

ಕೈವಾರ ಸಧ್ಗುರು ಯೋಗಿನಾರೇಯಣರ ಪರಿಚಯ ಹಾಗೂ ಯತೀಂದ್ರ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಸ್ವಾಗತ : ಗೋಪಾಲ ಕೃಷ್ಣ.

Introduction of Kaivara Sadhguru Yoginareyan and welcome to the Yathindra Sri Award ceremony: Gopala Krishna.
ವರದಿ: ಬಂಗಾರಪ್ಪ .ಸಿ .
ಹನೂರು : ಸನಾತನ ಧರ್ಮ ಗುರುಗಳಾದ
ಶ್ರೀ ಕೈವಾರ ಸಧ್ಗುರು ಯೋಗಿನಾರೇಯಣ ಯೋಗಿಗಳ ಪರಿಚಯ ಮತ್ತು ಆತ್ಮಬೋಧೆ ಕುರಿತು ವಿಚಾರ ಸಂಕಿರಣ* ಹಾಗೂ “ಯತೀಂದ್ರ ಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಸರ್ವರು ಆಗಮಿಸಿ ಎಂದು ಹನೂರು ಬಣಜಿಗ /ಬಲಿಜ ತಾಲ್ಲೂಕು ಘಟಕದ ಗೌರವ ಅಧ್ಯಕ್ಷರಾದ ಗೋಪಾಲ ಕೃಷ್ಣ ರವರು ತಿಳಿಸದರು.
ನಂತರ ಮಾತನಾಡಿದ ಅವರು ಇದೇ ತಿಂಗಳು
ದಿನಾಂಕ 22/03/2026 ನೇ ಭಾನುವಾರ ಸಮಯ ಬೆಳಿಗ್ಗೆ 8.30 ಗಂಟೆಗೆ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ
ಸ್ಥಳ : ವರನಟ ಡಾ. ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ,
ಚಾಮರಾಜನಗರ ವಿಶ್ವವಿದ್ಯಾನಿಲಯ ಮತ್ತು ಶ್ರೀ ಯೋಗಿನಾರೇಯಣ ಯತೀಂದ್ರರ ಪ್ರಚಾರ ಸಭಾ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಮೇಲ್ಕಂಡ ಕೈವಾರ ಸಧ್ಗುರು ಯೋಗಿನಾರೇಯಣ ಯೋಗಿಗಳ ಪರಿಚಯ ಮತ್ತು ಆತ್ಮಬೋಧೆ ಕುರಿತು ವಿಚಾರ ಸಂಕಿರಣ ಹಾಗೂ “ಯತೀಂದ್ರ ಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಮತ್ತು ಹನೂರು ತಾಲೂಕು ಎಲ್ಲ ಸಮುದಾಯದವರು ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ತಿಳಿಸಿದರು.
