

The farmers' struggle in the Hanur assembly constituency has entered its 131st day.
ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 131 ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ .

ವರದಿ: ಬಂಗಾರಪ್ಪ .ಸಿ .
ಹನೂರು : ರೈತರ ಜಮೀನುಗಳಿಗಾಗಿ ನೀರು ಸರಬರಾಜು ಮಾಡುವಂತೆ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿಯು ಮಾಡುತ್ತಿರುವ ಹೋರಾಟಕ್ಕೆ ದಿನೆ ದಿನೆ ಕಾವು ಪಡೆದುಕೊಳ್ಳುವಂತೆ ತಿವ್ರಗೊಳಿಸಲಾಗುತ್ತದೆ ,
ಹನೂರು ತಾಲ್ಲೂಕಿನ
ವಡಕೆಹಳ್ಳದಲ್ಲಿ ಕಾವೇರಿ ನದಿಯಿಂದ ದಂಟಳ್ಳಿ ಏತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಅನಿರ್ದಿಷ್ಟ ಅಹೋರಾತ್ರಿ ಧರಣಿ 130 ದಿನ ಮುಗಿದು 131 ನೇ ದಿನಕ್ಕೆ ಕಾಲಿಟ್ಟಿದೆ,
ದಿನಾಂಕ 27 10 2025 ರಿಂದ ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಅಂತರ್ಜಲ ಅಭಿವೃದ್ಧಿಗೆ ಏತನೀರಾವರಿ ಸೌಲಭ್ಯ ಕಲ್ಪಿಸುವಂತೆ ಹಾಗೂ ಇನ್ನುಳಿದ ಸಮಸ್ಯೆಗಳನ್ನು ಬಗೆಹರಿಸುವಂತೆ ರೈತರು, ಮಹಿಳೆಯರು , ಮಕ್ಕಳು,ಅಹೋರಾತ್ರಿ ಧರಣಿ ನಡೆಸುತ್ತಿದ್ದು130ದಿನ ಕಳೆದರೂ ಈ ಭಾಗದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ, ಈ ಭಾಗದ ಶಾಸಕರು ರೈತರ ರೈತರ ಮಧ್ಯೆ ಹೊಡೆದು ಆಳುವ ನೀತಿ ಅನುಸರಿಸುತ್ತಿದ್ದು ಈ ಭಾಗದಲ್ಲಿ ಅಶಾಂತಿಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ ಹೊರತು ಸಂಪೂರ್ಣ ಬರಗಾಲವನ್ನು ಹೊರ ಹಾಕುವ ಯೋಜನೆಗೆ ಸಹಕರಿಸುತ್ತಿಲ್ಲ ಜೊತೆಗೆ ಉಸ್ತುವಾರಿ ಸಚಿವರು ಡಿಪಿಆರ್ ಗೆ ಸೂಚನೆ ನೀಡುವುದಾಗಿ ತಿಳಿಸಿದ್ದರು ಅದು ಕೂಡ ಕಾರ್ಯಗತ ಆಗಿಲ್ಲ ಆದ್ದರಿಂದ ರೈತರೇ ಯೋಜನೆಯ ಸಂಪೂರ್ಣ ವೆಚ್ಚ ಬರಿಸಿ ಬರಗಾಲವನ್ನು ಆಚೆ ಹಾಕಲು ರೈತರು ನಿರ್ಧರಿಸಿರುವುದರಿಂದ ಸರ್ಕಾರ ರೈತರ ಜೊತೆ ಸಹಕರಿಸಬೇಕೆಂದು ಧರಣಿ ನಿರತರು ಸರ್ಕಾರವನ್ನು ಒತ್ತಾಯಿಸಿದ್ದಾರೆ ಧರಣಿಯಲ್ಲಿ ಅರ್ ಅರ್ಪುದರಾಜ್, ಪೌಲ್ ಧರ್ಮ ರಾಜ್,, ಜಾನ್ ಪಾಲ್ ,ಮಲ್ಲೇಶ್,ಚಂದ್ರಪ್ಪ, ಬಸವಣ್ಣ, ಬಸವರಾಜಪ್ಪ,ಮಣಿಮಲ್ಲಮ್ಮ,ಗಾಂದಮ್ಮ ಮಹದೇವಮ್ಮ,ಪಾರ್ವತಿಯಮ್ಮ, ರತ್ನಮ್ಮ, ಚೆನ್ನಬಸಪ್ಪ, ಗುಂಡಣ್ಣ, ಇನ್ನೂ ಅನೇಕ ಜನ ದಂಟಳ್ಳಿ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.
