Breaking News

ಪುರಾಣಗಳಿಂದ ಜನರಲ್ಲಿ ಸಂಸ್ಕಾರ, ಸಂಸ್ಕೃತಿವೃದ್ಧಿಯಾಗುತ್ತದೆ – ಹನುಮಂತಪ್ಪ ಅಂಡಗಿ

Mythology develops people’s rites and culture – Hanumanthappa Andagi

ಕೊಪ್ಪಳ : ಪುರಾಣಗಳಿಂದ ಜನರಲ್ಲಿ ಸಂಸ್ಕಾರ ಬೆಳೆಯುತ್ತದೆ, ಜನರಲ್ಲಿ ಸಂಸ್ಕಾರ, ಸಂಸ್ಕೃತಿ, ಜ್ಞಾನ ವೃದ್ಧಿಯಾಗುತ್ತದೆ. ಮನುಷ್ಯ ಯಾವಾಗಲೂ ಪುರಾಣ, ಪುಣ್ಯ ಕಥೆಗಳನ್ನು ಕೇಳುತ್ತಿರಬೇಕು. ಇದರಿಂದ ಆಧ್ಯಾತ್ಮದ ಅನುಭವವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಶೈಕ್ಷಣಿಕ ಪ್ರಗತಿ ಆಗದೆ ಇರುವುದು ನೋವಿನ ಸಂಗತಿ. ಶಿಕ್ಷಣದಿಂದ ಮಾತ್ರ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಆದ್ದರಿಂದ ಪಾಲಕರು ಕಡ್ಡಾಯವಾಗಿ ತಮ್ಮ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದರ ಮೂಲಕ ಅವರನ್ನು ಸಾಕ್ಷರರನ್ನಾಗಿ ಮಾಡಬೇಕಾದ ಅಗತ್ಯತೆ ಇದೆ ಎಂದು ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.

ಅವರು ಕೊಪ್ಪಳ ತಾಲೂಕಿನ ಹಲವಾಗಲಿ ಗ್ರಾಮದಲ್ಲಿ ೩೪ನೇ ವರ್ಷದ ದೇವಿ ಪುರಾಣದ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಅವರು ಮುಂದುವರೆದ ಮಾತನಾಡುತ್ತಾ, ಮನುಷ್ಯ ಹಲವಾರು ಮೂಲದಿಂದ ದೊರೆಯುವ ಜ್ಞಾನವನ್ನು ಪಡೆದುಕೊಳ್ಳಬೇಕು. ಜ್ಞಾನದಿಂದ ವಿನಯ ಬರುತ್ತದೆ. ವಿನಯದಿಂದ ಗೌರವ ವೃದ್ಧಿಯಾಗುತ್ತದೆ. ಹಣವಂತರು ದಾನ, ಧರ್ಮ ಮಾಡುವ ಮನೋಭಾವನೆಗಳನ್ನು ಬೆಳೆಸಿಕೊಂಡಾಗ ಮಾತ್ರ ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಲು ಸಾಧ್ಯವಾಗುತ್ತದೆ ಎಂದರು.

ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಜೀವಶಾಸ್ತ್ರ ಉಪನ್ಯಾಸಕರಾದ ವೀರಶೇಖರ ಪತ್ತಾರ ಅವರು ಮಾತನಾಡುತ್ತಾ, ಇಡೀ ಆ ವಿಶ್ವವೇ ಭಗವಂತನ ಆಲಯ. ಇಲ್ಲಿ ಯಾವುದೂ ನಮ್ಮದಲ್ಲ. ಎಲ್ಲದೂ ಆ ಭಗವಂತನಿಂದಲೇ ಬಂದದ್ದು. ಆ ಭಗವಂತನ ನಿಜವಾದ ಪೂಜೆ ಮಾಡಬೇಕಾದರೆ ನಾವು ಏನು ಮಾಡಬೇಕೆಂದರೆ, ನಾವು ಏನೇನು ಕೆಲಸ ಮಾಡುತ್ತಿದ್ದೇವೆಯೋ, ಆ ಕೆಲಸವನ್ನು ನಿಷ್ಠೆಯಿಂದ, ಶ್ರದ್ಧೆಯಿಂದ, ಪ್ರಾಮಾಣಿಕತೆಯಿಂದ ನಮ್ಮ ಮನಮೆಚ್ಚುವ ಹಾಗೆ ಕೆಲಸ ಮಾಡಿದರೆ ಅದು ಭಗವಂತನ ನಿಜವಾದ ಪೂಜೆಯಾಗುತ್ತದೆ. ಅದು ನಿಜವಾದ ನವರಾತ್ರಿ ಉತ್ಸವವಾಗುತ್ತದೆ ಎಂದರು.

ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಇಂಗ್ಲಿಷ್ ಉಪನ್ಯಾಸಕರಾದ ವೀರಣ್ಣ ಜೋಗಿನ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದಪ್ಪ ಹಳ್ಳಿ, ಚೆನ್ನಪ್ಪ ಕೊಂಡಾನಹಳ್ಳಿ, ಸಂತೋಷ ಹಳ್ಳಿ, ಸಾರೆಪ್ಪ ಪೂಜಾರ, ಹಿರಿಯರಾದ ದೊಡ್ಡ ಮೈಲಾರಪ್ಪ ಬಂಗಿ, ದೇವಪ್ಪ ಗುಡಿಸಲರ, ಹನುಮಂತಗೌಡ ಪೊಲೀಸಪಾಟೀಲ, ಶಿವಾನಂದಯ್ಯ ಗುರುವಿನ, ಸಿದ್ದಣ್ಣ ಗುಡಿಗೇರಿ, ಪುರಾಣ ಪ್ರವಚನಕಾರರಾದ ಪಂಡಿತ ವಸಂತ ಆಚಾರ್ಯ ಶಾಸ್ತ್ರಿಗಳು, ಸಂಗೀತ ಕಲಾವಿದರಾದ ಬಸವರಾಜ.ಎನ್.ಹನುಮನಾಳ, ತಬಲವಾದಕರಾದ ಬಸವರಾಜ ಹಂಸಪ್ರಸಾದ ಉಪಸ್ಥಿತರಿದ್ದರು. ಮಂಜುನಾಥ ಗೌಡ್ರು ನಿರೂಪಿಸಿದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.