನ್ನ ಸೇರಿದಂತೆ ಸಂತರು, ರಾಜ ಮಹಾರಾಜರು ಕನ್ನಡ ಭಾಷಾ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಪರಂಪರೆ ಮುಂದುವರಿಯಲು ನಮ್ಮ ಹಿರಿಯರು ಹಾಕಿಕೊಟ್ಟಿರುವ ಹಾದಿಯಲ್ಲಿ ಸಾಗಬೇಕಿದೆ ಎಂದು ಕಿವಿಮಾತು ಹೇಳಿದರು.
ಕನ್ನಡದ ವಿದ್ಯಾರ್ಥಿಗಳಲ್ಲಿ ಕಂಡುಬರುವ ಬಹುಮುಖ್ಯವಾದ ಸ್ವಭಾವ ಎಂದರೆ ಕೀಳರಿಮೆ. ನಾನು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವವನು, ಇಂಗ್ಲಿಷ್‌ ಜತೆಗೆ ಸ್ಪರ್ಧೆ ಮಾಡಲು ಸಾಧ್ಯವಾಗುತ್ತೋ ಇಲ್ಲವೋ ಅಥವಾ ಅಧ್ಯಯನಕ್ಕೆ ಬೇಕಾದ ಸಂಪನ್ಮೂಲ ಕನ್ನಡದಲ್ಲಿ ಲಭ್ಯ ಇವೆಯೋ ಇಲ್ಲವೋ ಎನ್ನುವ ಗೊಂದಲ, ಕೊರಗು ಬಹುತೇಕರದ್ದು. ಹಾಗಾಗಿ ಹೆಚ್ಚಿನವರು ಜನರಲ್‌ ಸ್ಟಡೀಸ್‌ ವಿಷಯಗಳನ್ನು ಕನ್ನಡ ಮಾಧ್ಯಮದಲ್ಲಿ ಬರೆಯಲು ಅಥವಾ ಕನ್ನಡ ಐಚ್ಛಿಕವನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಆದ್ದರಿಂದ ಈ ಯೋಚನೆಗಳಿಂದ ಮೊದಲು ನೀವು ಹೊರಬನ್ನಿ. ಕನ್ನಡದಲ್ಲಿ ಬರೆಯುತ್ತೀವಿ ಎನ್ನುವ ಛಲದ ಜೊತೆಗೆ ಪರಿಶ್ರಮ ಹಾಗೂ ಪೂರಕವಾದ ಮಾರ್ಗದರ್ಶನವನ್ನು ಪಡೆದಲ್ಲಿ ಕನ್ನಡದಲ್ಲೇ ನಿಮ್ಮ ಕನಸು ಖಂಡಿತ ನನಸಾಗುತ್ತದೆ ಎಂದರು.
ಮುಖ್ಯ ಶಿಕ್ಷಕ ಶೇಖರಯ್ಯ ಮಾತನಾಡಿ, ನಾವು ಮೊದಲು ನಮ್ಮ ನಮ್ಮ ಮನೆಯಲ್ಲಿ ಕನ್ನಡದಲ್ಲಿ ಮಾತನಾಡಬೇಕು. ನಾವು ಹೊರರಾಜ್ಯದ ಭಾಷೆಗಳನ್ನು ಬೇಗ ಕಲಿಯುತ್ತೇವೆ. ಆದರೆ, ಅನ್ಯರು ನಮ್ಮ ರಾಜ್ಯಕ್ಕೆ ಬಂದಾಗ ಕಲಿಯುವುದಿಲ್ಲ. ಬದಲಾಗಿ ಅವರ ಜೊತೆ ನಾವೂ ಕೂಡಾ ಕನ್ನಡ ಬಿಟ್ಟು ಅನ್ಯಭಾಷೆಯಲ್ಲಿಯೇ ಸಂಭಾಷಣೆ ಮಾಡುತ್ತೇವೆ. ಇದು ನಿಲ್ಲಬೇಕೆಂದು ತಿಳಿಸಿದರು.
ಜೆ ಎಸ್ ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆ ಶಿಕ್ಷಕರಾದ ಉಮೇಶ, ಸಿದ್ದರಾಜು, ನವೀನಕುಮಾರ, ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.

About Mallikarjun

Check Also

ಎಪಿಎಂಸಿ ಆವರಣದಲ್ಲಿ ಭರದಿಂದಸಿದ್ದತೆಗೊಳ್ಳುತ್ತಿರುವ ಸಹಕಾರಿ ಜಾಗೃತ ಸಮಾವೇಶಕಾರ್ಯಕ್ರಮದ ವೇದಿಕೆ,,, ಮುತುವರ್ಜಿವಹಿಸುತ್ತಿರುವಪೋಲಿಸ್ಇಲಾಖೆ,

The platform of Co-operative Vigilance Conference program is being prepared in full swing in APMC …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.