Students shed tears to pay tribute to transferred teachers

ಗಂಗಾವತಿ29 ಬರಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂಟೋಜಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕಳೆದ 16 ವರ್ಷದಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಶಿಕ್ಷಕ ಯತೀಶ್ ಕುಮಾರ್ ಅವರು ವರ್ಗ್ವಣೆ ಗೊಂಡ್ ಹಿನ್ನೆಯಲ್ಲಿ ಶುಕ್ರವಾರ ದಂದು ಶಾಲೆ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು ಎಸ್ ಡಿ ಎಮ್ ಸಿ ಅಧ್ಯಕ್ಷ ಏರಿಸ್ವಾಮಿ ಮುಖ್ಯ ಗುರು ಅನ್ನದಾನಪ್ಪ ಬಸವರಾಜ್ ದ್ಯಾವಾಲ ದ ಹನುಮಂತಪ್ಪ ಮಲ್ಲಪ್ಪ ತಿಪ್ಪಣ್ಣ ಸೇರಿದರು ಯತೀಶ್ ಕುಮಾರ್ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಬಿಳ್ಕೊಡಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ವರ್ಗಾವಣೆಯಿಂದ ಕಣ್ಣೀರು ದಾ ರೆ ಯನ್ನು ಹರಿಸಿದರು ಬಳಿಕ ಶಿಕ್ಷಕ ಯತೀಶ್ ಕುಮಾರ್ ಮಾತನಾಡಿ ಕಳೆದ 16 ವರ್ಷದಿಂದ ತಾವು ಕುಂಟೋಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬರಲಾಗಿದ್ದು ಇಲ್ಲಿನ ಗ್ರಾಮಸ್ಥರ ಪ್ರೀತಿ ವಿಶ್ವಾಸ ಸದಾ ಕಾಲ ನೆನಪಿನಲ್ಲಿಡುವಂತಾಗಿದೆ ಸರ್ಕಾರಿ ನೌಕರರಿಗೆ ವರ್ಗಾವಣೆ ಎಂಬುದು ಅನಿವಾರ್ಯವಾಗಿದ್ದು ಗ್ರಾಮದ ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕಲ್ಪಿಸಿ ಉತ್ತಮ ವಿದ್ಯಾವಂತರನ್ನಾಗಿಸಲು ಮುಂದಾಗ ಬೇಕೆಂದು ಕೋರಿದರು ಜೊತೆಗೆ ಕಣ್ಣೀರು ಸುರಿಸಿದ ವಿದ್ಯಾರ್ಥಿಗಳಿಗೆ ಸಮಾಧಾನಪಡಿಸಿ ತಮ್ಮ ಶಿಕ್ಷಣ ಪಡೆದು ಉನ್ನತ ಮಟ್ಟದ ಸ್ಥಾನಮಾನ ಪಡೆದುಕೊಂಡಾಗ ಕಲಿಸಿದ ಶಿಕ್ಷಕರ ಜೀವನ ಸಾರ್ಥಕವಾಗುತ್ತದೆ ಎಂದು ಮಾ ರ್ಮಿಕವಾಗಿ ಮಾತನಾಡಿದರು ಈ ಸಂದರ್ಭದಲ್ಲಿ ಶರಣಪ್ಪ ಓಬಣ್ಣ ಶಿಕ್ಷಕರಾದ ಪ್ರವೀಣ್ ಕುಮಾರ್ ರವಿಕುಮಾರ್ ವೀರೇಶ ಶ್ರೀದೇವಿ ರಾಧಾ ಇಂದ್ರಪ್ಪ ಸೇರಿದಂತೆ ಶಾಲೆಯ ಹಳೆ ವಿದ್ಯಾರ್ಥಿಗಳು ಶಾಲಾ ಸುಧಾರಣಾ ಸಮಿತಿಯ ಸದಸ್ಯರುಗಳು ಪಾಲ್ಗೊಂಡಿದ್ದರು