
ಗಂಗಾವತಿಯ ಕಸಾಪ ಭವನದಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕಾರಿ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿರುವ ಪದಾಧಿಕಾರಿಗಳು

Retired teacher Sahitya Kulkarni receives a message from Kasapa. Executive committee meeting regarding the 9th Taluk Sammelan.

ನಿವೃತ್ತ ಶಿಕ್ಷಕ ಸಾಹಿತಿ ಕುಲಕರ್ಣಿಗೆ ಕಸಾಪದಿಂದ ನುಡಿನಮನ೯ನೇ ತಾಲ್ಲೂಕು ಸಮ್ಮೇಳನದ ಬಗ್ಗೆ ಕಾರ್ಯಕಾರಿ ಸಮತಿ ಸಭೆ
ಗಂಗಾವತಿ: ಕನ್ನಡ ಸಾಹಿತ್ಯ ಪರಿಷತ್ತಿನ ಗಂಗಾವತಿ ತಾಲ್ಲೂಕುಮಟ್ಟದ ೯ನೇ ಸಮ್ಮೇಳನವನ್ನು ಈ ಬಾರಿ ಗ್ರಾಮೀಣ ಪ್ರದೇಶಕ್ಕೆ ಆತಿಥ್ಯ ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಕಸಾಪದ ಗಂಗಾವತಿ ತಾಲ್ಲೂಕು ಅಧ್ಯಕ್ಷ ರುದ್ರೇಶ ರ‍್ಹಾಳ ಹೇಳಿದರು.
ನಗರದ ಕಸಾಪ ಭವನದಲ್ಲಿ ಬುಧವಾರ ಸಂಜೆ ನಡೆದ ನಿವೃತ್ತ ಶಿಕ್ಷಕ ವೆಂಕಟರಾವ್ ಕುಲಕರ್ಣಿ ನಿಧನನಕ್ಕೆ ಕಸಾಪದಿಂದ ನುಡಿ ನಮನ ಸಲ್ಲಿಸಲಾಯಿತು. ಬಳಿಕ ಗಂಗಾವತಿ ತಾಲ್ಲೂಕು ಮಟ್ಟದ ೯ನೇ ಸಮ್ಮೇಳನ ನಡೆಸುವ ಬಗ್ಗೆ ಕಾರ್ಯಕಾರಿ ಮಂಡಳಿಯ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕಸಾಪದ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಈ ಬಾರಿ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಹಳ್ಳಿಗಾಡಿನ ಸೊಗಡಿನಲ್ಲಿ ಕನ್ನಡದ ಕಂಪನ್ನು ಚಲ್ಲೊಣ ಎಂದರು.
ಗ್ರಾಮೀಣ ಪ್ರದೇಶ ರ‍್ಹಾಳ, ಕೇಸರಹಟ್ಟಿ, ಹೇರೂರು, ಬಸಾಪಟ್ಟಣ, ಹಿರೇಬೆಣಕಲ್, ವೆಂಕಟಗಿರಿ ಸೇರಿದಂತೆ ವಿವಿಧ ಗ್ರಾಮಗಳ ಹೆಸರು ಪ್ರಸ್ತಾಪವಾದವು. ಆದರೆ ಯಾವ ಗ್ರಾಮಸ್ಥರು ಮೊದಲಿಗೆ ಆಸಕ್ತಿ ವಹಿಸಿ ಆತಿಥ್ಯ ನೀಡಲು ಮುಂದೆ ಬರುತ್ತಾರೋ ಆ ಗ್ರಾಮಕ್ಕೆ ಸಮ್ಮೇಳನ ನಡೆಸುವ ಅವಕಾಶ ಮಾಡಿ ಕೊಡೋಣ ಎಂಬ ಸಲಹೆ ವ್ಯಕ್ತವಾಯಿತು.
ಎಪ್ರಿಲ್ ಮೊದಲ ವಾರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಆ ಬಳಿಕವೇ ಸಮ್ಮೇಳನ ಆಯೋಜಿಸಬೇಕು. ಎಪ್ರಿಲ್ ಎರಡು ಅಥವಾ ಮೂರನೇ ವಾರದಲ್ಲಿ ಸಮ್ಮೇಳನ ಆಯೋಜಿಸಿದರೆ ಹೆಚ್ಚು ಸೂಕ್ತ ಎಂಬ ಅಭಿಪ್ರಾಯ ಸದಸ್ಯರು ವ್ಯಕ್ತಪಡಿಸಿದರು.
