Receipt of report by Lokayukta on July 12
ಕೊಪ್ಪಳ ಜುಲೈ 10 (ಕರ್ನಾಟಕ ವಾರ್ತೆ): ಗೌರವಾನ್ವಿತ ಲೋಕಾಯುಕ್ತರು ಬೆಂಗಳೂರು ಹಾಗೂ ಅಪರ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ ಬೆಂಗಳೂರು ಅವರ ಆದೇಶದ ಮೇರೆಗೆ ಕೊಪ್ಪಳ ತಾಲೂಕಿನಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆಯು ಜುಲೈ 12 ರಂದು ಬೆಳಿಗ್ಗೆ 11ಗಂಟೆಗೆ ಕೊಪ್ಪಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.
ಕೊಪ್ಪಳ ತಾಲೂಕು ವ್ಯಾಪ್ತಿಯ ಸಾರ್ವಜನಿಕರಲ್ಲಿ ಯಾರಿಗಾದರೂ ಸರ್ಕಾರಿ ಅಧಿಕಾರಿಗಳಿಂದ ತಮಗೆ ಆಗಬೇಕಾದ ಕೆಲಸಗಳಲ್ಲಿ ವಿಳಂಬವಾಗಿದ್ದರೆ ಅಥವಾ ಅಧಿಕಾರಿಗಳು ನ್ಯಾಯಯುತವಾಗಿ ಮಾಡಿ ಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುತ್ತಿದ್ದರೆ ಅಥವಾ ಲಂಚ ಕೇಳುವುದು ಇತ್ಯಾದಿ ದುರಾಡಳಿತದಲ್ಲಿ ತೊಡಗಿದ್ದರ ಕುರಿತು ದೂರು ಸ್ವೀಕರಿಸಲು ಲೋಕಾಯುಕ್ತರಿಂದ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕರಿಸುವ ಕಾರ್ಯಕ್ರಮ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳ ಸಭೆ ನೆಡೆಸಲು ತೀರ್ಮಾನ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಲೋಕಾಯುಕ್ತರು ಅಧಿಕಾರಿಗಳು ಎಲ್ಲಾ ಇಲಾಖೆಯ ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ನೇರವಾಗಿ ಬಂದು ಸಲ್ಲಿಸಲು ಹಾಗೂ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳೊಂದಿಗೆ ಕೆಲಸ ನೆರವೇರಿಸಿಕೊಳ್ಳಲು ಅಥವಾ ಸ್ಥಳದಲ್ಲಿಯೇ ದೂರು ಅರ್ಜಿಯ ಫಾರಂ ನಂ: 1 & 2 ತೆಗೆದುಕೊಂಡು ದೂರು ನೀಡಲು ಅನುಕೂಲ ಕಲ್ಪಿಸಲಾಗಿದ್ದು, ಸಾರ್ವಜನಿಕರು ಈ ಸಭೆಯ ಸದುಪಯೋಗ ಪಡೆದುಕೊಳ್ಳಲು ಈ ಮೂಲಕ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08539-295200 & 220533 ಅಥವಾ 295833 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಲೋಕಾಯುಕ್ತ ಕೊಪ್ಪಳ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.