A request from the farmer’s association to find out the theft in the library room

ವರದಿ : ಬಂಗಾರಪ್ಪ ಸಿ ಹನೂರು .
ಹನೂರು :ರೆಕಾರ್ಡ್ ರೂಮ್ ನಲ್ಲಿ ಕಳ್ಳತನ ವಾಗಿದ್ದರು ಈ ವರೆಗೂ ಯಾವುದೇ ಕ್ರಮ ಜರುಗಿಸದೆ ಇರುವ ಬಗ್ಗೆ ರೈತ ಸಂಘಟನೆಯಿಂದ ತಹಸೀಲ್ದಾರ್ ಗೆ ಮನವಿ ಪತ್ರ.
ದಿನಾಂಕ :09/10/2023 ರಂದು ಅಪರಿಚಿತ ವ್ಯಕ್ತಿ ದ್ವಿ ಚಕ್ರ ವಾಹನದಲ್ಲಿ ಬಂದು ಪಟ್ಟಣದ ಕಂದಾಯ ಇಲಾಖೆಗೆ ಸೇರಿದ ರೆಕಾರ್ಡ್ ರೂಂ ನ ಬಾಗಿಲು ಹೊಡೆದು ದಾಖಲೆ ಯನ್ನ ಕದ್ದಿದ್ದಾರೆ ಎಂದು ತಹಸೀಲ್ದಾರ್ ರವರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಯಾವುದೇ ಕ್ರಮ ಕೈ ಗೊಳ್ಳದೆ ಇರುವುದರಿಂದ ಹಲವಾರು ಅನುಮಾನಗಳು ಇರುತ್ತದೆ.
ತಹಸೀಲ್ದಾರ್ ರವರ ಕಚೇರಿಯಲ್ಲಿ ಭುಗಳ್ಳರು, ಮದ್ಯಾವರ್ತಿಗಳ ಹಾವಳಿ ಹೆಚ್ಚಾಗಿದ್ದು ತಾಲ್ಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಅಧಿಕಾರಿಗಳು ಹೊಂದಾಣಿಕೆ ಇರುವುದು ಕಾರಣವಾಗಿದೆ. ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕೊಠಡಿಯ ಬೀಗ ಹೊಡೆದಿರುವ ಕಳ್ಳ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದರೂ ಇವರಿಗೂ ಯಾವುದೇ ರೀತಿ ಭೇದಿಸಿದೆ ಇರುವುದರಿಂದ, ತಾವು ಉನ್ನತ ಮಟ್ಟದ ತನಿಖೆ ಮಾಡಿಸಿ ಯಾರು ಭಾಗಿಯಾಗಿದ್ದಾರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಹನೂರು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಶಿರೆಸ್ತದಾರ್ ನಾಗೇಂದ್ರ ರವರಿಗೆ ಮನವಿ ಕೊಟ್ಟು, ತಹಸೀಲ್ದಾರ್ ರವರಿಗೆ ತಿಳಿಸಿ, ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಹನೂರು ಘಟಕದ ಅಧ್ಯಕ್ಷ ಅಮ್ಜಾದ್ ಖಾನ್, ಮಾಜಿ ಅಧ್ಯಕ್ಷ ಗೌಡೇಗೌಡ, ರಾಜೇಂದ್ರ, ಸಂಘಟನ ಕಾರ್ಯದರ್ಶಿ ಬಸವರಾಜ್, ಪೆರಮಾಳ್, ಶೌಕತ್, ಸೊಸೈ ಮಾಣಿಕ್ಯಂ, ವೇಲುಸ್ವಾಮಿ,ವೆಂಕಟೇಶ್ ಹಾಗೂ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.