ಈ ಮಧ್ಯೆ ತಾಲ್ಲೂಕು ಮಟ್ಟದ ಸಮ್ಮೇಳನ ಮೇ ತಿಂಗಳಿಗೆ ಹೋದರೆ ಆ ತಿಂಗಳಲ್ಲಿ ಕೊಪ್ಪಳ ಜಿಲ್ಲಾ ಸಮ್ಮೇಳನ, ಆನೆಗೊಂದಿ ಉತ್ಸವದಂತ ಕಾರ್ಯಕ್ರಮ ಸಾಧ್ಯತೆ ಅಧಿಕವಾಗಿರುತ್ತದೆ. ಹೀಗಾಗಿ ದಿನಾಂಕ ಹೊಂದಿಸಿಕೊAಡು ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಯಿತು.
ಒಂದೇ ದಿನಕ್ಕೆ ಸೀಮಿತ:
ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸುವ ಗಂಗಾವತಿ ತಾಲ್ಲೂಕು ಮಟ್ಟದ ೯ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಖರ್ಚು-ವೆಚ್ಚ, ಕಾರ್ಯಕ್ರಮಗಳ ದೃಷ್ಟಿಯಿಂದ ಒಂದು ದಿನಕ್ಕೆ ಮಾತ್ರ ಸೀಮಿತ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಅಲ್ಲದೇ ಸಮ್ಮೇಳನದ ಗೋಷ್ಠಿಗಳಿಗೂ ಕಡಿವಾಣ ಹಾಕಿ ಮಹತ್ವದ ವಿಚಾರ ಗೋಷ್ಠಿಗಳಿಗೆ ಆದ್ಯತೆ ನೀಡುವುದು, ಆಯಾ ಸ್ಥಳೀಯ ಕಲಾವಿದರು, ಸಾಹಿತಿಗಳಿಗೆ ವೇದಿಕೆಯಲ್ಲಿ ಹೆಚ್ಚಿನ ಅವಕಾಶ ನೀಡುವ ಬಗ್ಗೆ ಚರ್ಚಿಸಲಾಯಿತು. ಕಸಾಪದಿಂದ ದತ್ತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಇದೇ ಸಂದರ್ಭದಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಕುಲಕರ್ಣಿಗೆ ನುಡಿ-ನಮನ:
ಇದಕ್ಕೂ ಮೊದಲು ನಿವೃತ್ತ ಶಿಕ್ಷಕ ವೆಂಕಟರಾವ್ ಕುಲಕರ್ಣಿ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಅವರ ಗೌರವಾರ್ಥ ನುಡಿ ನಮನ ಸಲ್ಲಿಸಲಾಯಿತು. ಸಿಪಿಎಸ್, ಹಿರೇಜಂತಕಲ್ ಸೇರಿದಂತೆ ಶಿಕ್ಷಕರಾಗಿ ವೆಂಕಟ್ರಾವ್ ೩೮ ವರ್ಷ ಕಳೆದಿದ್ದರ ಬಗ್ಗೆ ಸಭೆಯಲ್ಲಿ ಸ್ಮರಿಸಲಾಯಿತು.
ಕಸಾಪದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಅಂಗಡಿ ಶ್ರೀನಿವಾಸ ಮಾತನಾಡಿ, ವೆಂಕಟ್ರಾವ್ ಉತ್ತಮ ಸಾಹಿತಿಯಾಗಿದ್ದರು. ನಾಲ್ಕು ಪುಸ್ತಕಗಳ್ನು ರಚಿಸಿದ್ದಲ್ಲದೇ, ದಾಸ ಸಾಹಿತ್ಯ ಪ್ರಚಾರಕರಾಗಿ ಗುರುತಿಸಿಕೊಂಡಿದ್ದರು ಎಂದು ಸ್ಮರಿಸಿದರು.
ಕಸಾಪದ ಪದಾಧಿಕಾರಿಗಳಾದ ಜಿಲ್ಲಾ ಕೋಶಾಧ್ಯಕ್ಷ ರಮೇಶ ಕುಲಕರ್ಣಿ ಮರಳಿ, ತಾಲೂಕಾ ಕೋಶಾಧ್ಯಕ್ಷ ಚಂದ್ರಶೇಖರ ಅಕ್ಕಿ, ಗೌರವ ಕಾರ್ಯದರ್ಶಿ ಶಿವಾನಂದ ತಿಮ್ಮಾಪುರ, ಗೌರವ ಕಾರ್ಯದರ್ಶಿ ರಮೇಶ ಬಾಳಿಕಾಯಿ, ಸಂಘಟನಾ ಕಾರ್ಯದರ್ಶಿ ಶರಣಪ್ಪ ಮಟ್ಟಿ, ಗೌರವ ಸಲಹೆಗಾರ ಶಿವಾನಂದ ಶಿಳ್ಳಿನ್, ಮಂಜುನಾಥ ಕುರಿ ಇತರರಿದ್ದರು.
