Appointment of ministers in charge to study drought conditions: Tangadagi for Koppal district; Rayareddy in charge of Gadag district.

ಬರ ಪರಿಸ್ಥಿತಿ ಅಧ್ಯಯನಕ್ಕೆ ಉಸ್ತುವಾರಿ ಸಚಿವರ ನೇಮಕ- ಕೊಪ್ಪಳ ಜಿಲ್ಲೆಗೆ ತಂಗಡಗಿ: ಗದಗ ಜಿಲ್ಲೆಗೆ ರಾಯರೆಡ್ಡಿಗೆ ಉಸ್ತುವಾರಿ

ಕೊಪ್ಪಳ.: ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿದ್ದು, ಬರಗಾಲ ಪರಿಸ್ಥಿತಿಯ ಆಧ್ಯಯನ ಮಾಡಿ ವರದಿ ಸಲ್ಲಿಸಲು ಮುಖ್ಯಂಮತ್ರಿ ಡಿ.ಕೆ.ಶಿವುಕುಮಾರ ಸೂಚನೆ ನೀಡಿ ತಮ್ಮ ಸಂಪುಟದ ಎಲ್ಲಾ ಸಚಿವರಿಗೆ ಜಿಲ್ಲಾವಾರು ಉಸ್ತುವಾರಿ ಹಂಚಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ನಿನ್ನೆಯಷ್ಟೆ ಇಬ್ಬರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿರುವ ಸಚಿವ ಶಿವರಾಜ ತಂಗಡಗಿ ಅವರಿಗೆ ಕೊಪ್ಪಳ ಜಿಲ್ಲೆ ಮತ್ತು ಸಚಿವ ಬಸವರಾಜ ರಾಯರೆಡ್ಡಿಗೆ ಗದಗ ಜಿಲ್ಲೆ ಉಸ್ತುವಾರಿ ವಹಿಸಿಕೊಟ್ಟಿದ್ದಾರೆ.
ಇಂದು ಬೆಳೆಗ್ಗೆ ಮುಖ್ಯಂಮತ್ರಿಗಳು ಅಧಿಕೃತವಾಗಿ ಜಿಲ್ಲೆಯ ಉಸ್ತುವಾರಿ ಹಂಚಿಕೆ ಮಾಡಿ ಆದೇಶ ಮಾಡಿದ್ದು, ಎಲ್ಲಾ ಸಚಿವರು ತಕ್ಷಣ ಕಾರ್ಯ ಪ್ರವೃತ್ತರಾಗಿ ತಮಗೆ ವಹಿಸಿರುವ ಜಿಲ್ಲೆಗೆ ತಕ್ಷಣ ಭೇಟಿ ನೀಡಿ ಬರಗಾಲ ಪರಿಸ್ಥಿತಿ ಅಧ್ಯಯನ ಮಾಡಿ ಕಂದಾಯ ಸಚಿವ ಖಾತೆ ಹೊಂದಿರುವ ಪರಮೇಶ್ವರ ಅವರಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಪಕ್ಕದ ವಿಜಯನಗರ ಜಿಲ್ಲೆಗೆ ಮತ್ತೊಮ್ಮೆ ಜಮೀರ್ ಅಹ್ಮದ್ ಅವರಿಗೆ ಜವಬ್ದಾರಿ ನೀಡಿದ್ದು, ರಾಯಚೂರ ಜಿಲ್ಲೆಗೆ ಅಜಯಸಿಂಗ್, ಬಳ್ಳಾರಿ ಜಿಲ್ಲೆ ನಾಗೇಂದ್ರ ಅವರಿಗೆ ವಹಿಸಿದ್ದಾರೆ. ಉಳಿದಂತೆ ವಿವಿಧ ಜಿಲ್ಲೆಗಳಿಗೂ ಸಚಿವರನ್ನು ನಿಯುಕ್ತಿ ಮಾಡಲಾಗಿದೆ.
