Satyasodha News Koppala.

ಈ ಹಿರೇವಂಕಲಕುಂಟಾ ಪ್ರಾಥಮಿಕಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರ ಆಯ್ಕೆ
ವರದಿ : ಪಂಚಯ್ಯ ಹಿರೇಮಠ.
ಕೊಪ್ಪಳ : ಭಾನುವಾರದಂದು ಯಲಬುರ್ಗಾ ತಾಲೂಕಿನ ಹಿರೇ ವಂಕಲಕುಂಟಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ನೂತನವಾಗಿ ನಿರ್ದೇಶಕರಾಗಿ ಆಯ್ಕೆಗೊಂಡರು.
ಹಿರೇ ವಂಕಲಕುಂಟಾದ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ವಿರೇಶ ಬಸನಗೌಡ ಗೌಡ, ಖಲೀಲಸಾಬ್ ಶ್ಯಾಮೀದಸಾಬ್ ಗುಬ್ಬಿ, ವೆಂಕಟೇಶ ರಾಮಣ್ಣ ಈಳಿಗೇರ್, ಬಾಲನಗೌಡ ನಾಗನಗೌಡ ಮಾಲಿಪಾಟೀಲ್, ನಿರುಪಾದೆಪ್ಪ ಹನಮಪ್ಪ ದಾಸರ (ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ) ಮಂಜುನಾಥ ಹನುಮಪ್ಪ ಬೇವೂರ (ಪರಿಶಿಷ್ಟ ಪಂಗಡ ಎಸ್ ಟಿ ಮೀಸಲು ಕ್ಷೇತ್ರ), ಕುಂಟೆಪ್ಪ ಶಿವಪ್ಪ ಕಂಬಳಿ( ಹಿಂದುಳಿದ ಆ ವರ್ಗ), ಅಶೋಕ ಈಶ್ವರಪ್ಪ ಹರ್ಲಾಪೂರ( ಹಿಂದುಳಿದ ಬ ವರ್ಗ ಮೀಸಲು ಕ್ಷೇತ್ರ), ಈರಮ್ಮ ಆದಪ್ಪ ಗೌಡ್ರ (ಮಹಿಳಾ ಮೀಸಲು ಕ್ಷೇತ್ರ), ಫಾತೀಮಾ ಬೇಗಂ ಮುನಿರಸಾಬ್ ಕುಷ್ಟಗಿ (ಮಹಿಳಾ ಮೀಸಲು ಕ್ಷೇತ್ರ), ಹನುಮೇಶ ಚಿಣಗಿ, ಮಾಹಾಂತೇಶ ಹಡಪದ ಸಾಮಾನ್ಯ ಕ್ಷೇತ್ರಕ್ಕೆ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಾಬುಸಾಬ್ ಲೈನಂದಾರ್ ತಿಳಿಸಿದ್ದಾರೆ.
ವಿಜಯೋತ್ಸವ:
ವೇಳೆ ನೂತನವಾಗಿ ಕಾಂಗ್ರೆಸ್ ಬೆಂಬಲಿತವಾಗಿ ನಿರ್ದೇಶಕರ ಆಯ್ಕೆ ಹಿನ್ನೆಲೆ ಸಡಗರ ಸಂಭ್ರಮದಿಂದ ಕಾರ್ಯಕರ್ತರು, ಮುಖಂಡರು ಪಕ್ಷದ ಅಭಿಮಾನಿಗಳು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶ ಹಳ್ಳಿ, ಮುಖಂಡ ಅಪ್ಪಣ್ಣ ಜೋಷಿ, ಕಾಂಗ್ರೆಸ್ ಕಾರ್ಯಕರ್ತರಾದ ಮಂಜುನಾಥ ಸಜ್ಜನ್, ಕಾಸೀಂಸಾಬ್ ಗುಬ್ಬಿ, ಮಂಜುನಾಥ ಬಂಗಾರಿ, ಲೆಂಕೆನಗೌಡ ಚಿಕ್ಕವಂಕಲಕುಂಟಾ, ನಾಗರಜಾ ಓಜನಹಳ್ಳಿ, ನಿಂಗಪ್ಪ ತೊಣಿಸಿಹಾಳ್, ಅಜ್ಜಪ್ಪ ಹರ್ಲಾಪೂರ, ಬಸವರಾಜ ಸಜ್ಜನ್ (ಸಾಹುಕಾರ್), ನಜೀರಮೀಯಾ ಕುಷ್ಟಗಿ, ಹುಸೇನಸಾಬ್ ಬಳಿಗಾರ್, ಇಮಾಮಸಾಬ್ ಅತ್ತಾರ್.ಹನ್ಮಂತ ಓಜನಹಳ್ಳಿ, ಕೇಶವ ಜ್ಞಾನಮೋಟೆ ಹಾಗೂ ಇನ್ನಿತರರು ಇದ್ದರು.