ಎಸ್‌ಐಆರ್: ಕೊಪ್ಪಳ ಜಿಲ್ಲೆಯಲ್ಲಿ ಆಗಸ್ಟ್ 04 ರವರೆಗೆ 10,40,670 ಗಣತಿ ನಮೂನೆಗಳ ಡಿಜಿಟಲೀಕರಣ

H.Mallikarjun
H.Mallikarjun - Kalyanasiri
1 Min Read

Sir: Digitization of 10,40,670 census samples in Koppal district until August 04

ಎಸ್‌ಐಆರ್: ಕೊಪ್ಪಳ ಜಿಲ್ಲೆಯಲ್ಲಿ ಆಗಸ್ಟ್ 04 ರವರೆಗೆ 10,40,670 ಗಣತಿ ನಮೂನೆಗಳ ಡಿಜಿಟಲೀಕರಣ


ಕೊಪ್ಪಳ ಆಗಸ್ಟ್ 04, (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ಕಾರ್ಯ ಪ್ರಗತಿಯಲ್ಲಿದ್ದು, ಜೂನ್ 30 ರಿಂದ ಆಗಸ್ಟ್ 04 ರ ಸಂಜೆ 06 ಗಂಟೆಯವರೆಗೆ ಒಟ್ಟು 10,40,670 ಗಣತಿ ನಮೂನೆಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಸಂಬAಧಿಸಿದAತೆ ಒಟ್ಟು 11,90,214 ಮತದಾರರಿದ್ದು, ಈ ಎಲ್ಲಾ ಮತದಾರರ ಮುದ್ರಿತವಾಗಿರುವ ಗಣತಿ ನಮೂನೆಗಳನ್ನು ಈಗಾಗಲೇ ಸಂಬAಧಪಟ್ಟ ಬೂತ್ ಮಟ್ಟದ ಅಧಿಕಾರಿಗಳಿಂದ ವಿತರಿಸಲಾಗಿದೆ. ಇಲ್ಲಿವರೆಗೆ ಒಟ್ಟು 10,40,670 ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
Total Views: 0
Share This Article