Breaking News

ಗುಳೆ ಗ್ರಾಮದಲ್ಲಿ ಮನೆ ಮನೆಗೆ ವಚನ ಜ್ಯೋತಿ ಕಾರ್ಯಕ್ರಮ

Door-to-door vachana jyoti program in Gule village

ಜಾಹೀರಾತು


ಯಲಬುರ್ಗಾ ತಾಲೂಕಿನ ಗುಳೆ ಗ್ರಾಮದಲ್ಲಿ, ರಾಷ್ಟ್ರೀಯ ಬಸವ ದಳ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣದ ವತಿಯಿಂದ, ದಿನಾಂಕ:05/8/2024 ರಿಂದ ಒಂದು ತಿಂಗಳ ನಿರಂತರ ಮನೆ ಮನೆಗ ವಚನ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವು ದಿನಾಲು ಸಂಜೆ 6:30 ರಿಂದ ಪ್ರಾರಂಭಗೊಳ್ಳಲಿದ್ದು, ದಿನಾಂಕ 04/08/2024 ರುಂದು ಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲ ಸಂಗಮದಿಂದ ಜೋತಿ ಹೊತ್ತಿಸಿಕೊಂಡು ಬಂದು , ದಿನಕ್ಕೊಂದು ದಿನ ಮನೆಯಿಂದ ಮನೆಗೆ ತೆರಳಿ, ಕುಟುಂಬದವರನ್ನ ಸಂಗಮಗೊಳಿಸಿಕೊಂಡು, ಮನ ಮುಟ್ಟುವಂತೆ, ಗುರು ಪೂಜೆ, ಲಿಂಗ ಪೂಜೆ ನಂತರ ಬಸವಾದಿ ಶಿವಶರಣರ ಜೀವನ ಚರಿತ್ರೆಯ ಆದಿಯಾಗಿ ವಚನ ವಿಶ್ಲೇಷಣೆ ಮತ್ತು ಶರಣರು ತೋರಿಸಿಕೊಟ್ಟ ಸತ್ಯ ಸುದ್ಧ ಕಾಯಕದ ಪರಿಕಲ್ಪನೆಯ ಕುರಿತಾಗಿ ಉಪನ್ಯಾಸ ನೀಡಿ, ಮೂಢ ನಂಬಿಕೆಗಳಂತ ಮೌಢ್ಯಾಚರಣೆಗಳಿಂದ ಪರಿವರ್ತನೆ ಮಾಡುವ ಕಾರ್ಯ ಈ ವಚನ ಜ್ಯೋತಿ ಕಾರ್ಯಕ್ರಮದ ಉದ್ದೇಶ ಆಗಿದೆ. ಕಾರಣ ಸುತ್ತ ಮುತ್ತಲಿನ ಗ್ರಾಮದ ಶರಣ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರ್ಯಕ್ರಮ ಯಶಸ್ವಿಯಾಗಲು ಕಾರಣೀಭೂತರಾಗಬೇಕೆಂದು ಪತ್ರಿಕೆ ಮಾಧ್ಯಮದ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.
ಸ್ವಾಗತ ಬಯಸುವವರು : ರಾಷ್ಟ್ರೀಯ ಬಸವ ದಳದ ಗೌರವಾದ್ಯಕ್ಷರು ಶರಣ ಬಸವನಗೌಡ ಪೋಲಿಸ್ ಪಾಟೀಲ್ ನಿವೃತ್ತ ಪಿ. ಎಸ್ ಐ ಮತ್ತು ಅಧ್ಯಕ್ಷರು ಪದಾಧಿಕಾರಿಗಳು👏
✍️ ಬಸವರಾಜ ಎಸ್ ಹೂಗಾರ ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ

About Mallikarjun

Check Also

ಗುರುಪೌರ್ಣಮಿ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ: ಟಿ.ರಾಮಕೃಷ್ಣ

Special religious program on the occasion of Gurupournami: T. Ramakrishna ಗಂಗಾವತಿ, ಜು.08: ಹೊರವಲಯದ ಆನೆಗೊಂದಿ ರಸ್ತೆಯಲ್ಲಿರುವ …

Leave a Reply

Your email address will not be published. Required fields are marked *