Breaking News

ವಚನ ಸಾಹಿತ್ಯ ರಕ್ಷಕ ಮಡಿವಾಳಮಾಚಿದೇವರ ಜಯಂತೋತ್ಸವ

Jayanthotsava of Vachana Sahitya Rakshak Madiwala Machideva


ತಿಪಟೂರು : 12ನೇ ಶತಮಾನದ ಬಸವಾದಿ ಶಿವ ಶರಣರಲ್ಲಿ ಅಗ್ರಗಣ್ಯ ದಂಡನಾಯಕನಾಗಿ ವಚನ ಸಾಹಿತ್ಯ ಸಂಪತ್ತನ್ನು ಉಳಿಸಿದ ಶ್ರೇಷ್ಠ ಕೀರ್ತಿ ಶ್ರೀ ಮಡಿವಾಳ ಮಾಚಿದೇವರಿಗೆ ಸಲ್ಲುತ್ತದೆ , ಕಡು ಕಾಯಕಕ್ಕೆ ಹೆಸರಾಗಿ ಭವಿಗಳ ವಸ್ತ್ರಗಳನ್ನು ಮಡಿ ಮಾಡದೆ ವೀರ ಹೋರಾಟ ನಡೆಸಿದ ಮಹಾನ್ ಸಾಧಕರಲ್ಲಿ ಮಡಿವಾಳ ಮಾಚಿದೇವರು ಪ್ರಪ್ರಥಮರುಎಂದು ಜನಪ್ರಿಯ ಶಾಸಕರಾದ ಶ್ರೀ ಷಡಾಕ್ಷರಿ ಅವರು ತಾಲೂಕು ಕಛೇರಿ ಆವರಣದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅಧ್ಯಕ್ಷೀಯ ನುಡಿಗಳಾ ಡಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ನಂ ಶಿವಗಂಗಪ್ಪನವರು ಶ್ರೀ ಮಡಿವಾಳ ಮಾಚಿದೇವರ ಜೀವನ ಚರಿತ್ರೆಯನ್ನು ಎಳೆ ಎಳೆಯಾಗಿ ಅವರ ಜನನ ಬಾಲ್ಯ ಶಿಕ್ಷಣ ಶ್ರಮ ಸಾಧನೆ ಹೀಗೆ ಹಲವಾರು ಉದಾಹರಣೆಗಳೊಂದಿಗೆ ಮಾಚಿದೇವರ ವಚನ ವೈವಿಧ್ಯ ಜ್ಞಾನ ಸಂಪತ್ತನ್ನು ಜನಮನಸೂರೆ ಗೊಳಿಸಿದರು.
ರೈತಕವಿ ಡಾ.ಪಿ ಶಂಕ್ರಪ್ಪ ಬಳ್ಳೇಕಟ್ಟೆ ಅವರು ಮಾಚಿದೇವರ ಹಲವಾರು ವಚನಗಳನ್ನು ವಿಶ್ಲೇಷಿಸಿ, ಸಮಾಜ ಇಂತಹ ಮಹಾನ್ ಸಾಧಕರ ವಚನ ಸಂಪತ್ತನ್ನು ನಮ್ಮ ಮಕ್ಕಳಿಗೂ ಸಹ ಉಣ ಬಡಿಸುವುದರ ಮೂಲಕ ಅಬಲ ಸಮಾಜಗಳು ಬಲಗೊಳ್ಳಬೇಕೆಂದರು ವಚನವಾಚಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ತಾಲೂಕಿನ ತಹಸೀಲ್ದಾರಾದ ಪುನೀತ್ ಕುಮಾರ್ ಸರ್ ಮಾತನಾಡಿ ಈ ಶೋಷಿತ ಸಮುದಾಯಗಳು ಸರ್ಕಾರದ ಸಕಲ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳುವುದರ ಜೊತೆಗೆ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದರ ಮೂಲಕ ಅನ್ಯ ಸಮಾಜಗಳಿಗೆ ಮಾದರಿಯಾಗಬೇಕು ಎಂದರು. ಸಮಾಜದ ಅಧ್ಯಕ್ಷರಾದ ನಿಜಲಿಂಗಪ್ಪನವರು ಮಾತನಾಡಿ ನಾವೆಲ್ಲ ಒಗ್ಗೂಡಿ ಸಮಾಜದ ಏಳಿಗೆಗಾಗಿ ಶ್ರಮಿಸಿದರೆ ಮಾತ್ರ ಜನಾಂಗದ ಏಳಿಗೆ ಸಾಧ್ಯ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದರು.
ಸಮಾಜದಲ್ಲಿ ಸಾಧಕರಾದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿಘ್ನಸಂತೆ ಗುರುಬಸವಯ್ಯ ಅತಿ ಹೆಚ್ಚಿನ ಅಂಕ ಗಳಿಸಿದ ಯಶೋಧ ಹಾಗೂ ಜನಪ್ರಿಯ ಶಾಸಕರಾದ ಕೆ ಷಡಕ್ಷರಿ ಅವರಿಗೂ ಮತ್ತು ಸಹೋದರ ಸಮಾಜದ ಗೋವಿಂದರಾಜು ಹಾಗೂ ಮಲ್ಲಪ್ಪಚಾರ್ ರವರಿಗೂ ಗೌರವ ಸಮರ್ಪಣೆ ಮಾಡಲಾಯಿತು.
ಹೆಚ್ ಜಿ ನರಸಿಂಹಮೂರ್ತಿ ಪ್ರಾರ್ಥಿಸಿ , ಪುನೀತ್ ಸ್ವಾಗತಿಸಿ ಸಮಾರಂಭದಲ್ಲಿ ಸಮಾಜದ ಮುಖಂಡರಾದ ಶಂಕರಲಿಂಗಪ್ಪ.ತ್ರಿಲೋಚನ ಮೂರ್ತಿ, ನೀಲಮ್ಮ,ಮಂಜುನಾಥ, ಗಿರೀಶ್ , ಮಹಿಳಾ ಒಕ್ಕೂಟದ ಸದಸ್ಯರು ಹಾಗೂ ಇನ್ನಿತರ ಸಮಾಜ ಭಾಂದವರು ,ತಾಲ್ಲೂಕು ಕಛೇರಿ ಸಿಬ್ಬಂದಿ ಹಾಜರಿದ್ದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.